ಉಕ ಆರ್ಥಿಕ ಬೆಳವಣಿಗೆಯಲ್ಲಿ ಕೆಸಿಸಿ ಬ್ಯಾಂಕ್‌ ಪಾತ್ರ ಹಿರಿದು

KannadaprabhaNewsNetwork |  
Published : Apr 04, 2026, 02:00 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ಸಿ.ಎಸ್‌. ಪಾಟೀರ ಅವರಿಗೆ‘ಅನುಪಮ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಸಹಕಾರಿ ಸಂಘಗಳ ಉದ್ದೇಶ ‘ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ, ನಾವು ನಿಮಗಾಗಿ ನೀವು ನಮಗಾಗಿ’ ಎಂಬ ಸಹಕಾರಿ ತತ್ವದಂತೆ ಕಾರ್ಯನಿರ್ವಹಿಸುತ್ತವೆ. ಮೊದಲು ಕೆಸಿಸಿ ಬ್ಯಾಂಕ್ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿತ್ತು. ನಂತರ ಅವಿಭಜಿತ ಧಾರವಾಡ ಜಿಲ್ಲೆಗೆ ಸೀಮಿತವಾಯಿತು.

ಧಾರವಾಡ:

ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಲು 1905ರಲ್ಲಿ ಭಾರತದಲ್ಲೇ ಮೊಟ್ಟ ಮೊದಲ ಪತ್ತಿನ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕು ಕಣಗಿನಹಾಳದಲ್ಲಿ ಸಿದ್ಧನಗೌಡ್ರು ಪಾಟೀಲರಿಂದ ಸ್ಥಾಪನೆಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಕೆಸಿಸಿ ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ‘ಪ್ರೊ. ಎಸ್.ಎಸ್. ದೇಸಾಯಿ ದತ್ತಿ’ಯಲ್ಲಿ ‘ಅನುಪಮ ಸಹಕಾರಿ ಪ್ರಶಸ್ತಿ’ ಪ್ರದಾನ ಹಾಗೂ ‘ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಕೆಸಿಸಿ ಬ್ಯಾಂಕ್ ಪಾತ್ರ ವಿಷಯ ಕುರಿತು ಮಾತನಾಡಿದರು.

ಸಹಕಾರಿ ಸಂಘಗಳ ಉದ್ದೇಶ ‘ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ, ನಾವು ನಿಮಗಾಗಿ ನೀವು ನಮಗಾಗಿ’ ಎಂಬ ಸಹಕಾರಿ ತತ್ವದಂತೆ ಕಾರ್ಯನಿರ್ವಹಿಸುತ್ತವೆ. ಮೊದಲು ಕೆಸಿಸಿ ಬ್ಯಾಂಕ್ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿತ್ತು. ನಂತರ ಅವಿಭಜಿತ ಧಾರವಾಡ ಜಿಲ್ಲೆಗೆ ಸೀಮಿತವಾಯಿತು. ಮೊದಲು ಬಾಡಿಗೆ ಕಟ್ಟಡದಲ್ಲಿದ್ದ ಬ್ಯಾಂಕ್ ತದನಂತರ ಸುಸಜ್ಜಿತ ಸ್ವಂತ ಕಟ್ಟಡ ಹೊಂದಿತು ಎಂದರು.

ಅನುಪಮ ಸಹಕಾರಿ ಪ್ರಶಸ್ತಿ ಸ್ವೀಕರಿಸಿದ ಸಿ.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ಒಂದು ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದಾಗ ನಾವೆಲ್ಲಾ ಸಂಘಟಿತ ಹೋರಾಟ ಮಾಡಿ ಸರ್ಕಾರದಿಂದ ₹ 68 ಕೋಟಿ ನೆರವು ಪಡೆದು ರೈತರ, ಠೇವಣಿದಾರರ ಹಿತ ರಕ್ಷಿಸಲು ಸಾಧ್ಯವಾಯಿತು. ಸಮಾಜ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಶಾಂತವೀರಪ್ಪ ಮೆಣಸಿನಕಾಯಿ, ವಿ.ಎಸ್. ಬಸವನಾಳ ಹಾಗೂ ರಾಮಜಾಧವ ಹೆಸರಿನಿಂದ ಕವಿವ ಸಂಘ ಸ್ವಯಂ ಪ್ರೇರಿತವಾಗಿ ಸಂಘದಲ್ಲಿ ದತ್ತಿ ಸ್ಥಾಪಿಸಿ ಸ್ಮರಿಸುವಂತಾಗಬೇಕೆಂದರು. ಡಾ. ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸರೋಜಿನಿ ದೇಸಾಯಿ, ಶಂಕರ ಕುಂಬಿ, ಡಾ. ಸಂಜೀವ ಕುಲಕರ್ಣಿ ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಶಿವಾನಂದ ಹೂಗಾರ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ