ಮುಂಡಗೋಡ: ೧೦೫ ವರ್ಷ ಇತಿಹಾಸ ಹೊಂದಿರುವ ಉತ್ತರಕನ್ನಡ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕ್ ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಕೆನರಾ, ಸಿಂಡಿಕೇಟ್ ಹಾಗೂ ಸ್ಟೇಟ್ ಬ್ಯಾಂಕ್‌ಗಳಾವೂ ನಮ್ಮ ಬ್ಯಾಂಕ್ ಅಲ್ಲ, ಬದಲಾಗಿ ದೇಶದ ಬ್ಯಾಂಕ್‌ಗಳು, ಆವ್ಯಾವು ರೈತರಿಗೆ ಶೂನ್ಯ ಹಾಗೂ ೩ರ ಬಡ್ಡಿ ದರದಲ್ಲಿ ಸಾಲ ನೀಡುವುದಿಲ್ಲ. ರೈತರನ್ನು ಸಮಾನತೆಯಿಂದ ಕಾಣುವ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ಮಾತ್ರ ರೈತರ ಸಬಲಿಕರಣಕ್ಕಾಗಿ ಶೂನ್ಯ ಹಾಗೂ ೩ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಹಾಗಾಗಿ ಇದು ರೈತರ ಬ್ಯಾಂಕು. ಹಾಗಾಗಿ ಇಲ್ಲಿ ಸಾಲ ಪಡೆಯುವುದರೊಂದಿಗೆ ಸ್ಥಿರ ಠೇವಣಿ ಕೂಡ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ ಎಲ್.ಟಿ. ಪಾಟೀಲ, ಪ್ರಮೋದ ಡವಳೆ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಶಶಿಧರ ಪರ್ವಾಪುರ, ಇಂದೂರ ಸಹಕಾರಿ ಸಂಘದ ಅಧ್ಯಕ್ಷ ಶಿವಾಜಿ ದೇವಿಕೊಪ್ಪ, ಪ್ರಕಾಶ ಗುನಗಿ, ಬಾಬು ಸುಂಕೇರಿ, ಕೃಷ್ಣ ಹಿರೇಹಳ್ಳಿ, ಜ್ಞಾನದೇವ ಗುಡಿಯಾಳ, ಸಿದ್ದಪ್ಪ ಹಡಪದ, ಕೆಂಜೋಡಿ ಗಲಬಿ, ದೇವು ಜಾನು ಪಾಟೀಲ, ಎಚ್.ಎಂ. ನಾಯ್ಕ, ಧರ್ಮರಾಜ ನಡಗೇರಿ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ನಡಗೇರಿ ಸ್ವಾಗತಿಸಿದರು.