ಗ್ರೀಸ್‌ನಲ್ಲಿ ಕೆಸಿಡಿ ಪ್ರವಾಸೋದ್ಯಮ ವಿಭಾಗ ಪ್ರಾತಿನಿಧ್ಯ

KannadaprabhaNewsNetwork |  
Published : Sep 23, 2026, 02:15 AM IST
ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಪ್ರತಿನಿಧಿಗಳು ಯುರೋಪಿಯನ್ ಯೂನಿಯನ್‌ನ ಎರಾಸ್ಮಸ್ ಯೋಜನೆಯಡಿ ಗ್ರೀಸ್‌ನ ಅಥೇನ್ಸ್‌ನಲ್ಲಿರುವ ಪಿರೇಯಸ್ ವಿಶ್ವವಿದ್ಯಾಲಯದಲ್ಲಿ ನಡೆದ ಆರು ದಿನಗಳ ಅಂತಾರಾಷ್ಟ್ರೀಯ ಅಧ್ಯಯನ ಸಭೆಯಲ್ಲಿ ಭಾಗವಹಿಸಿದ ಸಂದರ್ಭ. | Kannada Prabha

ಸಾರಾಂಶ

ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಯುರೋಪಿಯನ್ ಯೂನಿಯನ್‌ನ ಎರಾಸ್ಮಸ್ ಯೋಜನೆಯಡಿ ಗ್ರೀಸ್‌ನ ಅಥೇನ್ಸ್‌ನಲ್ಲಿರುವ ಪಿರೇಯಸ್ ವಿಶ್ವವಿದ್ಯಾಲಯದಲ್ಲಿ ನಡೆದ ಆರು ದಿನಗಳ ಅಂತಾರಾಷ್ಟ್ರೀಯ ಅಧ್ಯಯನ ಸಭೆಯಲ್ಲಿ ಭಾಗವಹಿಸಿ ಕವಿವಿ ಕೀರ್ತಿಗೆ ಮತ್ತೊಂದು ಗರಿ ಮೂಡಿಸಿದೆ.

ಧಾರವಾಡ:

ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಯುರೋಪಿಯನ್ ಯೂನಿಯನ್‌ನ ಎರಾಸ್ಮಸ್ ಯೋಜನೆಯಡಿ ಗ್ರೀಸ್‌ನ ಅಥೇನ್ಸ್‌ನಲ್ಲಿರುವ ಪಿರೇಯಸ್ ವಿಶ್ವವಿದ್ಯಾಲಯದಲ್ಲಿ ನಡೆದ ಆರು ದಿನಗಳ ಅಂತಾರಾಷ್ಟ್ರೀಯ ಅಧ್ಯಯನ ಸಭೆಯಲ್ಲಿ ಭಾಗವಹಿಸಿ ಕವಿವಿ ಕೀರ್ತಿಗೆ ಮತ್ತೊಂದು ಗರಿ ಮೂಡಿಸಿದೆ.

ಅಧ್ಯಯನ ಸಭೆಯಲ್ಲಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಎಂಟು ದೇಶಗಳ 16 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರತಿನಿಧಿಗಳ ಸಭೆ, ದುಂಡು ಮೇಜಿನ ಚರ್ಚೆ, ಪವಿತ್ರ ಕ್ಷೇತ್ರಗಳ ಭೇಟಿ ಹಾಗೂ ಉನ್ನತ ಶಿಕ್ಷಣ, ಧಾರ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಪರಂಪರೆ, ಡಿಜಿಟಲ್ ನಾವೀನ್ಯತೆ ಮತ್ತು ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು ವಿಚಾರ ವಿನಿಮಯ ನಡೆಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪರವಾಗಿ ಪ್ರೊ. ಜಗದೀಶ ಕಿವುಡನವರ ಹಾಗೂ ಡಾ. ಸುಷ್ಮಾ ಮಳಿಗಿ ಭಾರತದ ಧಾರ್ಮಿಕ ಪ್ರವಾಸೋದ್ಯಮದ ತಾಂತ್ರಿಕ ಬೆಳವಣಿಗೆಯನ್ನು ಕೇಂದ್ರವಾಗಿಟ್ಟುಕೊಂಡು ಸಂಶೋಧನಾ ಪ್ರಬಂಧ ಮಂಡಿಸಿದರು.

ತಿರುಪತಿ ದೇವಸ್ಥಾನದಲ್ಲಿ ತಂತ್ರಜ್ಞಾನ ಬಳಕೆ, ಕೃತಕ ಬುದ್ಧಿಮತ್ತೆ, ಯಾಂತ್ರಿಕ ನಿಯಂತ್ರಣ ವ್ಯವಸ್ಥೆ, 3D ತಂತ್ರಜ್ಞಾನ ಹಾಗೂ ಜನಸಂದಣಿ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಅವರು ಪ್ರಸ್ತುತಪಡಿಸಿದರು. ಬನಾರಸ್ ಹಿಂದೂ ವಿವಿ ಪ್ರತಿನಿಧಿಗಳೂ ಭಾರತ ಪ್ರತಿನಿಧಿಸಿದರು. ದುಂಡುಮೇಜಿನ ಸಭೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮದ ನಾವೀನ್ಯತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಸ್ಮಾರ್ಟ್ ತೀರ್ಥಯಾತ್ರೆಯ ಅನುಭವಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಗ್ರೀಸ್ ಪ್ರವಾಸೋದ್ಯಮ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಮೈರಾನ್ ಫ್ಲೋರಿಸ್ ಅವರು ವಿವಿಧ ದೇಶಗಳ ಧಾರ್ಮಿಕ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಅನುಭವಗಳ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.

ಅಧ್ಯಯನದ ಭಾಗವಾಗಿ ಗ್ರೀಸ್‌ನ ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳಿಗೂ ಭೇಟಿ ನೀಡಲಾಯಿತು. ಭಾರತದ ಧಾರ್ಮಿಕ ಪ್ರವಾಸೋದ್ಯಮದ ಕುರಿತು ನಡೆದ ಚರ್ಚೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಸ್ವದೇಶ್ ದರ್ಶನ, ಡಿಜಿಟಲ್ ಪ್ರವಾಸೋದ್ಯಮ ಮಿಷನ್, ಬೌದ್ಧ, ರಾಮಾಯಣ, ಕೃಷ್ಣ, ಸೂಫಿ ಹಾಗೂ ಚಾರ್‌ಧಾಮ್ ಯಾತ್ರೆ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ವಿವಿಗೆ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ವಿಜೃಂಭಣೆಯಿಂದ ಕೃಷ್ಣಮೃಗ ಅಭಯಾರಣ್ಯ ಸುವರ್ಣ ಮಹೋತ್ಸವಕ್ಕೆ ನಿರ್ಧಾರ