ಮಕ್ಕಳಿಗಾಗಿ ಶಾಲೆ; ಶಾಲೆಗಾಗಿ ಮಕ್ಕಳಲ್ಲ ಕೃತಿ ಬಿಡುಗಡೆ

KannadaprabhaNewsNetwork |  
Published : Jun 09, 2025, 11:49 PM IST
39 | Kannada Prabha

ಸಾರಾಂಶ

ಪ್ರಾರಂಭದಿಂದಲೂ ಕಲಿಯುವ ಮನೆಯ ಒಡನಾಟ ಹಂಚಿಕೊಳ್ಳುತ್ತ ಭೇಟಿ ಮಾಡಿದ ಎಲ್ಲಾ ಸ್ತರದ ಜನರು ಕಲಿಯುವ ಮನೆಯ ಕಾರ್ಯವನ್ನು ನೋಡಿ ಸಹಾನುಭೂತಿಯನ್ನಷ್ಟೇ ವ್ಯಕ್ತಪಡಿಸುತ್ತಿದ್ದರು

ಕನ್ನಡಪ್ರಭ ವಾರ್ತೆ ಮೈಸೂರುನಗರದ ಮಾನಂದವಾಡಿ ರಸ್ತೆಯ ಕೆಂಚಲಗೂಡು ಗ್ರಾಮದ ದಿವ್ಯ ದೀಪ ಚಾರಿಟಬಲ್ ಟ್ರಸ್ಟ್‌ ಕಳೆದ 20 ವರ್ಷಗಳಿಂದ ಮಕ್ಕಳಿಗಾಗಿ ಶಾಲೆ; ಶಾಲೆಗಾಗಿ ಮಕ್ಕಳಲ್ಲ ಎಂಬ ಧ್ಯೇಯವಾಕ್ಯದೊಡನೆ ಕಲಿಯುವ ಮನೆಯ ತಾಣದಲ್ಲಿ ಸುಮಾರು 100 ಶಿಕ್ಷಣ ವಂಚಿತ ಮಕ್ಕಳನ್ನು ಶಿಕ್ಷಣ ಮತ್ತು ಜೀವನ ಕೌಶಲ್ಯ ತರಬೇತಿಗಳೊಂದಿಗೆ ಸಮಾಜದ ಮುಖ್ಯವಾಹಿನಿಗೆ ತಂದು ಜೀವನ ರೂಪಿಸುವ ಕಾರ್ಯವನ್ನು ಅನಂತ ಕುಮಾರ್‌ ಹಾಗೂ ತಂಡ ಯಶಸ್ವಿಯಾಗಿ ಮಾಡುತ್ತಿದೆ.ಅನಂತ ಕುಮಾರ್‌ ಅವರ ಸುಧೀರ್ಘ 20 ವರ್ಷಗಳ ಅನುಭವವನ್ನು ಅಕ್ಷರ ರೂಪದಲ್ಲಿ ಇಳಿಸಿ ಮಕ್ಕಳಿಗಾಗಿ ಶಾಲೆ; ಶಾಲೆಗಾಗಿ ಮಕ್ಕಳಲ್ಲ (ಒಂದು ಅ(ನ)ಧಿಕೃತ ಶಾಲೆಯ ಕಥೆ) ಎಂಬ ಕೃತಿ ಲೋಕಾರ್ಪಣೆ ಸಮಾರಂಭವನ್ನು ಕಲಿಯುವ ಮನೆಯ ತಂಡದವರು ಶಾಲೆಯ ಆವರಣದಲ್ಲಿ ಏರ್ಪಡಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಪ್ರಾರಂಭದಿಂದಲೂ ಕಲಿಯುವ ಮನೆಯ ಒಡನಾಟ ಹಂಚಿಕೊಳ್ಳುತ್ತ ಭೇಟಿ ಮಾಡಿದ ಎಲ್ಲಾ ಸ್ತರದ ಜನರು ಕಲಿಯುವ ಮನೆಯ ಕಾರ್ಯವನ್ನು ನೋಡಿ ಸಹಾನುಭೂತಿಯನ್ನಷ್ಟೇ ವ್ಯಕ್ತಪಡಿಸುತ್ತಿದ್ದರು. ಆದರೆ ನಿರಂತರ ಹೋರಾಟದೊಂದಿಗೆ, ಕಲಿಯುವ ಮನೆಯು ಮುಖ್ಯ ವಾಹಿನಿಯ ಕೊರತೆಗಳನ್ನು ಪರ್ಯಾಯವಾಗಿ ಅನುಷ್ಠಾನ ಮಾಡುತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.ದೀನಬಂಧು ಟ್ರಸ್ಟ್‌ ಕಾರ್ಯದರ್ಶಿಇ ಜಿ.ಎಸ್. ಜಯದೇವ ಮಾತನಾಡಿ, ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದು ಅವಕಾಶ ವಂಚಿತರಾದ ಮಕ್ಕಳಿಗೆ ಕಲಿಯುವ ಮನೆಯಲ್ಲಿ ಅವರ ಸೃಜನಶೀಲತೆಯನ್ನು ಗುರುತಿಸಿ, ಪೋಷಿಸಿ, ಬೆಳೆಸಿ ಜೊತೆಯಲ್ಲಿ ಶೈಕ್ಷಣಿಕವಾಗಿಯೂ ಉತ್ತಮ ಬೆಳವಣಿಗೆಯನ್ನು ಮಕ್ಕಳಿಗೆ ಮೂಡಿಸುತ್ತಿದೆ ಎಂದು ಹೇಳಿದರು.ಕೃತಿಯ ಲೇಖಕ ಅನಂತ ಕುಮಾರ್‌ ತಮ್ಮ ಸುಧೀರ್ಘ ಕಲಿಯುವ ಮನೆಯ ಪ್ರಯಾಣದ ಅನುಭವವನ್ನು ನಾನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದೇನೆ, ಈ ಪಸ್ತಕವು ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಸರ್ವರಿಗೂ ತಲುಪಿ ಇದರಿಂದ ಸಮಾಜಕ್ಕೆ ಒಳಿತಾದರೆ ಸಾಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ನಂತರ ಕಲಿಯುವ ಮನೆಯ ಹಿರಿಯ ವಿದ್ಯಾರ್ಥಿಗಳಾದ ಮಹೇಶ ಮತ್ತು ಅಮೂಲ್ಯ ಅವರು ಕಲಿಯುವ ಮನೆಯ ಒಡನಾಟ ಮತ್ತು ಅವರ ಜೀವನ ರೂಪಿಸುವಲ್ಲಿ ಕಲಿಯುವ ಮನೆಯ ಪಾತ್ರವನ್ನು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಬಗ್ಗೆ ನಿರಂತರ ಅಪಪ್ರಚಾರ ಸಲ್ಲ
33 ಅಂಕ ನೀಡಿಕೆ ಬಗ್ಗೆ ಬರಗೂರು ಅಸಮಾಧಾನ