ಕನ್ನಡಪ್ರಭ ವಾರ್ತೆ ಕೆಜಿಎಫ್
ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರವು ಕೆಜಿಎಫ್‌ನಲ್ಲೇ ಕಾರ್‍ಯನಿರ್ವಹಿಸಲಿದೆ. ಪ್ರಾಧಿಕಾರ ಪ್ರತ್ಯೇಕ ಮಾಡುವುದರಿಂದ ಬಂಗಾರಪೇಟೆ ಮತ್ತು ಕೆಜಿಎಫ್ ಎರಡು ತಾಲೂಕುಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಲಿದೆ. ಇದರಿಂದ ನಗರಗಳ ಸರ್ವತೋಮುಖ ಅಭಿವೃದ್ದಿಗೆ ಅಧಿಕಾರಿಗಳು ಕೆಲಸ ಮಾಡಲು ಸಲಭವಾಗಲಿದೆ ಎಂದರು.
ತಾಲೂಕು ಅಭಿವೃದ್ಧಿಗೆ ಪೂರಕಕೆಜಿಎಫ್ ತಾಲೂಕಿನ ಬೇತಮಂಗಲ, ಕ್ಯಾಸಂಬಳ್ಳಿ, ಸುದಂರಪಾಳ್ಯ ಹಾಗೂ ಆಂದ್ರ ಗಡಿಭಾಗದ ಎಪಿಎಂಸಿ ಮಾರುಕಟ್ಟೆ ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು ಮುಂದಿನ ದಿನಗಳಲ್ಲಿ ಕೆಜಿಎಫ್ ತಾಲೂಕು ಸಮಗ್ರ ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.
ಸ್ಥಳಾಂತರ ಇಲ್ಲ: ಶಾಸಕಿ ಶಾಸಕಿ ರೂಪಕಲಾಶಶಿಧರ್ ಮಾತನಾಡಿ, ಕೆಜಿಎಫ್ ತಾಲೂಕಿನ ಜನರು ಯಾವುದೇ ಗೊಂದಲಕ್ಕೆ ಒಳಗಾಬಾರದು, ಕೆಜಿಎಫ್ ತಾಲೂಕಿಗೆ ಬೇತಮಂಗಲ, ಕ್ಯಾಸಂಬಳ್ಳಿ, ಸುಂದರಪಾಳ್ಯ ಹೋಬಳಿಗಳು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಆಗುವುದರಿಂದ ನಗರವು ಇನ್ನಷ್ಟು ಅಭಿವೃದ್ದಿ ಕಾಣಲಿದೆ, ಇದರ ಜೊತೆಗೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಖಾನೆಗಳು ಬರಲಿದ್ದು ಪ್ರಾಧಿಕಾರವು ಉತ್ತಮ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಇಂಟಿಗ್ರೇಟೆಡ್ ಟೌನ್‌ಶಿಪ್
ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರವು ರಚನೆ ಮಾಡಿರುವ ರಾಜೀವ್ ಗಾಂಧಿ ವಸತಿ ಬಡಾವಣೆಯ ಪ್ರಾಧಿಕಾರದ ಎರಡು ನಿವೇಶನಗಳನ್ನು ಒಟ್ಟುಗೂಡಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ವಲಯ ನಿಯಮಾವಳಿ ಅವಕಾಶದಂತೆ ನರ್ಸಿಂಗ್ ಹೋಂ, ಕಂ, ಹಾಸ್ಪಿಟೆಲ್ ನಿರ್ಮಾಣ ಮಾಡಲು ೨ ಕಟ್ಟಡಗಳ ನಕ್ಷೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಗರಾಭಿವೃದ್ದಿ ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಗಳನ್ನು ನಿರ್ಮಿಸುತ್ತಿವವರ ವಿರುದ್ದ ಆಯುಕ್ತರು ಕಠಿಣ ಕ್ರಮ ಕೈಗೊಂಡು ಕಟ್ಟವನ್ನು ನೆಲಸಮ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಅಗತ್ಯವಿದ್ದಲ್ಲಿ ಪೊಲೀಸ್ ಸಹಕಾರ ಪಡೆದುಕೊಂಡು ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಬೇಕೆಂದು ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರದ ಶಾಸಕರು ಆಯುಕ್ತರಿಗೆ ಸೂಚನೆ ನೀಡಿದರು.ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಇದ್ದರು.