ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಬೆಂಕಿಯಂತಹ ಪ್ರಶ್ನೆಗಳಿಗೆ ಶಾಸಕರು ಅರ್ಧಕ್ಕೆ ಸಭೆ ಮೊಟಕುಗೊಳಿಸಿ ಸಭೆಯಿಂದ ಹೊರನಡೆದ ಪ್ರಸಂಗ ಶುಕ್ರವಾರ ನಡೆಯಿತು.ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ ನಗರಸಭೆಯಿಂದ ಸಿಎಂಎಸ್ ಸಂಸ್ಥೆಗೆ ಬೀದಿ ದೀಪಗಳ ನಿರ್ವಹಣೆ ಕೊಟ್ಟಿದ್ದು ನಗರದ 35 ವಾರ್ಡ್‌ಗಳ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿದ್ದು, ಅದರೂ ನಗರಸಭೆಯಿಂದ ಪ್ರತಿ ತಿಂಗಳಿಗೆ 4 ಲಕ್ಷ ರೂ.ಗಳನ್ನು ಬೀದಿ ದೀಪಗಳ ನಿರ್ವಹಣೆಗೆ ವೆಚ್ಚ ಮಾಡುತ್ತಿದ್ದಾರೆ. ಈ ಹಣವನ್ನು ಯಾರಿಗೆ ನೀಡುತ್ತಿದ್ದಾರೆಂದು ವಳ್ಳಲ್ ಮುನಿಸ್ವಾಮಿ ಪ್ರಶ್ನೆ ಮಾಡಿದಾಗ ಶಾಸಕಿ ರೂಪಕಲಾ ಶಶಿಧರ್ ಕೆರಳಿ ಕೆಂಡವಾಗಿ ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದೇವೆ. ಈ ವಿಷಯವನ್ನು ಚರ್ಚೆ ಮಾಡಲು ಸೂಕ್ತ ಸಮಯವಲ್ಲ ಎಂದು ಶಾಸಕರು ಮಾಜಿ ಅಧ್ಯಕ್ಷರ ಮೇಲೆ ಕೋಪಗೊಂಡು ಮೈಕ್‌ನ್ನು ಟೆಬಲ್ ಮೇಲೆ ಬಿಸಾಡಿಸಿದರು.ಅನಧಿಕೃತ ಕಟ್ಟಡಗಳ ನಿರ್ಮಾಣ:ಎಂ.ಜಿ. ಮಾರುಕಟ್ಟೆಯಲ್ಲಿ ಕಟ್ಟಡಗಳ ರಿಪೇರಿ ನೆಪದಲ್ಲಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣದಲ್ಲಿ ಲಕ್ಷಾಂತರ ರು.ಗಳ ಅವ್ಯವಹಾರ ನಡೆಯುತ್ತಿದೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಎಂ.ಜಿ.ಮಾರುಕಟ್ಟೆಯಲ್ಲಿ ಶಿಥಿಲಗೊಂಡಿರುವ ಅಂಗಡಿಗಳ ರಿಪೇರಿಗೆ ಅನುಮತಿ ಪಡೆದು, ಸರ್ಕಾರದ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಿಮಿನಲ್ ಮೊಕ್ಕದಮೆ ದಾಖಲಿಸಬೇಕು. ಇಲ್ಲದೇ ಹೋದಾರೆ ಲೋಕಾಯುಕ್ತರಿಗೆ ದೂರು ನೀಡಲಾಗುವುದೆಂದು ಸಭೆಯ ಮಾತನಾಡಿದಾಗ ಶಾಸಕರು ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾದರು.33 ಕೋಟಿ ರು.ಗಳ ನಗರೋತ್ಥಾನ ನಿಧಿಯಡಿ ಶೇ. 30ರಷ್ಟು ಕಾಮಗಾರಿ ನಡೆದಿಲ್ಲ. ಎರಡು ವರ್ಷದಿಂದ ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲವೆಂದು ವಳ್ಳಲ್ ಮುನಿಸ್ವಾಮಿ ಮಾತನಾಡಿ, ನಗರಸಭೆ ವಿರುದ್ದ ಅರ್ಟಾಸಿಟಿ ಪ್ರಕರಣವನ್ನು ಅಧಿಕಾರಿಗಳ ವಿರುದ್ಧ ದಾಖಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.ಸದಸ್ಯರ ಪ್ರಶ್ನೆಗಳಿಗೆ ಉತ್ತರವಿಲ್ಲ:ನಗರಸಭೆ ಸದಸ್ಯರ ಸಾಮನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಇದ್ದು ಇಲ್ಲವಂತಾಗಿತ್ತು. ಸಭೆ ನಡೆಸಬೇಕಾದ ಅಧ್ಯಕ್ಷರು, ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅಧ್ಯಕ್ಷರು ಯಾವುದಕ್ಕೂ ತುಟ್ಟಿಯೇ ಬಿಚ್ಚಿಲ್ಲ, ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಶಾಸಕರು ಉತ್ತರ ನೀಡದೇ ತಡಾಬಡಾಯಿಸಿದರು.ಉಪಾಧ್ಯಕ್ಷರು ನಮಗೂ ಸಭೆಗೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದರು. ಸದಸ್ಯರ ಕೇಳುವ ಪ್ರಶ್ನೆಗಳಿಗೆ ಶಾಸಕರು ಸದಸ್ಯರ ಮೇಲೆ ತಮ್ಮ ನೋಟದಲ್ಲೇ ಪ್ರಭಾವ ಬೀರಿ ಸದಸ್ಯರನ್ನು ಕುಳುತುಕೊಳ್ಳವಂತೆ ಸೂಚನೆ ನೀಡಿದ್ದರು. ಹಲವು ಸದಸ್ಯರು ತುಟಕ್‌ಪಿಟಕ್ ಅನ್ನದೇ ಕುಳಿತ್ತಿದ್ದರು.ಹಿರಿಯ ಸದಸ್ಯ ಜಯಪಾಲ್ ಮಾತನಾಡಿ, ಚಿನ್ನದ ಗಣಿಗಳ ಬಡಾವಣೆಗಳಲ್ಲಿ ಅಮೃತ್ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ಪಾರ್ಕ್‌ಗಳ ಕಳಪೆ ಕಾಮಗಾರಿ ಬಗ್ಗೆ ಧ್ವನಿ ಎತ್ತಿದ್ದರು. ಕೂಡಲೇ ಪಾರ್ಕ್‌ಗಳ ನಿರ್ವಹಣೆ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.ಚಿನ್ನದ ಗಣಿಗಳ ಪ್ರದೇಶದಲ್ಲಿ ಹಾವು ಚೇಳುಗಳ ಕಾಟ:ಬಹುತೇಕ ಚಿನ್ನದ ಗಣಿಗಳ ಪ್ರದೇಶದ ಬಡಾವಣೆಗಳಲ್ಲಿ ಎಲ್ಲಿ ನೋಡಿದರೂ ಗಿಡಗಂಟೆಗಳು ಬೆಳೆದಿರುವುದರಿಂದ ಹಾವು ಚೇಳುಗಳ ಕಾಡ ಹೆಚ್ಚಾಗಿದೆ. ಇಲ್ಲಿ ಬಹುತೇಕ ಶೌಚಾಲಯಗಳು ನಿರ್ವಹಣೆ ಇಲ್ಲದೆ ಬಳಸಲು ಯೋಗ್ಯವಾಗಿಲ್ಲ. ಹಲವು ಗುಂಪು ಶೌಚಾಲಯಗಳಲ್ಲಿ ಬಳಸಲು ನೀರಿಲ್ಲ ಎಂದು ಸಭೆಯಲ್ಲಿ ಸದಸ್ಯರು ಧ್ವನಿ ಎತ್ತಿದ್ದರು.ನಗರಸಭೆ ಹೊಸ ಕಟ್ಟಡಕ್ಕೆ 10 ಕೋಟಿ:ನಗರಸಭೆ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರು.ಗಳ ವಿಸ್ಕೃತ ವರದಿ ಸರ್ಕಾರಕ್ಕೆ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಸಭೆಯಲ್ಲಿ ಶಾಸಕಿ ರೂಪಕಲಾ ಶಶಿಧರ್, ಉಪಾಧ್ಯಕ್ಷ ಜರ್ಮನ್, ಪೌರಾಯುಕ್ತ ಪವನ್ ಕುಮಾರ್, ಎಇಇ ಮಂಜುನಾಥ್, ನಗರಸಭೆ ವ್ಯವಾಸ್ಥಪಕ ಶಶಿಕುಮಾರ್ ಇದ್ದರು.