ಎಲ್ಲ ಸಮುದಾಯದಿಂದ ಕೆಂಪೇಗೌಡರ ಜಯಂತ್ಯುತ್ಸವ ಖುಷಿ ವಿಚಾರ: ಶಾಸಕ

KannadaprabhaNewsNetwork |  
Published : Jun 28, 2026, 02:45 AM IST
ಬೆಂಗಳೂರನ್ನು ನವೀನ ನಗರವಾಗಿ ರೂಪಿಸಿದ ಆಧುನಿಕ ನಿರ್ಮಾತೃ ನಾಡಪ್ರಭು ಕೆಂಪೇಗೌಡರ | Kannada Prabha

ಸಾರಾಂಶ

ಬೆಂಗಳೂರನ್ನು ನವೀನ ನಗರವಾಗಿ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಎಲ್ಲ ಸಮುದಾಯಗಳು ಒಟ್ಟಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹನೂರು ಶಾಸಕ ಎಂ.ಆರ್‌. ಮಂಜುನಾಥ್‌ ಹೇಳದರು.

ಹನೂರಿನಲ್ಲಿ ಶಾಸಕ ಎಂ.ಆರ್‌. ಮಂಜುನಾಥ್‌ ಮೆಚ್ಚುಗೆ

ಕನ್ನಡಪ್ರಭ ವಾರ್ತೆ ಹನೂರು

ಬೆಂಗಳೂರನ್ನು ನವೀನ ನಗರವಾಗಿ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಎಲ್ಲ ಸಮುದಾಯಗಳು ಒಟ್ಟಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹನೂರು ಶಾಸಕ ಎಂ.ಆರ್‌. ಮಂಜುನಾಥ್‌ ಹೇಳದರು.

ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿ, ಅರ್ಥಪೂರ್ಣವಾಗಿ ಆಚರಿಸಿ, ನಂತರ ಮಾತನಾಡಿದರು.

ಕೆಂಪೇಗೌಡರು ಬೆಂಗಳೂರು ನಗರ ಅಭಿವೃದ್ಧಿಗೆ ಹಲವು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು. ಹನೂರು ಕ್ಷೇತ್ರದ ಜನರು ನೆಮ್ಮದಿಯ ಜೀವನ ನಡೆಸಲು ಕಳೆದ 3 ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು. ಆಗ ಮಾತ್ರ ಅವರ ಸೇವೆಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಮುಖಂಡರಾದ ನಾಗೇಂದ್ರ, ಮಂಜೇಶ್, ಆನಂದ್ ಕುಮಾರ್‌, ರಾಜುಗೌಡ, ಲಿಂಗರಾಜು, ಪಟ್ಟಣ ಪಂಚಾಯ್ತಿ ನಾಮ ನಿರ್ದೇಶಿತ ಸದಸ್ಯ ಮಹಾದೇಶ್, ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್, ಚೇತನ್ ಕುಮಾರ್‌, ನಟರಾಜು ಗೌಡ, ಕಸಾಪ ಕಾರ್ಯದರ್ಶಿ ಅಭಿಲಾಶ್, ಸಂತೊಷ್, ಬಂಗಾರಪ್ಪ, ಗೋವಿಂದ್ ಕೆ. ಗೌಡ, ಸಂತೋಷ್, ಪ್ರವೀಣ್, ನಾಗೇಂದ್ರ, ಮನು, ಸಿದ್ದರಾಜು, ಗೋವಿಂದ, ವೆಂಕಟೇಶ್, ಗ್ರೇಡ್ 2 ತಹಸೀಲ್ದಾರ್‌ ರಮೇಶ್, ಉಪ ತಹಸೀಲ್ದಾರ್‌ ಸುರೇಖಾ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರೇಖಾ, ಟಿಎಚ್‌ಒ ಡಾ. ಪ್ರಕಾಶ್, ಎಇಇ ರಂಗಸ್ವಾಮಿ, ಸಬ್‌ಇನ್ಸ್‌ಪೆಕ್ಟರ್‌ ರವಿ, ಪಟ್ಟಣ ಪಂಚಾಯ್ತಿ ಕಿರಿಯ ಅಭಿಯಂತರ ನಾಗರಾಜು, ಕಂದಾಯ ನಿರೀಕ್ಷಕ ನಿರಂಜನ್, ಶಿವಕುಮಾರ್‌, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಮಲ್ಲೇಶ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಡಾ.ಸಿ.ಎಂ.ಅರವಿಂದ್