ಕೆಬಿಎನ್ ಆಸ್ಪತ್ರೆ: ಶುಶ್ರೂಷೆಯರ ದಿನಾಚರಣೆ

KannadaprabhaNewsNetwork |  
Published : May 20, 2024, 01:37 AM IST
ಡಾ. ಸಿದ್ಧಲಿಂಗ ಚೆಂಗಟಿ, ನರ್ಸ್‌ಗಳಿಗೆ ಪ್ರಮಾಣ ವಚನ ಬೋಧಿಸುತ್ತಿರುವುದು. ಡಾ.ಸಿದ್ದೇಶ ಸಿರವಾರ,ಡಾ. ರಾಧಿಕಾ, ಡಾ ಅಲಿ ಪಟೇಲ ಮತ್ತು ಶೋಭಾ ರಾಣಿ ಇದ್ದರು. | Kannada Prabha

ಸಾರಾಂಶ

ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಮಹತ್ವವನ್ನು ವಿವರಿಸಿದರು. ವೈದ್ಯರು ಚಿಕೆತ್ಸೆ ನೀಡಿದ ನಂತರ ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಮುಖ್ಯ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸ್ಥಳೀಯ ಸುಪ್ರಸಿದ್ಧ ಕೆಬಿನ್ ವಿಶ್ವ ವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ ವಿಭಾಗದಿಂದ ಸೋಮವಾರ ಸುಶ್ರೂಷೆಯರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಬಿಎನ್‌ ವಿವಿಯ ಮೆಡಿಕಲ ಡೀನ್‌ ಡಾ. ಸಿದ್ದೇಶ ಸಿರವಾರ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಮಹತ್ವವನ್ನು ವಿವರಿಸಿದರು. ವೈದ್ಯರು ಚಿಕೆತ್ಸೆ ನೀಡಿದ ನಂತರ ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಮುಖ್ಯ. ಅವರ ಸಹನೆ ಒಂದು ಸವಾಲೇ ಸರಿ ಎಂದು ಅವರ ಸಮರ್ಪಣೆಯನ್ನೂ ಶ್ಲಾಘಸಿದರು. ಅವರು ಯಾವುದೇ ಆಸ್ಪತ್ರೆಯ ಗುಣಮುಟ್ಟವನ್ನು ನಿರ್ಧಾರ ಮಾಡುವಲ್ಲಿ ಅವರ ಕೊಡುಗೆ ಹೊಂದಿದ್ದಾರೆ ಎಂದರು.

ನಾಡೋಜ ಪ್ರೊ. ಪಿ.ಎಸ್. ಶಂಕರ ಇವರು ದಾದಿಯರ ಕಾರ್ಯ ವೈಖರಿ ಬಗ್ಗೆ ತಿಳಿವಳಿಕೆ ನೀಡಿದರು. ರೋಗಿಗಳು ಗುಣ ಮುಖರಾಗಲು ಸುಶ್ರೂಷೆಯರ ಸೇವೆಯಿಂದ ಸಾಧ್ಯ. ರೋಗಿಗಳ ಚೇತರಿಕೆ ಅವರ ಪರಮ ಉದ್ದೇಶ. ಅವರದು ನೋಬಲ ಪ್ರೊಫೆಷನ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯದಲ್ಲಿ ದಾದಿಯರಿಗೆ ಡಾ ಸಿದ್ಧಲಿಂಗ ಚೆಂಗಟಿ ಪ್ರಮಾಣ ವಚನ ಭೋಧಿಸಿದರು. ನರ್ಸಗಳಿಗೆ ಸಸ್ಯಗಳನ್ನು ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ನರ್ಸಿಂಗ ಸೂಪರಿಂಟೆಂಡೆಂಟ್ ಶೋಭಾ ರಾಣಿ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ನರ್ಸಿಂಗ ಮೇಲ್ವಿಚಾರಕ ಡಾ. ಮುಜಾಹಿದ ಅಲಿ ವಂದಿಸಿದರು.

ಕೆಬಿಎನ ಆಸ್ಪತ್ರೆಯ ಸೆಮಿನಾರ ಹಾಲನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಬಿಎನ ಆಡಳಿತಧಿಕಾರಿ ಮತ್ತು ಸಹಾಯಕ ಕುಲಸಚಿವರಾದ ಡಾ ರಾಧಿಕಾ, ಡಾ ಸುಜಾತಾ, ಡಾ ಶಿಲ್ಪಾ ಮತ್ತು ಡಾ. ಸಚಿನ ಶಹಾ ಮುಂತಾದವರು ಸೇರಿದಂತೆ 120 ಜನ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ