ನಾಳೆ ಕೆಸಿಸಿಐ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 31, 2026, 02:15 AM IST
5456465 | Kannada Prabha

ಸಾರಾಂಶ

ವಾಣಿಜ್ಯೋದ್ಯಮ ಸಂಸ್ಥೆಯ 98ನೇ ಸಂಸ್ಥಾಪಕರ ದಿನಾಚರಣೆ ಆ. 1ರಂದು ಸಂಜೆ 4 ಗಂಟೆಗೆ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆರು ಜನ ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಮಾಡಲಾಗುತ್ತಿದೆ.

ಹುಬ್ಬಳ್ಳಿ:

ವಾಣಿಜ್ಯೋದ್ಯಮ ಸಂಸ್ಥೆಯ 98ನೇ ಸಂಸ್ಥಾಪಕರ ದಿನಾಚರಣೆ ಆ. 1ರಂದು ಸಂಜೆ 4 ಗಂಟೆಗೆ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆರು ಜನ ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಹಾಗೂ ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರಮನ್ ಶಂಕರಣ್ಣ ಮುನವಳ್ಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, 1928ರ ಆ. 1ರಂದು ಬಾಗಲಕೋಟೆಯಲ್ಲಿ ಮುರಗಯ್ಯಸ್ವಾಮಿ ಜಂಗಿನ ಅವರ ನಾಯಕತ್ವದಲ್ಲಿ ಸಂಸ್ಥೆ ಸ್ಥಾಪಿಸಿದ್ದು ಅಲ್ಲಿಂದ ಈ ವರೆಗೆ ವ್ಯಾಪಾರಸ್ಥರ, ಸಾಮಾಜಿಕ ನ್ಯಾಯ, ಕೈಗಾರಿಕೋದ್ಯಮ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.

ವಾಣಿಜ್ಯ ರತ್ನ: ಸಂಸ್ಥಾಪನ ದಿನಾಚರಣೆ ಅಂಗವಾಗಿ 6 ಜನ ಸಾಧಕ ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಮೆ.ಎಬಲ್ ಡಿಜೈನ್ ಆ್ಯಂಡ್‌ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೆ.ಲಿ. ಗೋವಿಂದ ವಿ. ಜೋಶಿ, ಬ್ಯಾಡಗಿಯ ಮೆ. ಮಾಗನೂರ ಆ್ಯಂಡ್ ಕಂಪನಿಯ ರಾಜಶೇಖರ ಎಸ್. ಮಾಗನೂರ, ನಂದಿಕೇಶ್ವರ ಮೆ. ಕುಮಾರೇಶ್ವರ ಆಯಿಲ್‌ ಇಂಡಸ್ಟ್ರೀಜ್‌ನ ಎಂ.ಬಿ. ಹಂಗರಗಿ, ಹುಬ್ಬಳ್ಳಿಯ ಮೆ. ಕಾಟ್‌ಸೀಡ್ಸ್ ಕಾರ್ಪೋರೇಶನ್‌ನ ಶಾಂತಿಲಾಲ ಓಸ್ತವಾಲ್‌, ಹುಬ್ಬಳ್ಳಿಯ ಮೆ. ರಾಜಗುರು ಬುಕ್ ಮ್ಯಾನ್ಯುಫ್ಯಾಕ್ಚರ್ಸ್‌ ಕಾಂತಿಲಾಲ ಎಂ. ಪುರೋಹಿತ, ಸವಣೂರನ ಮೆ. ಪಿ.ವಿ. ಸಿಂಧೂರನ ಸುಮಂತ ಆರ್. ಸಿಂಧೂರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಅನ ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಹೊಸಪೇಟೆಯ ಕಿರ್ಲೋಸ್ಕರ್‌ ಫೆರಸ್ ಇಂಡಸ್ಟ್ರೀಜ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಗುಮಾಸ್ತೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುವರು. ಅಂದು ಮಧ್ಯಾಹ್ನ 3 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.