ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುವ ಗಣೇಶ ಗಲಾಟೆಗಳಲ್ಲಿ ಕೇರಳ ರಾಜ್ಯದ ರಾಷ್ಟ್ರ ದ್ರೋಹಿ ಮುಸ್ಲಿಂರ ಕೈವಾಡವಿದೆ. ಇದಕ್ಕೆ ನಾಗಮಂಗಲದ ಘಟನೆಯೇ ಉದಾಹರಣೆ. ಪಿಎಫ್‍ಐ, ಕೆಎಫ್‍ಡಿ ಯಂತಹ ನಿಷೇದಿತ ರಾಷ್ಟ್ರದ್ರೋಹಿ ಸಂಸ್ಥೆಗಳು ಕೈಜೋಡಿಸುತ್ತಿವೆ. ಮುಖ್ಯವಾಗಿ ಕೇರಳ ಮೂಲದ ಮುಸ್ಲಿಂರು ರಾಜ್ಯದಲ್ಲಿ ಬೀಡುಬಿಟ್ಟು ಇಂತಹ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರೇ ಘಟನೆ ಖಂಡಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಇದನ್ನು ಹಗುರವಾಗಿ ತೆಗೆದುಕೊಂಡಿದೆ. ಗೃಹಮಂತ್ರಿ ಸೇರಿದಂತೆ ಚೆಲುವರಾಜ ಸ್ವಾಮಿ, ಸತೀಶ್ ಜಾರಕಿಹೊಳಿಯಂತವರು ಇದನ್ನು ಸಣ್ಣ ಘಟನೆ ಎನ್ನುತ್ತಿದ್ದಾರೆ. ಇಡೀ ನಾಗಮಂಗಲವೇ ಹತ್ತಿ ಉರಿಯುತ್ತಿರುವಾಗ ಇವರು ಮಾತ್ರ ಇದು ಸಣ್ಣ ಘಟನೆ ಎನ್ನುತ್ತಿರುವುದು ಆಶ್ಚರ್ಯ ತಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಲವು ಮುಸ್ಲಿಂ ಗುಂಡಾಗಳು ಬಾಲ ಬಿಚ್ಚುತ್ತಿದ್ದಾರೆ ಎಂದರು.ಶಿವಮೊಗ್ಗದಲ್ಲಿ ನಡೆಯುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
ಇತ್ತೀಚಿಗೆ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಸರ್ಕಾರವೇ ಹೇಳಿದಂತೆ ಆ ಕುಟುಂಬಕ್ಕೆ ತಕ್ಷಣ 25 ಲಕ್ಷ ರು. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಮುನಿರತ್ನರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮನುಷ್ಯ ಇಷ್ಟು ನೀಚತನಕ್ಕೆ ಇಳಿಯಬಾರದು ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಬಾಲು, ಜಾಧವ್, ಶೇಷಾದ್ರಿ, ಮೋಹನ್‍ರಾಜ್, ಶಂಕರನಾಯ್ಕ, ಟಾಕ್ರಾ ನಾಯ್ಕ, ಜಗದೀಶ್, ಶ್ರೀಕಾಂತ್ ಮುಂತಾದವರು ಇದ್ದರು.