ರಾಮನಗರ: ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಉತ್ತಮ ಆಡಳಿತ ನೀಡಿದವರು ಕೆಂಗಲ್ ಹನುಮಂತಯ್ಯ. ನೈತಿಕತೆ ವಿಷಯದಲ್ಲಿ ಎಂದೂ ರಾಜಿಯಾಗದೆ ಪ್ರಾಮಾಣಿವಾಗಿ ಆಡಳಿತ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಸೂ.ಚಿ. ಗಂಗಾಧರಯ್ಯ ಹೇಳಿದರು.
ತಾಲೂಕಿನ ಶೇಷಗಿರಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರರತ್ನ ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ 118ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನುಮಂತಯ್ಯ ಅವರ ಜನಪರ ಆಡಳಿತ, ಜನಸೇವಾ ಕಾರ್ಯಗಳು ಅವರ ದೂರದೃಷ್ಟಿಯ ಆಲೋಚನೆಯಾಗಿತ್ತು ಎಂದರು.ಕೆಂಗಲ್ ಹನುಮಂತಯ್ಯ ದೇಶಕಂಡ ಅಪರೂಪದ ರಾಜಕಾರಣಿ, ಕರ್ನಾಟಕದ ಏಕೀಕರಣ ಅವರ ಮಹಾನ್ ಸಾಧನೆ. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ವಿಧಾನಸೌಧ ನಿರ್ಮಾಣ ಮಾಡಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಾಮಫಲಕ ಹಾಕಿದವರು ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ನಾಯಕ ಕೆಂಗಲ್ ಹನುಮಂತಯ್ಯ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ. ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ನಾಡಿಗೆ ಅಪಾರವಾಗಿದೆ. ಅವರ ದೂರದೃಷ್ಟಿಯ ಫಲವೇ ಇಂದು ನಾವು ವಿಧಾನಸೌಧವನ್ನು ಕಂಡಿದ್ದೇವೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ನಾಡಿಗೆ ಕೊಡುಗೆ ನೀಡಿದ ಮಹಾಚೇತನ ಕೆಂಗಲ್ ಹನುಮಂತಯ್ಯನವರು ಎಂದು ಹೇಳಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಹಳೇ ಮೈಸೂರು ರಾಜ್ಯ ಒಕ್ಕಲಿಗರ ಪ್ರಾಬಲ್ಯ ಹೊಂದಿತ್ತು. ಏಕೀಕರಣ ಆದರೆ ಒಕ್ಕಲಿಗರ ಪ್ರಾಬಲ್ಯ ಹಾಗೂ ಮುಖ್ಯಮಂತ್ರಿ ಪದವಿ ಹೋಗುತ್ತದೆ ಎಂದು ಎಲ್ಲ ಮುಖಂಡರು ಏಕೀಕರಣಕ್ಕೆ ವಿರೋಧ ಮಾಡಿದ್ದರು. ಆದರೆ ಕೆಂಗಲ್ ಹನುಮಂತಯ್ಯನವರು ವಿರೋಧಕ್ಕೆ ಮಣಿಯದೆ ಅಖಂಡ ಕರ್ನಾಟಕ ಆಗಲೇಬೇಕು ಎಂದು ಏಕೀಕರಣ ಬೆಂಬಲಿಸಿ ತಮ್ಮ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡ ಮಹಾನ್ ನಾಯಕ ಎಂದು ತಿಳಿಸಿದರು.
ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ಬಸವರಾಜ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಗಳಿಸುವುದರ ಮೂಲಕ ಸಾಲಿಗೆ ಕೀರ್ತಿ ತರಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಪರಿಮಳ ವಹಿಸಿದ್ದರು. ಮಕ್ಕಳು ಈ ಜಿಲ್ಲೆಯ ಸಾಧಕರ ಇತಿಹಾಸ ತಿಳಿಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷ ಲೋಕೇಶ್, ಟ್ರಸ್ಟ್ ಸದಸ್ಯರಾದ ಬಾನಂದೂರು ನಂಜುಂಡಿ, ರವಿ, ಪಾರ್ಥ, ಸಂದೀಪ್, ಷಣ್ಮುಗ, ಬಸವರಾಜ್, ಮಾದೇಶ್ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕೋಟ್......
ಕೆಂಗಲ್ ಹನುಂತಯ್ಯ ದೇಶಕಂಡ ಅಪರೂಪದ ರಾಜಕಾರಣಿ, ಕರ್ನಾಟಕದ ಏಕೀಕರಣ ಅವರ ಮಹಾನ್ ಸಾಧನೆ. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಏಕೀಕರಣವನ್ನು ಬೆಂಬಲಿಸಿ ಅವರು ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡ ಮಹಾನಾಯಕರು.-ಸೂ.ಚಿ.ಗಂಗಾಧರಯ್ಯ, ಸಾಹಿತಿ
16ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಶೇಷಗಿರಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರರತ್ನ ಕೆಂಗಲ್ ಹನುಮಂತಯ್ಯ ಅವರ 118ನೇ ಜಯಂತ್ಯುತ್ಸವ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು.