ಬಿತ್ತನೆ ಬೀಜ ಖರೀದಿಸಿದ ರಸೀದಿ ಜೋಪಾನವಾಗಿಟ್ಟುಕೊಳ್ಳಿ

KannadaprabhaNewsNetwork |  
Published : May 29, 2025, 02:41 AM IST
ಯರಗಟ್ಟಿ ಕೃಷಿ ಕೇಂದ್ರದಲ್ಲಿ ಶಾಸಕ ವಿಶ್ವಾಸ ವೈದ್ಯ ಬಿತ್ತನೆ ಬೀಜ ವಿತರಿಸಿದರು. | Kannada Prabha

ಸಾರಾಂಶ

ಬಿತ್ತನೆ ಬೀಜ ಖರೀದಿಸಿದ ರಸೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಬಿತ್ತನೆ ಬೀಜ ಖರೀದಿಸಿದ ರಸೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸಲಹೆ ನೀಡಿದರು.

ಪಟ್ಟಣದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ 2025-26ನೇ ಸಾಲಿನ ರಿಯಾಯತಿ ದರದ ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಗಾರು ಹಂಗಾಮು ಪ್ರಾರಂಭವಾಗಿದೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಆದ್ಯತೆ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಬಿತ್ತನೆ ಕಾರ್ಯ ಚುರುಕುಗೊಳ್ಳುವ ಮುನ್ನ ಕೃಷಿ ಇಲಾಖೆಯಲ್ಲಿ ರಿಯಾಯತಿ ದರದಲ್ಲಿ ಸೊಯಾಬಿನ್, ತೊಗರಿ, ಹೆಸರು ಗೊಬ್ಬರ ಬಿತ್ತನೆ ಬೀಜಗಳು ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ ಮಾತನಾಡಿ, ರೈತರು ಶಾಂತಿಯುತವಾಗಿ ಬಿತ್ತನೆ ಬೀಜ ಪಡೆಯಬೇಕು. ಬೇಡಿಕೆಗೆ ಅನುಗುಣವಾಗಿ ಬೀಜ ವಿತರಣೆ ಮಾಡಲಾಗುವುದು. ರೈತರು ಉತ್ತಮವಾಗಿ ಬೆಳೆ ಬೆಳೆದರೇ ಮಾತ್ರ ಸಮಾಜದಲ್ಲಿ ಜನರು ಉತ್ತಮ ಜೀವನ ನಡೆಸಲು ಸಾಧ್ಯ. ಅದಕ್ಕೆ ನಮ್ಮ ಭಾರತ ದೇಶದಲ್ಲಿ ರೈತ ದೇವೋಭವ ಸರ್ವೇ ಜನ ಸುಖಿನೋ ಭವಂತು ಎನ್ನುತ್ತಾರೆ. ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆಯಬೇಕು. ನಾವಿವತ್ತು ತುತ್ತು ಅನ್ನ ತಿನ್ನೋ ಮೊದಲು ನಿಸ್ವಾರ್ಥ ಜೀವ ರೈತನನ್ನೇ ನೆನೆಯಲೇಬೇಕು. ಅನ್ನದಾತನ ಕೈ ಕೆಸರಾದರೇ ಮಾತ್ರ ನಮ್ಮ ಬಾಯಿ ಮೊಸರಾಗೋಕೆ ಸಾಧ್ಯ ಎಂದರು.

ಕೃಷಿಯಲ್ಲಿ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲೂ ಏರಿಳಿತ ಇದ್ದೇ ಇರುತ್ತೆ. ಕಷ್ಟ-ಸುಖ, ಸಮಸ್ಯೆ, ಸವಾಲುಗಳು ಇರುತ್ತವೆ. ನಾವು ಆ ಸವಾಲುಗಳನ್ನ ಎಷ್ಟು ಬುದ್ಧಿವಂತಿಕೆಯಿಂದ ಆ ಸವಾಲುಗಳನ್ನು ಸ್ವೀಕಾರ ಮಾಡುತ್ತೇವೆ ಎಂದು ತಿಳಿಸಿದರು.ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ, ತಹಸೀಲ್ದಾರ್‌ ಎಂ.ವಿ.ಗುಂಡಪ್ಪಗೋಳ, ಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸನವರ, ಪಂಚಾಯತಿ ನಾಮನಿರ್ದೇಶಿತ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ಸಲಿಂಬೇಗ ಜಮಾದಾರ, ಪ್ರಕಾಶ ವಾಲಿ, ರಾಮಚಂದ್ರ ಪಟಾತ, ಬಸವರಾಜ ಗುರನ್ನವರ, ನಾಗಪ್ಪ ಕರಲಿಂಗಪ್ಪನವರ, ರಮೇಶ ಕೋಟೂರ, ರೈತ ಉತ್ಪಾದನೆ ಸಂಘದ ಕಾರ್ಯದರ್ಶಿ ಮನೋಹರ ದಿನ್ನಿಮನಿ, ರೈತರಾದ ಶಿವಾನಂದ ಕರಿಗೋಣ್ಣವರ, ಗಿರೇಪ್ಪ ಗಂಗರಡ್ಡಿ, ಯಕ್ಕೇರೆಪ್ಪ ತಳವಾರ, ಯಮನಪ್ಪ ಮಾಳಗಿ, ರಂಗಪ್ಪ ಗಂಗರಡ್ಡಿ,ಶಿವಲಿಂಗ ಬಿರಾದಾರಪಾಟೀಲ, ರೈತ ಸಂಪರ್ಕ ಕೇಂದ್ರ ಸಿಬ್ಬಂದಿ, ಇದ್ದರು.

PREV

Recommended Stories

ಮಾಲೇಗಾಂವ ಸ್ಫೋಟ ತೀರ್ಪು; ಸಂಭ್ರಮಾಚರಣೆ
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ: ಪ್ರಮೋದ ಮುತಾಲಿಕ