ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ,ಎ.ಬಿ.ಸಾಲಕ್ಕಿ ಕಾಲೇಜು, ಸಿದ್ದೇಶ್ವರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮುಳಸಾವಳಗಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಮ್ಮನಜೋಗಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಯಂತ್ಯೋತ್ಸವ ನಿಮಿತ್ತ ಈ ಮೇಲ್ಕಂಡ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಆಶುಭಾಷಣ,ರಸಪ್ರಶ್ನೆ,ಕವನ ವಾಚನ,ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮಕ್ಕಳು ಕೆಂಪೇಗೌಡರ ಬಗ್ಗೆ ಮೊದಲೇ ಸಾಕಷ್ಟು ಅಧ್ಯಯನ ಮಾಡಿದ್ದರಿಂದ ಎಲ್ಲಾ ಸ್ಪರ್ಧೆಗಳು ಅತ್ಯಂತ ತುರುಸಿನ ಪೈಪೋಟಿಯಿಂದ ಕೂಡಿದ್ದವು.ಮಕ್ಕಳ ಆಕರ್ಷಕ ಬರವಣಿಗೆ ಹಾಗೂ ವಾಕ್ ಚಾತುರ್ಯ ತುಂಬಾ ಗಮನಸೆಳೆದವು.ವಿಜೇತರಾದ ಶಾಲಾ ಮಕ್ಕಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುವ ಗುಣಮಟ್ಟದ,ಹೆಚ್ಚಿನ ಮೌಲ್ಯದ ಹಾಗೂ ಉಪಯುಕ್ತವಾದ ಪುಸ್ತಕ,ಪೆನ್ನು,ಪ್ರಮಾಣ ಪತ್ರಗಳನ್ನು ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.ಅತ್ಯಂತ ಶಿಸ್ತುಬದ್ದವಾಗಿ ಕಾರ್ಯಕ್ರಮವು ಮೂಡಿಬಂದಿತು.ತಹಶೀಲದಾರರು ವಿದ್ಯಾರ್ಥಿ ಸ್ನೇಹಿಯಾಗಿ ಅತ್ಯಂತ ವ್ಯವಸ್ಥಿತವಾಗಿ,ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದು ಜ್ಞಾನಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಶಿರಸ್ತೇದಾರ ಸುರೇಶ ಮ್ಯಾಗೇರಿ,ಪ್ರಥಮ ದರ್ಜೆ ಸಹಾಯಕ ಕುಮಾರ ಅವರಾದಿ,ಚನ್ನು ಹೊಸಮನಿ,ಎ.ಬಿ.ಸಾಲಕ್ಕಿ ಕಾಲೇಜಿನ ಪ್ರಾಂಶುಪಾಲರಾದ ವಿ.ಜಿ.ಹೂನಳ್ಳಿ,ಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯಸ್ಥರಾದ ವಿ.ಕೆ.ಪಾಟೀಲ,ಮುಳಸಾವಳಗಿ ಪ್ರೌಢಶಾಲೆಯ ಮುಖ್ಯಗುರು ಈರಣ್ಣ.ನರೂಣಿ,ಬಮ್ಮನಜೋಗಿ ಶಾಲೆಯ ಮುಖ್ಯಗುರು ಕೆ.ಎನ್.ಭಜಂತ್ರಿ,ತಾಲೂಕಿನ ಮಾಜಿ ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ,ಕೆ.ವಿ.ಒಡೆಯರ,ಕೆ.ಪಿ.ಮಾಲೀಪಾಟೀಲ,ರಮಾನಂದ ಚಕ್ಕಡಿ,ಎಸ್.ಜಿ.ತಾವರಖೇಡ,ಎಚ್.ಎಸ್.ತಳಕೇರಿ,ನವೀನಕುಮಾರ,ರವಿ ಉಮನಾಬಾದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು,ಉಪಸ್ಥಿತರಿದ್ದರು