ಮನೆ ಮೇಲೆ ಪಕ್ಷಿಗಳಿಗೆ ನೀರು, ಧಾನ್ಯ ಇಡಿ

KannadaprabhaNewsNetwork |  
Published : Mar 26, 2025, 01:33 AM IST
ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ನಟರಾಜ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಇಡುವ ಕುರಿತು ತಿಳುವಳಿಕೆ ನೀಡಿದರು. | Kannada Prabha

ಸಾರಾಂಶ

ಮ್ಮ ಮಾಳಿಗೆಗಳ ಮೇಲೆ, ಕಾಂಪೌಂಡ್ ಗಳ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಡುವ ಕೆಲಸಮಾಡೋಣ

ಕನ್ನಡಪ್ರಭ ವಾರ್ತೆ ಇಂಡಿ

ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮಾನವೀಯತೆ ದೃಷ್ಟಿಯಿಂದ ನಾವೆಲ್ಲರೂ ಪಕ್ಷಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರು ಇಡುವ ಕೆಲಸ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಇಂಡಿ ತಾಲೂಕು ಯೋಜನಾಧಿಕಾರಿ ನಟರಾಜ್‌ ಹೇಳಿದರು.

ತಾಲೂಕಿನ ಚಿಕ್ಕಬೇವನೂರ ವಲಯದ ತಡವಲಗಾ ಕಾರ್ಯಕ್ಷೇತ್ರದ ಬಂದಗೋಕುಲ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ಪ್ರಾಣಿ, ಪಕ್ಷಿ ಸಂಕುಲ ಉಳಿವಿಗಾಗಿ ಜೀವಜಲ ನೀಡಿ ಅಭಿಯಾನದಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಪಕ್ಷಿಗಳು ನೀರಿಗಾಗಿ ಅಲೆದಾಡುತ್ತವೆ. ಪಕ್ಷಿಗಳಿಗೆ ಹುಡುಕಿದರೂ ಗುಟುಕು ನೀರು ದೊರೆಯದ ಬೇಸಿಗೆ ಕಾಲದಲ್ಲಿ ಅವುಗಳ ಜೀವ ಉಳಿವಿಗಾಗಿ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ಇಲ್ಲವೆ ಮನೆಯ ಹಿತ್ತಲುಗಳಲ್ಲಿ ಇರುವ ಗಿಡ, ಮರಗಳಲ್ಲಿ ನೀರಿನ ತೊಟ್ಟೆ ಇಟ್ಟು ನೀರು ಧಾನ್ಯ ಹಾಕಬೇಕು ಎಂದರು. ಪ್ರಾಣಿ, ಪಕ್ಷಿಗಳ ಉಳಿವಿಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬೇಸಿಗೆಯಲ್ಲಿ ಮಧ್ಯಾಹ್ನ ಹೊರಗೆ ಬರಲಾರದಷ್ಟು ಬಿಸಿಲು ಪ್ರಖರವಾಗಿರುತ್ತದೆ. ನಮ್ಮ ನಮ್ಮ ಮಾಳಿಗೆಗಳ ಮೇಲೆ, ಕಾಂಪೌಂಡ್ ಗಳ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಡುವ ಕೆಲಸಮಾಡೋಣ ಎಂದರು.

ಮಣ್ಣಿನ ಪಾತ್ರೆಗಳಲ್ಲಿ ಪಕ್ಷಿಗಳಿಗೆ ನೀರು ಹಾಕಿಡಿ, ಬೇಸಿಗೆಯಲ್ಲಿ ನೀರಿನ ಅಭಾವ ಎಲ್ಲ ಕಡೆ ಕಾಣುತ್ತೇವೆ. ಕೆರೆ, ಹಳ್ಳ ಕೊಳ್ಳಗಳು ಬತ್ತುವುದರಿಂದ ಪಕ್ಷಿಗಳು ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತವೆ. ಅದಕ್ಕೆ ನಾವು ಇಟ್ಟ ನೀರಿನಿಂದ ಪಕ್ಷಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ.

ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾನವೀಯ ದೃಷ್ಟಿಯಿಂದ ನಾವೆಲ್ಲರೂ ಪಕ್ಷಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರು ಇಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರೀ ಎಂ.ಎಸ್‌, ವಲಯ ಮೇಲ್ವಿಚಾರಕಿ ಅಶ್ವೀನಿ ಸಂಗೋಳ್ಳಿ, ಸೇವಾ ಪ್ರತಿನಿಧಿ ಜ್ಯೋತಿ ಇಂಡಿ, ಒಕ್ಕೂಟದ ಅಧ್ಯಕ್ಷೆ ಸುರೇಖಾ ಹೂಗಾರ ಹಾಗೂ ಸಂಘದ ಸದಸ್ಯರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ