ಕನ್ನಡಪ್ರಭ ವಾರ್ತೆ ಬೆಂಗಳೂರು:
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13ನೇ ಬಾರಿ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದೇ ಕೊನೆಯ ಅವಧಿ ಆಗಬಹುದು. ಕಲಬುರಗಿ ಜನತೆಗೆ, ಪಕ್ಷದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ಸತತವಾಗಿ ಅವಕಾಶ ನೀಡಿದೆ. ಇಂದಿರಾ ಗಾಂಧಿ ಅವರಿಂದ ಸೋನಿಯಾ ಗಾಂಧಿಯವರೆಗೆ ನನಗೆ ಅವಕಾಶ ನೀಡಿದ್ದಾರೆ. ರಾಹುಲ್ ಗಾಂಧಿ ಕೂಡ ನನ್ನ ಜತೆಗಿದ್ದು ಪ್ರೋತ್ಸಾಹ ನೀಡಿದ್ದಾರೆ. 1972ರಲ್ಲಿ ವಿಧಾನಸೌಧಕ್ಕೆ ಕಾಲಿಟ್ಟಿದ್ದೆ. ಅನೇಕ ಏರುಪೇರು ನೋಡಿದ್ದೇನೆ ಎಂದರು.
ಪ್ರಮಾಣಪತ್ರ ಸ್ವೀಕಾರಕ್ಕೂ ಮುನ್ನ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ನಾಯಕರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಿದರು. ನಂತರ ಪ್ರಮಾಣಪತ್ರ ಸ್ವೀಕಾರಕ್ಕೆ ತೆರಳಿದರು. ಈ ವೇಳೆ ಅವರೊಂದಿಗೆ ಸಚಿವರಾದ ಈಶ್ವರ ಖಂಡ್ರೆ, ಡಾ। ಶರಣಪ್ರಕಾಶ್ ಪಾಟೀಲ್, ಶಾಸಕರಾದ ಶಿವಲಿಂಗೇಗೌಡ, ಕೋನರೆಡ್ಡಿ, ಅಶೋಕ್ ಪಟ್ಟಣ್, ಎ.ಎಸ್.ಪೊನ್ನಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಇದ್ದರು.