ಕೆಂಪೇಗೌಡರ ಚಿಂತನೆಗಳು ಸರ್ವಕಾಲಕ್ಕೂ ಆದರ್ಶಪ್ರಾಯ: ಶರತ್ ಬಚ್ಚೇಗೌಡ

KannadaprabhaNewsNetwork |  
Published : Jun 11, 2025, 12:27 PM ISTUpdated : Jun 11, 2025, 12:28 PM IST
ಪೋಟೋ: 9 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಕೊರಟಿ-ಚಿಕ್ಕಕೊರಟಿ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಶಾಸಕ ಶರತ್ ಬಚ್ಚೇಗೌಡ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ಕೆಂಪೇಗೌಡರು ಕನ್ನಡನಾಡು ಕಂಡ ಸರ್ವಶ್ರೇಷ್ಠ ವ್ಯಕ್ತಿ, ಅಪಾರವಾದ ದೂರದೃಷ್ಠಿಯನ್ನು ಹೊಂದಿದ್ದ ಅವರ ಕೊಡುಗೆ ಅನನ್ಯವಾದದು,

ಕನ್ನಡಪ್ರಭ ವಾರ್ತೆ ಹೊಸಕೋಟೆನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿ ಚಿಂತನೆಗಳು ಸರ್ವಕಾಲಕ್ಕೂ ಆದರ್ಶಪ್ರಾಯವಾಗಿದ್ದು, ಇಂದಿನ ಯುವಜನತೆ ಕೆಂಪೇಗೌಡರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಕೊರಟಿ- ಚಿಕ್ಕಕೊರಟಿ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಹಾಗೂ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೆಂಪೇಗೌಡರು ಕನ್ನಡನಾಡು ಕಂಡ ಸರ್ವಶ್ರೇಷ್ಠ ವ್ಯಕ್ತಿ, ಅಪಾರವಾದ ದೂರದೃಷ್ಠಿಯನ್ನು ಹೊಂದಿದ್ದ ಅವರ ಕೊಡುಗೆ ಅನನ್ಯವಾದದು, ಬೆಂಗಳೂರಿನ ನಿಮಾತೃ ಕೆಂಪೇಗೌಡರು ಜಾತ್ಯಾತೀತ ದೊರೆಯಾಗಿ ಆಡಳಿತ ನಿರ್ವಹಣೆ, ತನ್ನ ಅಧಿಕಾರವಧಿಯಲ್ಲಿ ನಾಡಿನ ಸಮಸ್ತ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಧೀಮಂತ ಪ್ರಭುವಾಗಿ ಖ್ಯಾತಿಯನ್ನು ಗಳಿಸಿದ್ದರು ಎಂದರು.ಕೆಪಿಸಿಸಿ ಕಾರ್ಯದರ್ಶಿ ಬಿ. ಗೋಪಾಲ್ ಮಾತನಾಡಿ, ನಾಡಪ್ರಭು ಎಂಬ ಖ್ಯಾತಿಯ ಜೊತೆಗೆ ನಾಡಿನ ಶಕ್ತಿಯಾಗಿದ್ದರು. ಬಾಲ್ಯದಲ್ಲಿಯೇ ಶ್ರೀಕೃಷ್ಣದೇವರಾಯರ ಅವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರು, ತಮ್ಮ ನಾಡಿನಲ್ಲೂ ಅಂತಹ ವೈಭವವನ್ನು ಸ್ಥಾಪಿಸಬೇಕೆಂಬ ಹಂಬಲದಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದ್ದರು ಎಂದರು.ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತಿಪೂರ್ವಕ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್. ಧರ್ಮೇಶ್, ಉದ್ಯಮಿಗಳಾದ ಸಿ. ಜಯರಾಜ್, ಎಂ. ಮಂದೀಪ್‌ಗೌಡ, ನೆಲವಾಗಿಲು ಎಸ್.ಎಫ್.ಸಿ.ಎಸ್ ಆಧ್ಯಕ್ಷ ಎಚ್.ಎಂ. ನಾರಾಯಣಗೌಡ, ಉಪಾಧ್ಯಕ್ಷೆ ವನಿತಾ ಸಂತೋಷ್, ನಿರ್ದೇಶಕ ಎನ್.ಡಿ. ಬೈರೇಗೌಡ, ಮಾಜಿ ಅಧ್ಯಕ್ಷರಾದ ರವಿಶಂಕರ್, ಎಸ್. ಮಂಜುನಾಥ್, ಎಸ್‌ಬಿಟಿ ಬೈರೇಗೌಡ, ಹೆಚ್.ಎಸ್. ನಾರಾಯಣಸ್ವಾಮಿ, ಎಂ. ರಾಜಣ್ಣ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್‌ಟಿಎಂ ಮುನಿರಾಜು, ಮಾಜಿ ನಿರ್ದೇಶಕ ಕೆ. ನಾರಾಯಣಸ್ವಾಮಿ, ಗ್ರಾಪಂ. ಉಪಾಧ್ಯಕ್ಷೆ ಶಿಲ್ಪಶ್ರೀ ಕೆ. ಮುನಿರಾಜು, ಸದಸ್ಯರಾದ ಗುರು, ಬಿಂದು ದೇವೇಗೌಡ, ಎನ್.ಎನ್. ಮಂಜುನಾಥ್, ಜಯರಾಮಯ್ಯ, ಸುರೇಶ್ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.

ಪೋಟೋ: 9 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಕೊರಟಿ- ಚಿಕ್ಕಕೊರಟಿ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಶಾಸಕ ಶರತ್ ಬಚ್ಚೇಗೌಡ ಅನಾವರಣಗೊಳಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ