ಬ್ಯಾಡಗಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ಮಕ್ಕಳು ಪಾಲಕರಿಗೆ ಹೆಚ್ಚು ಮೋಸವೆಸಗುತ್ತಿದ್ದಾರೆ. ಅಲ್ಲದೇ ದೇಶದೆಲ್ಲೆಡೆ ಅತೀ ಹೆಚ್ಚು ಅಪರಾಧ ಪ್ರಕರಣಗಳು ಮೊಬೈಲ್ ಬಳಕೆದಾರರಿಂದ ನಡೆಯುತ್ತಿದ್ದು, ಇದರಿಂದ ಮಕ್ಕಳನ್ನು ದೂರವಿಡದಿದ್ದರೇ ಪಾಲಕರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಸಿದರು.
ಶಿಕ್ಷಣ ಯಾರೊಬ್ಬರ ಸೊತ್ತಲ್ಲ: ಶಿಕ್ಷಣ ಕೇವಲ ವ್ಯಕ್ತಿಗಳ ಸೊತ್ತಲ್ಲ, ಶ್ರಮ ವಹಿಸಿ ಅಭ್ಯಾಸ ನಡಸಿದ್ದೇ ಆದಲ್ಲಿ ಶಿಕ್ಷಣವು ನಿಮ್ಮನ್ನು ಎಲ್ಲ ರೀತಿಯಿಂದ ಬಲಗೊಳಿಸಲಿದೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು, ಐಎಎಸ್, ಐಪಿಎಸ್ ಪ್ರಮುಖ ಹುದ್ದೆಗಳನ್ನು ಪಡೆದುಕೊಳ್ಳುವ ಮೂಲಕ ಕಲ್ಲೇದೆವರ ಗ್ರಾಮ ಹಾಗೂ ಶಾಲೆಗೆ ಕೀರ್ತಿ ತಂದು ಕೊಡುವಂತೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಿ:ಉದ್ಯಮಿ ನಾಗರಾಜ ಆನವೇರಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಅತ್ಯಂತ ಪ್ರಮುಖವಾಗಿದ್ದು, ಮಕ್ಕಳ ಭವಿಷ್ಯಕ್ಕೆ ಬುನಾದಿ ಇದ್ದಂತೆ. ಹೀಗಾಗಿ ಶಿಕ್ಷಕರು ತಮ್ಮ ಲಕ್ಷ್ಯವನ್ನು ಅತ್ತಿಇತ್ತ ಹರಿಸದೇ ತಮ್ಮ ಜವಾಬ್ಧಾರಿಗಳನ್ನು ನಿಭಾಯಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಅಂದಾಗ ಮಾತ್ರ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮುಖ್ಯಶಿಕ್ಷಕ ಕೆ.ಎಂ. ಸೋಳಂಕಿ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ವಿಜಯಭರತ ಬಳ್ಳಾರಿ, ಎಸ್‌ಡಿಎಂಸಿ ಅಧ್ಯಕ್ಷ ಕಲ್ಲಪ್ಪ ತೋಟದ, ಉಪಾಧ್ಯಕ್ಷೆ ಸುನೀತಾ ಅಳಲಗೇರಿ, ಗ್ರಾ.ಪಂ.ಅಧ್ಯಕ್ಷ ಪ್ರವೀಣ ಹೊನ್ನಪ್ಪನವರ, ಕಲ್ಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಬಿ. ಬಸವರಾಜ, ಶಿಕ್ಷಣ ಸಂಯೋಜಕ ಕೆ.ಎಂ. ಮೋಹನಕುಮಾರ, ಕೃಷ್ಣಮೂರ್ತಿ ದಾಮೋದರ, ಚಂದ್ರಶೇಖರ ಕರದಹಳ್ಳಿ, ಈರಣ್ಣ ಹಿರೇಮಠ, ಹನಮಂತಪ್ಪ ಅಳಲಗೇರಿ, ಬಸವರಾಜ ಮಾಸ್ತಣಿ, ರಾಮಣ್ಣ ಅಳಲಗೇರಿ, ಕುಮಾರ ಚೂರಿ, ಕುಮಾರ ಹುಲ್ಮನಿ, ಬಸವರಾಜ ಮುದಕಮ್ಮನವರ, ಜಗದೀಶ ಹೊನ್ನಪ್ಪನವರ, ಮಂಜುನಾಥ ಭರಡಿ, ನಾಗಲಿಂಗ ತಳವಾರ, ಕುಮಾರ ಕಾಯಕದ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.