ರೈತರ ಜೀವನಾಡಿ ಅಯ್ಯನಕೆರೆ ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ: ರಾಜಮ್ಮ

KannadaprabhaNewsNetwork |  
Published : Aug 03, 2025, 11:45 PM IST
3ಕೆಕೆಡಿಯು1 | Kannada Prabha

ಸಾರಾಂಶ

ಕಡೂರು ತಾಲೂಕಿನ ಅಯ್ಯನಕೆರೆ ರೈತರ ಜೀವನಾಡಿ ಹಾಗು ಪ್ರವಾಸಿಗರ ಸ್ವರ್ಗ. ಅದನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ರಾಜಮ್ಮ ಹೇಳಿದರು.

ಕೋಡಿ ಬಿದ್ದ ಅಯ್ಯನಕೆರೆಗೆ ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಅಯ್ಯನಕೆರೆ ರೈತರ ಜೀವನಾಡಿ ಹಾಗು ಪ್ರವಾಸಿಗರ ಸ್ವರ್ಗ. ಅದನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ರಾಜಮ್ಮ ಹೇಳಿದರು.

ಸಖರಾಯಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ಕೋಡಿ ಬಿದ್ದ ಪ್ರಯುಕ್ತ ಗ್ರಾಪಂನಿಂದ ಬಾಗಿನ ಅರ್ಪಿಸಿ ಮಾತನಾಡಿದರು. 5 ವರ್ಷಗಳಿಂದ ಸತತ ಈ ಕೆರೆ ತುಂಬಿ ಈ ಭಾಗದ 16 ಹಳ್ಳಿಗಳ ಜನರ ಮೊಗದಲ್ಲಿ ಹರ್ಷ ಮೂಡಿಸಿದೆ. ಎಲ್ಲರ ಸ್ವತ್ತಾದ ಕೆರೆಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ ಎಂದರು.

ಈ ನಿಟ್ಟಿನಲ್ಲಿ ಗ್ರಾಪಂ ರೂಪಿಸಿರುವ ವಿಶೇಷ ಯೋಜನೆ ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. ಪ್ರವಾಸಿಗರು ತಾವು ತಂದ ತಿಂಡಿ ಕವರು ಮತ್ತು ನೀರಿನ ಬಾಟಲಿಗಳನ್ನು ಕಸದ ಬುಟ್ಟಿಗಳಲ್ಲಿ ಹಾಕಬೇಕು ಎಂದರು. ಗ್ರಾಪಂ ಸದಸ್ಯ ಗಣೇಶಗೌಡ ಮಾತನಾಡಿ, ಬಲ್ಲಾ ಳೇಶ್ವರ ಸ್ವಾಮಿ ಕೃಪೆಯಿಂದ ಕೆರೆ ತುಂಬುತ್ತಿದೆ. ದೇವಾಲಯ ಸುತ್ತ ಚೈನ್ ಲಿಂಕ್ ಮೆಷ್ ಹಾಕಲು ತೀರ್ಮಾನಿಸಿದ್ದು, ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಲು ಕನಿಷ್ಠ ಹಣ ನಿಗಧಿಪಡಿಸಿ ಮೂಲ ಸೌಕರ್ಯ ಒದಗಿಸಲು ಗ್ರಾಪಂ ಸಭೆಯಲ್ಲಿ ನಿರ್ಣಯ ಮಾಡಲಾಗುವುದು ಎಂದರು. ಪಿಡಿಒ ಲತಾ ಮಾತನಾಡಿ, ಅಯ್ಯನಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಅನೇಕ ಅಭಿವೃದ್ಧಿ ಕಾರ್ಯ ಆಗುತ್ತಿವೆ. ಗ್ರಾಪಂನಿಂದ ಆಗುವ ಕೆಲಸವನ್ನು ಸದಸ್ಯರ ಸಹಕಾರದಿಂದ ಮಾಡಲಾಗುವುದು. ಎಲ್ಲರೂ ಸ್ವಚ್ಛತೆ ಕಾಪಾಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ತಾರಾ, ಸದಸ್ಯರಾದ ಶಕುಂತಲಾ, ಗೀತಾ, ರತ್ನಪ್ರಭಾ, ದೊಡ್ಡಮ್ಮ, ಸುಮನ್, ಚೇತನ್, ಅರುಣ, ಸರೋಜಮ್ಮ, ಜರೀನಾಬಿ, ಜಯಪ್ಪ,ಕಾವ್ಯ, ಲೊಕೇಶ್ , ಬಲ್ಲಾಳೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಸ್. ಪಿ. ಲೊಕೇಶ್ , ಸಾರ್ವಜನಿಕರು ಹಾಜರಿದ್ದರು. 3ಕೆಕೆಡಿಯು1.

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ಕೋಡಿ ಬಿದ್ದ ಪ್ರಯುಕ್ತ ಗ್ರಾಪಂನಿಂದ ಬಾಗಿನ ಅರ್ಪಿಸಲಾಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...