ನಡೆಯದ ಕೆಡಿಪಿ ಸಭೆ: ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ಸದಸ್ಯರ ಪ್ರತಿಭಟನೆ

KannadaprabhaNewsNetwork |  
Published : Jan 30, 2025, 12:31 AM IST
29ಎಚ್ಎಸ್ಎನ್4 : ತಾಲೂಕು ಪಂಚಾಯ್ತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕೆಡಿಪಿ ಸದಸ್ಯರು. | Kannada Prabha

ಸಾರಾಂಶ

ಅಧಿಕಾರಿಗಳನ್ನು ಪ್ರಶ್ನಿಸಲು ಹೋದರೆ ಸ್ಥಳೀಯ ಶಾಸಕರೇ ಉತ್ತರವನ್ನು ನೀಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಯಾರು ಶಾಸಕರು ಯಾರು ಎಂಬುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರ್ಕಾರಿ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಕೆಡಿಪಿ ನಾಮನಿರ್ದೇಶಕರ ಸಭೆಯನ್ನು ಮಾಡಬೇಕು. ಆದರೆ ನಾಲ್ಕು ತಿಂಗಳಾದರೂ ಕೆಡಿಪಿ ತ್ರೈಮಾಸಿಕ ಸಭೆ ಮಾಡದೆ ಇರುವ ಹಿನ್ನೆಲೆ ತಾಲೂಕು ಪಂಚಾಯಿತಿ ಆವರಣದಲ್ಲಿ ಕೆಡಿಪಿ ಸದಸ್ಯರಿಂದ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಗುರುಪ್ರಸಾದ್ ಮಾತನಾಡಿ, ಸರ್ಕಾರಿ ಆದೇಶದ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಕೆಡಿಪಿ ನಾಮನಿರ್ದೇಶಕರ ತ್ರೈಮಾಸಿಕ ಸಭೆಯನ್ನು ಮಾಡಬೇಕು. ಆದರೆ ಈಗಾಗಲೇ 4 ತಿಂಗಳಾದರೂ ಕೆಡಿಪಿ ಸಭೆಯನ್ನು ಮಾಡಿರುವುದಿಲ್ಲ. ಜೊತೆಗೆ ಏಳು ದಿನಗಳ ಮುಂಚಿತವಾಗಿ ಕೈಪಿಡಿಯನ್ನು ಸಹ ಸದಸ್ಯರಿಗೆ ನೀಡಬೇಕು.

ಆದರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿಗಳು ಮತ್ತು ಅಧ್ಯಕ್ಷರಾದ ಸ್ಥಳೀಯ ಶಾಸಕರಾದ ಸಿಎನ್ ಬಾಲಕೃಷ್ಣರವರು ಸಭೆಗೆ ಒಂದು ದಿನ ಮುಂಚಿತವಾಗಿ ಕೆಡಿಪಿ ಸದಸ್ಯರಿಗೆ ತಿಳಿಸುವರು. ಜೊತೆಗೆ ಸಭೆಯ ದಿನ ಕೈಪಿಡಿಯನ್ನು ನೀಡಿ ಸಭೆಯಲ್ಲಿ ಚರ್ಚಿಸಲು ಅವಕಾಶವನ್ನು ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಜೊತೆಯಲ್ಲಿ ಅಧಿಕಾರಿಗಳ ಗೈರು ಹಾಜರಾತಿ ಹೆಚ್ಚಾಗಿದೆ. ಆದರೆ ಅಧಿಕಾರಿಗಳನ್ನು ಪ್ರಶ್ನಿಸಲು ಹೋದರೆ ಸ್ಥಳೀಯ ಶಾಸಕರೇ ಉತ್ತರವನ್ನು ನೀಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಯಾರು ಶಾಸಕರು ಯಾರು ಎಂಬುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.ಇದೇ ಸಂದರ್ಭದಲ್ಲಿ ಕೆಡಿಪಿ ನಾಮ ನಿರ್ದೇಶಕ ಸದಸ್ಯ ಮಹೇಶ್ ಮಾತನಾಡಿ, ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಬಂದಂತಹ ಹಣವು ದುರುಪಯೋಗವಾಗಿದೆ. 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸರ್ಕಾರದಿಂದ ಬಂದಂತ ಹಣದಲ್ಲಿ ಶೇ.25 ರಷ್ಟು ಅಂಗವಿಕಲರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇಂತಿಷ್ಟು ಹಣವನ್ನು ಮೀಸಲಿಡಬೇಕು. ಆದರೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪಂಚಾಯಿತಿಯ ಪಿಡಿಒಗಳು ಈ ಹಣವನ್ನು ಬೇರೆ ಖರ್ಚುಗಳಿಗೆ ಬಳಸಿಕೊಂಡು ಈ ಹಣವನ್ನು ಕೂಡ ದುರುಪಯೋಗಪಡಿಸಿಕೊಂಡಿದ್ದಾರೆ.

ಜೊತೆಯಲ್ಲಿ ತಾಲೂಕು ಪಂಚಾಯಿತಿಯ ಪಿಡಿಓಗಳು ಮನೆ ಈ ಸ್ವತ್ತು ಮತ್ತು ನಿವೇಶನ ಈ ಸ್ವತ್ತು ಮಾಡಲು ಪ್ರತಿ ಖಾತೆಗೆ 20 ರಿಂದ 50 ಸಾವಿರ ರು. ಬೇಡಿಕೆಯನ್ನು ಇಟ್ಟು ಹಣ ನೀಡದೆ ಇದ್ದವರ ಮನೆ ಮತ್ತು ನಿವೇಶನಗಳನ್ನು ಈ ಸ್ವತ್ತು ಮಾಡದೆ ಈ ದಾಖಲಾತಿ ಸರಿ ಇಲ್ಲ ಎಂದು ಸತಾಯಿಸುತ್ತಿರುವ ದೃಶ್ಯಾವಳಿ ನಮ್ಮ ಕಣ್ಣು ಮುಂದೆ ಇವೆ. ತಾಲೂಕು ಪಂಚಾಯಿತಿಯ ಕೆಡಿಪಿ ಆಡಳಿತ ಅಧಿಕಾರಿಗಳ ಇಂದಿನ ಸಭೆಯಲ್ಲಿ ಬಹಳಷ್ಟು ಹಣ ದುರುಪಯೋಗವಾಗಿದೆ. ಈ ಸಭೆಯ ಅಧಿಕಾರಿಗಳು ಬೇರೆ ಜಿಲ್ಲೆಗೆ ವರ್ಗಾವಣೆ ಆದ ನಂತರವೂ ಕೂಡ ಆ ಅಧಿಕಾರಿಗಳ ಬಳಿ ತೆರಳಿ ಕೆಲವು ದಾಖಲಾತಿಗಳಿಗೆ ಅನುಮೋದನೆಯನ್ನು ಸಹ ಪಡೆದು ಸಹಿಯನ್ನು ಕೂಡ ಮಾಡಿಸಿದ್ದಾರೆ.ಈ ಮೇಲ್ಕಂಡ ಎಲ್ಲಾ ವಿಷಯಗಳಿಗೆ ಕೂಡಲೇ ಉತ್ತರ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ. ಆದ್ದರಿಂದ ಕೆಡಿಪಿ ಸಭೆಯನ್ನು ಇನ್ನು 10 ದಿನಗಳ ಒಳಗಾಗಿ ಕೆಡಿಪಿ ಸಭೆಯನ್ನು ಘೋಷಣೆ ಮಾಡಬೇಕು. ಇಲ್ಲ ಹೋದ ಪಕ್ಷದಲ್ಲಿ ಉಗ್ರ ಹೋರಾಟದ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಮಧುಸೂದನ್. ಯೋಗೇಶ್. ಸಮ್ಮಿ ಉಲ್ಲಾ ಇನ್ನು ಮುಂತಾದವರು ಹಾಜರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ