ಕನ್ನಡಪ್ರಭ ವಾರ್ತೆ ಮಂಗಳೂರುಕರ್ಣಾಟಕ ಬ್ಯಾಂಕ್ ಭಾರತದ ಪ್ರಮುಖ ಸಾಮಾನ್ಯ ವಿಮಾ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂ. ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಸಂದರ್ಭ ಮಾತನಾಡಿದ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಲೊಂಬಾರ್ಡ್‌ನೊಂದಿಗಿನ ನಮ್ಮ ಸಹಯೋಗದಿಂದ ವಿಮಾ ಪರಿಹಾರಗಳಲ್ಲಿ ನೆರವಾಗಲಿದೆ. ಗ್ರಾಹಕರಿಗೆ ತಮ್ಮ ವಿಮಾ ಪಾಲಿಸಿಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಡೆಯಲು ಅನುಕೂಲವಾಗಲಿದೆ ಎಂದಿದ್ದಾರೆ.
ಐಸಿಐಸಿಐ ಲೊಂಬಾರ್ಡ್‌ನ ಅಧಿಕಾರಿ ಆನಂದ್ ಸಿಂಘಿ ಮಾತನಾಡಿ, ಕರ್ಣಾಟಕ ಬ್ಯಾಂಕ್‌ನೊಂದಿಗೆ ಪಾಲುದಾರಿಕೆಗೆ ಸಂತೋಷವಾಗುತ್ತಿದೆ. ಗ್ರಾಹಕರಿಗೆ ಸಮಗ್ರ ವಿಮಾ ಪೋರ್ಟ್‌ಫೋಲಿಯೊವನ್ನು ಪ್ರಸ್ತುತಪಡಿಸಲು ಅವಕಾಶವನ್ನು ಒದಗಿಸುತ್ತದೆ. ನಮ್ಮ ಬೆಸ್ಪೋಕ್ ರಿಸ್ಕ್ ಮ್ಯಾನೇಜ್‌ಮೆಂಟ್ ಪರಿಹಾರಗಳು ಭಾರತದಾದ್ಯಂತ ಗ್ರಾಹಕರ ವಿಭಾಗಗಳ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತವೆ ಎಂದು ನಮಗೆ ವಿಶ್ವಾಸವಿದೆ ಎಂದರು.