ಕೆಂಪೇಗೌಡರು ಬೆಂಗಳೂರಿನ ಶಿಲ್ಪಿ: ತಹಸೀಲ್ದಾರ್‌ ಸಿಬ್ಗತ್‌ವುಲ್ಲಾ

KannadaprabhaNewsNetwork |  
Published : Jun 28, 2024, 12:48 AM IST
ಮಧುಗಿರಿಯ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಯ ಹಬ್ಬಗಳ ಆಚರಣೆ ಸಮಿತಿಯಂದ ಏರ್ಪಡಿಸಿದ್ದ ನಾಡಬ್ರಭು ಕೆಂಪೇಗೌಡರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಮಧುಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕೆಂಪೇಗೌಡರು ಬೆಂಗಳೂರು ನಗರದ ಶಿಲ್ಪಿ, ಅವರು ಮುಂದಾಲೋಚನೆಯಿಂದ ಮಾರುಕ್ಟಟೆ, ಅಂಗಡಿ ಮುಂತಾದುವುಗಳಿಗೆ ಸ್ಥಳಗಳನ್ನು ಗರುತಿಸಿ ಅವಕಾಶ ಮಾಡಿದ್ದರು. ಅವರ ಕೊಡುಗೆ ರಾಜ್ಯವನ್ನೇ ಆಕರ್ಷಿಸುವಂತೆ ಮಾಡಿದೆ ಎಂದು ತಹಸೀಲ್ದಾರ್‌ ಸಿಬ್ಗತ್‌ವುಲ್ಲಾ ಕೊಂಡಾಡಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಂಪೇಗೌಡರು ಕೃಷಿಗೆ ಉತ್ತೇಜನ ನೀಡುವುದರೊಂದಿಗೆ ಯೋಜನಾ ಬದ್ಧವಾದ ನಗರಗಳನ್ನು ನಿರ್ಮಿಸಿ ಕುಡಿವ ನೀರಿಗೆ ಉತ್ತಮ ವ್ಯವಸ್ಥೆ ರೂಪಿಸಿ ಪ್ರಜೆಗಳ ರಕ್ಷಣೆಗಾಗಿ ಕೋಟೆಗಳನ್ನು ಕಟ್ಟಿದ್ದರು. ಅವರ ಹೆಸರು ಚಿರವಾಗಿ ಉಳಿಯುವಂತೆ ವಿಮಾನ ನಿಲ್ದಾಣ, ಬಸ್‌, ರೈಲ್ವೆ ನಿಲ್ದಾಣ ಸೇರಿ ಹತ್ತು ಹಲವು ಯೋಜನೆಗಳು ಜನರಿಗೆ ಅನುಕೂಲವಾಗಿದೆ.ಅಂದು ಹತ್ತಾರು ಹಳ್ಳಿಗಳಿಂದ ಕೂಡಿದ್ದ ಊರು ಇಂದು ಬೃಹತ್‌ ಬೆಂಗಳೂರು ನಗರವಾಗಿ ವಿವಿಧ ರಾಜ್ಯ. ದೇಶ,ವಿದೇಶಗಳ ಜನರ ದುಡಿಮೆಗೆ ದಾರಿದೀಪ,ಬಹತ್‌ ಕೆರೆ ,ಕಲ್ಯಾಣಿ ಹಾಗೂ ಅಣೆಕಟ್ಟುಗಳನ್ನು ಕಟ್ಟಿ ಜನಪರ ಆಡಳಿತ ನಡೆಸಿದರು ಎಂದರು.

ಕೆಂಪೇಗೌಡರು ತಮ್ಮ ಆಡಳಿತ ಕಾಲದಲ್ಲಿ ದೇಗುಲಗಳನ್ನು ನಿರ್ಮಿಸಿ ಧಾರ್ಮಿಕತೆಗೆ ಅಧಿಕ ಒತ್ತು ನೀಡುವ ಮೂಲಕ ಜಮೀನುಗಳನ್ನು ಮೀಸಲಿರಿಸಿ ಅರ್ಚಕರಿಗೆ ಜೀವನ ಭದ್ರತೆ ಒದಗಿಸಿದ್ದರು ಎಂದರು.

ತಾಪಂ. ಇಒ ಲಕ್ಷ್ಮಣ್ ಮಾತನಾಡಿ, ಕೆಂಪೇಗೌಡರ ಅಲೋಚನೆ -ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಗೌರವ ನೀಡಿದಂತೆ ಎಂದರು. ಬಿಇಒ ಕೆ.ಎನ್‌.ಹನುಮಂತರಾಯಪ್ಪ ಮಾತನಾಡಿ, ಕೆಂಪೇಗೌಡರ ಜಯಂತಿ ಅಂಗವಾಗಿ ಸರ್ಕಾರದ ಆದೇಶದ ಹಿನ್ನಲೆ ಶಾಲೆಗಳಲ್ಲಿ ಪ್ರಬಂಧ ಸ್ಪರ್ಥೆ ,ಚಿತ್ರಕಲಾ ಸ್ಪರ್ಧೆ, ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಈ ವೇಳೆ ತಾಲೂಕು ಒಕ್ಕಲಿಗ ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎನ್‌.ರಾಜಶೇಖರ್‌, ಗೌರವಾಧ್ಯಕ್ಷ ಡಿ.ಎನ್‌.ಸಿದ್ದಪ್ಪ, ಉಪಾಧ್ಯಕ್ಷ ಜಗದೀಶ್‌, ಕಾರ್ಯದರ್ಶಿ ಸಿ.ವಿ.ಉಮೇಶ್‌, ಖಜಾಂಚಿ ಜಿ.ಎಂ.ರಾಮಚಂದ್ರಪ್ಪ, ಜಂಟಿ ನಿರ್ದೇಶಕ ಜಿ.ಜಯರಾಮಯ್ಯ, ನಿರ್ದೇಶಕರಾದ ಕಾಳೇಗೌಡ, ಚನ್ನಲಿಂಗಪ್ಪ, ಶಶಿಕುಮಾರ್‌, ರವಿಕುಮಾರ್‌, ಅನಿಲ್‌ಕುಮಾರ್‌, ಎಸ್‌.ಮೋಹನ್‌, ಬಿ.ಜಿ.ಕೀರ್ತಿಶ್ರೀ, ಜಯಲಕ್ಷ್ಮಮ್ಮ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಆರ್‌ಎಫ್‌ಓ ಸುರೇಶ್‌, ಸಿಡಿಪಿಒ ಕಮಲ, ಎತ್ತಿನಹೊಳೆ ಮುರುಳಿ, ತೋಟಗಾರಿಕೆ ಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ರಾಜ್‌ಗೋಪಾಲ್‌, ಪಶು ಇಲಾಖೆ ಸಿದ್ದನಗೌಡ, ಪಿಎಸ್‌ಐ ವಿಜಯ್‌ಕುಮಾರ್‌, ಉಪನೊಂದಣಣಾಧಿಕಾರಿ ಸತೀಶ್‌, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನರಸಿಂಹಯ್ಯ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಯರಾಮ್, ಲಕ್ಷ್ಮೀರಂಗನಾಥ್‌, ಓಬಳೇಶ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌