ಸಮರ ಕಲೆ ಸ್ನಾತಕೋತ್ತರ ವಿಷಯವಾಗಿ ಕಲಿಸಿ: ಹಾಸನ ರಘು

KannadaprabhaNewsNetwork |  
Published : May 29, 2025, 02:35 AM IST
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಹಾಸನ ರಘು ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಶ್ವವಿದ್ಯಾಲಯ ಅವಕಾಶ ನೀಡಿದಲ್ಲಿ ಕಾರ್ಯಾಗಾರದ ರೂಪದಲ್ಲಿ ಮೂರು ತಿಂಗಳ ಸಮರ ಕಲೆಯನ್ನು ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು.

ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕಲಾವಿದರು, ಕಲೆಗೆ ಆದ್ಯತೆ ನೀಡುತ್ತಿದೆ. ಅಧ್ಯಯನ, ಕಲಾ ಪ್ರದರ್ಶನಗಳು ನಡೆಯುತ್ತಿವೆ. ಸಮರ ಕಲೆಯನ್ನು ಸ್ನಾತಕೋತ್ತರ ವಿಷಯವಾಗಿ ಕಲಿಸಬೇಕು. ಮಹಿಳೆಯರು, ಪುರುಷರು ಆತ್ಮರಕ್ಷಣೆಗೆ ಸಮರ ಕಲೆ ಸಹಕಾರಿಯಾಗಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಹಾಸನ ರಘು ತಿಳಿಸಿದರು.ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.ವಿಶ್ವವಿದ್ಯಾಲಯ ಅವಕಾಶ ನೀಡಿದಲ್ಲಿ ಕಾರ್ಯಾಗಾರದ ರೂಪದಲ್ಲಿ ಮೂರು ತಿಂಗಳ ಸಮರ ಕಲೆಯನ್ನು ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು ಎಂದರು.ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಮೌಲ್ಯ ಮತ್ತು ಸಾಂಸ್ಕೃತಿಕ ಸತ್ಯದ ಹಾದಿಯಲ್ಲಿ ಕಲೆ ಮತ್ತು ಸಾಹಿತ್ಯ ಜೀವಂತವಾಗಿರುತ್ತವೆ. ಈ ಸೇವೆ ಮಾಡುತ್ತ ಬಂದಿರುವ ಹಾಸನ ರಘು ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕಲಾ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಸಿಕ್ಕಿರುವ ಗೌರವವಾಗಿದೆ ಎಂದರು.ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಹಾಸನ ರಘು ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಚಲನಚಿತ್ರಗಳಿಗೆ ಸಾಹಸ ಕಲಾವಿದರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ, ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅವರು ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.ಜುಲಿಯಾನಾ ಫರ್ನಾಂಡಿಸ್, ಮೇರಿ ಗರಿಬಾಜೆ ಅವರು ಸಿದ್ದಿ ಜನಪದ ಗೀತೆ ಮೂಲಕ ಹಾಸನ ರಘು ಅವರನ್ನು ಕುರಿತಂತೆ ಹಾಡು ಪ್ರಸ್ತುತಪಡಿಸಿದರು, ಈ ಸಂದರ್ಭದಲ್ಲಿ ಹಿರಿಯ ಸಂಶೋಧನಾಧಿಕಾರಿಗಳಾದ ಡಾ. ಕೆ. ಪ್ರೇಮಕುಮಾರ್ ಇತರರು ಇದ್ದರು. ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು.ಡಿಪ್ಲೊಮಾ ಕೋರ್ಸ್‌ ಪ್ರವೇಶಾವಕಾಶ

ಬ್ಯಾಡಗಿ: ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು 2025- 26ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶಾವಕಾಶಕ್ಕೆ ಆಹ್ವಾನಿಸಿದೆ.ಸಿವಿಲ್ ಎಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್‌ ಕೋರ್ಸ್‌ಗಳು ಲಭ್ಯವಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.ಸುಸಜ್ಜಿತ ಕಟ್ಟಡ ಮತ್ತು ಸುಂದರ ಕ್ಯಾಂಪಸ್, ಅತಿ ಕಡಿಮೆ ವೆಚ್ಚದಲ್ಲಿ ಡಿಪ್ಲೊಮಾ ವ್ಯಾಸಂಗ ಸ್ಮಾರ್ಟ್ ಕ್ಲಾಸ್‌ಗಳು ಮತ್ತು ಅಚ್ಚುಕಟ್ಟಾದ ಪ್ರಯೋಗಾಲಯ ಲಭ್ಯವಿದ್ದು, ಕರ್ನಾಟಕ ಎಲ್ಎಂಎಸ್‌ನಲ್ಲಿ ಆನ್‌ಲೈನ್ ಕ್ಲಾಸ್ ವೀಕ್ಷಣೆ ಸೌಲಭ್ಯ, ಅನುಭವಿ ಉಪನ್ಯಾಸಕ ವೃಂದ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು.

ಸರ್ಕಾರದ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಪ್ರತಿಷ್ಠಿತ ಕಂಪನಿಗಳಲ್ಲಿ ತರಬೇತಿ ಮತ್ತು ಉದ್ಯೋಗಾವಕಾಶ ಡಿಪ್ಲೊಮಾ ವ್ಯಾಸಂಗದ ನಂತರ ಸ್ವಾವಲಂಬಿ ಉದ್ಯಮಿಯಾಗುವ ಅವಕಾಶ, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಹಾಗೂ 2ನೇ ವರ್ಷದ ಎಂಜಿನಿಯರಿಂಗ್ ಉನ್ನತ ವ್ಯಾಸಂಗಕ್ಕೆ ಪ್ರವೇಶಾವಕಾಶ ಸಿಗಲಿದೆ ಎಂದು ಪ್ರಾಚಾರ್ಯ ಘಂಟಿಸಿದ್ದಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ. 9481450478 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''