ಕೆಂಭಾವಿ: ರಾಯರ 355ನೇ ಆರಾಧನಾ ಮಹೋತ್ಸವ

KannadaprabhaNewsNetwork |  
Published : Sep 01, 2026, 01:15 AM IST
ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಕೆಂಭಾವಿ ಪಟ್ಟಣದ ಉತ್ತರಾದಿ ಮಠದದಲ್ಲಿ ಮೂರು ದಿನಗಳ ಕಾಲ ಅತೀ ವಿಜೃಂಭಣೆಯಿಂದ ನೆರವೇರಿತು. | Kannada Prabha

ಸಾರಾಂಶ

ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಪಟ್ಟಣದ ಉತ್ತರಾದಿ ಮಠದದಲ್ಲಿ ಮೂರು ದಿನಗಳ ಕಾಲ ಅತೀ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಪ್ರಭೋದೋತ್ಸವ, ವಿಷ್ಣು ಸಹಸ್ರ ನಾಮ, ವಾಯುಸ್ತುತಿ, ಸುಂದರಕಾಂಡ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅರ್ಚಕ ರಾಘವೇಂದ್ರಾಚಾರ್ಯ ಮಳ್ಳಿ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಮಧ್ಯಾಹ್ನ ರಥೋತ್ಸವ, ತೀರ್ಥಪ್ರಸಾದ, ಸಂಜೆ ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು.

ಕನ್ನಡಪ್ರಭ ವಾರ್ತೆ ಕೆಂಭಾವಿ

ಉತ್ತರಾರಾಧನೆ ನಿಮಿತ್ತ ಸೋಮವಾರ ಬೆಳಗ್ಗೆ ಭಜನೆ ನಂತರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ ನಾಡಿಗೇರ ಹನುಮಂತ ದೇವರ ಸನ್ನಿಧಾನಕ್ಕೆ ತೆರಳಿ ಮತ್ತೆ ಶ್ರೀಮಠಕ್ಕೆ ಬರುವ ಮೂಲಕ ಮೂರು ದಿನಗಳ ವೈಭವದ ಆರಾಧನೆಗೆ ತೆರೆ ಎಳೆಯಲಾಯಿತು. ಶೇಷಗಿರಿರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ ಹಾಗೂ ರಾಘವೇಂದ್ರ ನಾಡಿಗೇರ ಅವರು ಅನ್ನ ಸಂತರ್ಪಣೆ ಸೇವೆ ನೆರವೇರಿಸಿದರು. ಜಯಸತ್ಯಪ್ರಮೋದ ಸೇವಾ ಸಂಘದ ಸರ್ವ ಸದಸ್ಯರು, ಶ್ರೀ ಪ್ರಮೋದಾತ್ಮ ಯುವ ಸೇನಾ ಕಾರ್ಯಕರ್ತರು ಹಾಗೂ ಪ್ರಮೋದಿನಿ ಮಹಿಳಾ ಭಜನಾ ಮಂಡಳಿಯ ಸರ್ವ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಮೂರು ದಿನಗಳವರೆಗೆ ನಡೆದ ಆರಾಧನೆಯಲ್ಲಿ ಮಂಕುಮನವೆ ಖ್ಯಾತಿಯ ಸಂಗೀತ ಚಿತ್ರ ಕಲಾವಿದ ಹಳ್ಳೇರಾವ ಕುಲಕರ್ಣಿ ಅವರ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಮಧ್ಯಾರಾಧನೆಯ ನಿಮಿತ್ತ ನಡೆದ ವಿಶೇಷ ಸಂಗೀತದಲ್ಲಿ ರಾಗ ಮಾಲಕಂಸದಲ್ಲಿ ಮೂಡಿಬಂದ ರಾಘವೇಂದ್ರ ಸ್ವಾಮಿಗಳ ಕುರಿತಾದ ಹಾಡುಗಳು ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತು. ನಂತರ ಪುರಂದರ ದಾಸರ, ವಿಜಯದಾಸರ, ಜಗನ್ನಾಥ ದಾಸರ ಕೀರ್ತನೆಗಳು ಮತ್ತು ಕೆಂಭಾವಿ ಭೀಮದಾಸರ ಹಲವು ಹಾಡುಗಳನ್ನು ಹಾಡುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕೃಷ್ಣಾಜಿ ಕುಲಕರ್ಣಿ ಹರ‍್ಮೋನಿಯಂ, ವಾದಿರಾಜ ಕುಲಕರ್ಣಿ ತಬಲಾ, ಪ್ರಭಂಜನ ಜೋಷಿ ಅವರ ತಾಳ ಕುಲಕರ್ಣಿ ಅವರ ಗಾಯನಕ್ಕೆ ಮತ್ತಷ್ಟು ಮೆರಗು ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಹಾನಿ ಸರ್ವೆ: ರೈತರಿಂದ ಹಣ ವಸೂಲಿ ಆರೋಪ
ಬದ್ದೇಪಲ್ಲಿ: ಮೈಲಾರಲಿಂಗೇಶ್ವರನಿಗೆ ರೈತರು, ಭಕ್ತರಿಂದ ಪಾದಯಾತ್ರೆ