ಜಾತಿ ಗಣತಿ ವರದಿಯನ್ನು ಸಿಎಂ ಡಿಕೆಶಿ ಕ್ಯಾಬಿನೆಟ್ ಮುಂದಿಡಲಿ: ಎಂಎಲ್‌ಸಿ ಕೇಶವ ಪ್ರಸಾದ್

KannadaprabhaNewsNetwork |  
Published : Jul 18, 2026, 01:30 AM IST
ವನ ಮಂಗಳೂರು ಬಂದರು ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಮಧುಸೂಧನ್ ಅವರ ಮೂಲಕ ಸ್ವೀರಿಸಿರುವ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಡಿಕೆಶಿ ಅವರು ಮುಂದಿನ ಅಧಿವೇಶನದಲ್ಲಿ ಕ್ಯಾಬಿನೆಟ್ ಮುಂದಿಟ್ಟು ಚರ್ಚೆಗೆ ಅವಕಾಶ ನೀಡಿಲಿ. ಈ ಮೂಲಕ ಅವರು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿ ತಮ್ಮ ಬದ್ಧತೆ ತೋರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು.

ಪುತ್ತೂರು: ರಾಜ್ಯ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಮಧುಸೂಧನ್ ಅವರ ಮೂಲಕ ಸ್ವೀರಿಸಿರುವ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಡಿಕೆಶಿ ಅವರು ಮುಂದಿನ ಅಧಿವೇಶನದಲ್ಲಿ ಕ್ಯಾಬಿನೆಟ್ ಮುಂದಿಟ್ಟು ಚರ್ಚೆಗೆ ಅವಕಾಶ ನೀಡಿಲಿ. ಈ ಮೂಲಕ ಅವರು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿ ತಮ್ಮ ಬದ್ಧತೆ ತೋರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು. ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿದರು. ಈ ಹಿಂದೆ ಕಾಂತರಾಜು ವರದಿಯನ್ನು ಸ್ವೀಕರಿಸಿಲ್ಲ. ಅನಂತರ ಜಯಪ್ರಕಾಶ್ ಹೆಗ್ಡೆ ಅವರ ಮೂಲಕ ಪುನರ್ ವರದಿ ಮಾಡಿಸಿಯೂ ಅದನ್ನು ಮಂಡಿಸಿಲ್ಲ. ವರದಿ ಕ್ಯಾಬಿನೆಟ್ ಮುಂದೆ ಬರಲು ೧೪ ತಿಂಗಳು ಬೇಕಾಯಿತು. ದತ್ತಾಂಶ ಮಂತ್ರಿಗಳಿಗೆ ಹಂಚಿದ ಬಳಿಕ ಜಾರಿಗೆ ಬರಲಿಲ್ಲ, ಅದನ್ನು ರಾಹುಲ್ ಗಾಂಧಿಯವರ ಆದೇಶದಂತೆ ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದರು. ಜಯಪ್ರಕಾಶ್ ಹೆಗಡೆ ಅವರ ವರದಿಗೆ ೧೬೫ ಕೋಟಿ ರು. ಹಣವನ್ನು ವ್ಯಯ ಮಾಡಲಾಗಿದೆ. ಅನಂತರ ಮಧುಸೂದನ್ ಅವರ ಮೂಲಕ ಮಾಡಿಸಿದ ಗಣತಿಗೆ ಸುಮಾರು ೪೫೦ ಕೋಟಿ ರು ಖರ್ಚು ಮಾಡಿರುವ ಬಗ್ಗೆ ಉಲ್ಲೇಖವಾಗಿದೆ. ಜನತೆಯ ಇಷ್ಟೊಂದು ಹಣವನ್ನು ವ್ಯರ್ಥ ಮಾಡಿ ವರದಿ ಬಂದ ಬಳಿಕ ಪ್ರಕಟಿಸುವ ಬದ್ಧತೆಯನ್ನು ತೋರಿಲ್ಲ. ಕಾಂಗ್ರೆಸ್ ಆಡಳಿತದ ೪೫ ವರ್ಷಗಳ ಅವಧಿಯಲ್ಲಿ ಒಬಿಸಿಗೆ ಸಂಬಂಧಿಸಿದಂತೆ ಶಾಶ್ವತ ಕೆಲಸ ಆಗಿಲ್ಲ. ಇದು ನೆಹರೂ ಕಾಲದಿಂದಲೇ ನಡೆದುಕೊಂಡು ಬಂದಿದೆ. ಜಾತಿ ಗಣತಿ ಅಧಿಕಾರ ಇರುವುದು ಜನಗಣತಿ ಮಾಡುವ ಕೇಂದ್ರ ಸರ್ಕಾರಕ್ಕೆ. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡು ಹಲವು ಬಾರಿ ಜಾತಿಗಣತಿ ಮಾಡಿಸಿದ ರಾಜ್ಯ ಸರ್ಕಾರಕ್ಕೆ ಜನರ ಅಭಿವೃದ್ಧಿ ಬೇಕಿಲ್ಲ, ಜಾತಿಗಳನ್ನು ಒಡೆಯುವುದು ಮಾತ್ರ ಇವರ ಆದ್ಯತೆ ಎಂದು ಕೇಶವ ಪ್ರಸಾದ್ ಆರೋಪಿಸಿದರು.

ಈ ಬಾರಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ಆಗಬೇಕು ಎಂಬುದು ಬಿಜೆಪಿಯ ಆಗ್ರಹ. ದೇಶದಲ್ಲಿ ಉಳಿದಿರುವ ಬಾಂಗ್ಲಾ ಹಾಗೂ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಬೇಕು. ಅವರನ್ನು ಎಸ್.ಐ.ಆರ್. ಪ್ರಕ್ರಿಯೆಯಿಂದ ಹೊರಗಿಡಬೇಕು. ಮುಂದೆ ಅವರ ಮೇಲೆ ಕಾರ್ಯಾಚರಣೆ ಮಾಡಿ ದೇಶದಿಂದ ಹೊರಗಿಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎನ್ನುವುದು ನಮ್ಮ ಬದ್ಧತೆ ಆಗಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಒತ್ತಡವನ್ನು ತಂದು ಬಾಂಗ್ಲಾ ಮತ್ತು ಪಾಕಿಸ್ಥಾನದ ಮತದಾರರು ಪಟ್ಟಿಯಲ್ಲಿ ಉಳಿದುಕೊಳ್ಳಲಿ ಎಂಬ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ವಿದ್ಯಾ ಆರ್. ಗೌರಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತಾ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ಮಾಧ್ಯಮ ವಿಭಾಗ ಸಂಚಾಲಕ ಸತೀಶ್ ನಾಯಕ್‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ ಮತ್ತೆ ಮುಂದೂಡಿಕೆ
‘ಸಚಿವರ ಪಟ್ಟಿ’ ಪರಿಷ್ಕರಿಸಲು ಹೈಕಮಾಂಡ್‌ನಿಂದ ಸೂಚನೆ