ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತರಾಜರಾಗಿ ಆಡಳಿತ ನಡೆದ ಕೆಂಪೇಗೌಡರ ವಂಶಸ್ಥರ ಆಳ್ವಿಕೆಯ ಕಾಲ ಸುವರ್ಣ ಯುಗವಾಗಿತ್ತು. ಸಾಕಷ್ಟು ಮೌಲ್ಯ ಇಟ್ಟುಕೊಂಡು ನಾಡುಕಟ್ಟುವ ಕೆಲಸ ಮಾಡಿದರು ಎಂದರು.
ಬೆಂಗಳೂರು ನಗರ ನಿರ್ಮಾಣ ಮಾಡುವ ಜತೆಗೆ ಕೆರೆಕಟ್ಟೆಗಳು, ದೇವಾಲಯಗಳನ್ನು ನಿರ್ಮಾಣ ಮಾಡಿದರು. ಪಟ್ಟಣದಲ್ಲಿ ಎಲ್ಲಾ ಕರಕುಶಲ ಸಮುದಾಯಗಳಿಗೆ ಒಂದೊಂದು ಪಟ್ಟಣ ನಿರ್ಮಾಣ ಮಾಡಿ ವ್ಯಾಪಾರ ವಹಿವಾಟು ನಡೆಸಲು ಮಾರುಕಟ್ಟೆಗಳ ಅನುಕೂಲ ಮಾಡಿಕೊಟ್ಟರು ಎಂದರು.ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿ, ಕೃಷಿ ಚಟುವಟಿಕೆಗೂ ಆದ್ಯತೆಕೊಟ್ಟಿದ್ದರು. ಅದರಲ್ಲೂ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಕಾಲವಂತ ಸುವರ್ಣಯುವಾಗಿ ಹೊರಹೊಮ್ಮಿತ್ತು ಎಂದು ಬಣ್ಣಿಸಿದರು.
ಸರ್ಕಾರಗಳು ಜಯಂತ್ಯುತ್ಸವಗಳನ್ನು ನಡೆಸುವ ಉದ್ದೇಶ ಪ್ರತಿಯೊಬ್ಬರು ಮಹಾತ್ಮ, ನಾಯಕರ ವಿಚಾರಗಳನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಮಾದರಿಯಾಗಿ ನಡೆಸಬೇಕು ಎನ್ನುವುದಾಗಿದೆ. ಹಾಗಾಗಿ ಪ್ರತಿಯೊಬ್ಬು ಆತ್ಮಾವಲೋಕನ ಮಾಡಿಕೊಳ್ಳಬೇಕು, ಬದಲಾಗಬೇಕು, ಸಾಧ್ಯವಾದಷ್ಟು ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಂಡು ಸುಗುಣರಾಗಬೇಕು ಎಂದರು.ಉಪನ್ಯಾಸಕ ಡಾ.ಚಂದ್ರಶೇಖರ್ ಮಾತನಾಡಿ, ಅಲೆಮಾರಿ ಜನಾಂಗದ ನಾಯಕರಾಗಿದ್ದ ಕೆಂಪೇಗೌಡರು ತದನಂತರ ವಿಜಯನಗರ ಅರಸರ ಆಕರ್ಷಣೆಯ ಮೂಲಕ ಪ್ರಭುತ್ವ ಸಾಧಿಸಿದರು. 12 ಹೋಬಳಿಗಳನ್ನು ಸೇರಿಸಿ ಬೆಂಗಳೂರು ಎಂಬ ನಗರವನ್ನು ನಿರ್ಮಾಣ ಮಾಡಿದರು.
ನಾಡಪ್ರಭು ಕೆಂಪೇಗೌಡರು ಕೆರೆಕಟ್ಟೆಗಳನ್ನು ನಿರ್ಮಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರು ನೀರಾವರಿ ವ್ಯವಸ್ಥೆಯನ್ನು ಸಹ ಅನುಕೂಲ ಮಾಡಿಕೊಟ್ಟರು. ಅವರ ಪೂರ್ವಿಕ ಆಳ್ವಿಕೆಯ ಕಾಲದಲ್ಲಿ ಇದ್ದಂತಹ ಕನ್ಯೆ ಹೆಣ್ಣು ಮಗಳ ಕಿರುಬೆರಳು ಹಾಗೂ ಉಂಗುರದ ಬೆರಳು ಕತ್ತಿರಿಸುವ ಮೌಢ್ಯಾಚರಣೆಯನ್ನು ಅಂತ್ಯಗೊಳಿಸಿದರು ಎಂದು ಬಣ್ಣಿಸಿದರು.ತಹಸೀಲ್ದಾರ್ ಸಂತೋಷ್‌ಕುಮಾರ್, ಇಒ ವೀಣಾ ಹಾಗೂ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ದರ್ಶನ್‌ಪುಟ್ಟಣ್ಣಯ್ಯ ಗೈರಾದ್ದರು.
ಸಮಾರಂಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್, ರಾಜ್ಯ ಸಂಘಟಕ ಕಾರ್‍ಯದರ್ಶಿ ಸಿ.ಆರ್.ರಮೇಶ್, ಯುವ ಘಟಕದ ಅಧ್ಯಕ್ಷ ದೀಪು, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎಚ್.ಎನ್.ಮಂಜುನಾಥ್, ರಾಘವ, ಮಂಡಿಬೆಟ್ಟಹಳ್ಳಿ ಮಂಜುನಾಥ್, ಡಿ.ಹುಚ್ಚೇಗೌಡ, ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಕಣಿವೆರಾಮು, ಅಂಕಯ್ಯ, ಧನ್ಯಕುಮಾರ್ ಸೇರಿದಂತೆ ಸಮುದಾಯದ ಹಲವು ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.