ಶಿರೂರಲ್ಲಿ ಇಂದು ಕೆ.ಎಚ್ ಪಾಟೀಲ್ ಮೂರ್ತಿ ಅನಾವರಣ

KannadaprabhaNewsNetwork |  
Published : Jun 22, 2025, 01:18 AM IST
21ಕೆಕೆಆರ್1:ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದಲ್ಲಿ  ಮಾಜಿ ಸಚಿವ ಕೆ.ಎಚ್ ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಸಿದ್ದತೆ ಪರಿಶೀಲಿಸುತ್ತಿರುವ ಎಸ್ಪಿ. | Kannada Prabha

ಸಾರಾಂಶ

ಎಚ್‌.ಕೆ. ಪಾಟೀಲ್ 2002ರಲ್ಲಿ ನೀರಾವರಿ ಸಚಿವರಾಗಿದ್ದಾಗ ಹಿರೇಹಳ್ಳ ಜಲಾಶಯದಿಂದ ಮುಳುಗಡೆಯಾಗುತ್ತಿದ್ದ ಶಿರೂರು, ಮುತ್ತಾಳ, ವೀರಾಪೂರ, ಮುದ್ಲಾಫೂರ ಗ್ರಾಮಗಳ ಪುನರ್ವಸತಿಗೆ ಅನುಮೋದನೆ ನೀಡಿದ್ದರು. ಪುನರ್ವಸತಿ ಗ್ರಾಮಗಳ ಪುನಃಚೇತನಕ್ಕಾಗಿ ಸಾವಿರಾರು ಕೋಟಿ ಹಣ ನೀಡಿ ತಮ್ಮದೇ ಆದ ಕೊಡುಗೆ ನೀಡಿದ್ದರು.

ಕುಕನೂರು:

ತಾಲೂಕಿನ ಶಿರೂರು ಗ್ರಾಮದಲ್ಲಿ ಮಾಜಿ ಸಚಿವ ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜೂ. 22ರಂದು ಬೆಳಗ್ಗೆ 11ಕ್ಕೆ ಜರುಗಲಿದೆ.

ಎಚ್‌.ಕೆ. ಪಾಟೀಲ್ 2002ರಲ್ಲಿ ನೀರಾವರಿ ಸಚಿವರಾಗಿದ್ದಾಗ ಹಿರೇಹಳ್ಳ ಜಲಾಶಯದಿಂದ ಮುಳುಗಡೆಯಾಗುತ್ತಿದ್ದ ಶಿರೂರು, ಮುತ್ತಾಳ, ವೀರಾಪೂರ, ಮುದ್ಲಾಫೂರ ಗ್ರಾಮಗಳ ಪುನರ್ವಸತಿಗೆ ಅನುಮೋದನೆ ನೀಡಿದ್ದರು. ಪುನರ್ವಸತಿ ಗ್ರಾಮಗಳ ಪುನಃಚೇತನಕ್ಕಾಗಿ ಸಾವಿರಾರು ಕೋಟಿ ಹಣ ನೀಡಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಅದೇ ರೀತಿ ಅರಕೇರಿ ಗ್ರಾಮವನ್ನು ಕೂಡ ಪುನರ್ವಸತಿ ಪ್ರದೇಶವನ್ನಾಗಿ ಮಾಡಿದ್ದಾರೆ. ಇದರ ಸವಿನೆನಪಿಗಾಗಿ ಸರ್ಕಾರ ₹ 70 ಲಕ್ಷ ವೆಚ್ಚದಲ್ಲಿ ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಮಾಡುತ್ತಿದೆ.ಸಚಿವರ ಆಗಮನ:

ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಚಿವ ಎನ್.ಎಸ್. ಭೋಸರಾಜ, ಸಂಸದ ರಾಜಶೇಖರ ಹಿಟ್ನಾಳ ಸೇರಿದಂತೆ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಸಿಎಂ ಆರ್ಥಿಕ ಸಲೆಹೆಗಾರ ಬಸವರಾಜ ರಾಯರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀರಾಮ್ ಎಲ್. ಅರಿಸಿದ್ದಿ ಅವರು ವಾಹನಗಳ ಪಾರ್ಕಿಂಗ್ ಹಾಗೂ ಬಂದೋಬಸ್ತ್ ಕುರಿತು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.ಮುತ್ಸದ್ಧಿ ರಾಜಕಾರಣಿಯಾಗಿದ್ದ ಕೆ.ಎಚ್‌. ಪಾಟೀಲರ ಮೂರ್ತಿ ಅನಾವರಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅವರು ಒಬ್ಬ ಧೀಮಂತ ವ್ಯಕ್ತಿಯಾಗಿದ್ದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು ಎಂದು ಸಿಎಂ ಆರ್ಥಿಕ ಸಲಹೆಹಾರ ಬಸವರಾಜ ರಾಯರಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ