ಕುತ್ತೆತ್ತೂರು ಮೂರುನಾಡು ಮಾಗಣೆ ಬ್ರಹ್ಮಸ್ಥಾನ ಪುನರ್ ನಿರ್ಮಾಣ ‘ಸಂಕೋಚ’ ಕಾರ್ಯಕ್ರಮ

KannadaprabhaNewsNetwork |  
Published : Jun 06, 2025, 12:05 AM IST
ಕುತ್ತೆತ್ತೂರು ಮೂರುನಾಡು ಮಾಗಣೆ  ಬ್ರಹ್ಮಸ್ಥಾನ ಪುನರ್ ನಿರ್ಮಾಣದ ಪ್ರಯುಕ್ತ ಸಂಕೋಚ ಕಾರ್ಯಕ್ರಮ | Kannada Prabha

ಸಾರಾಂಶ

ಸುರತ್ಕಲ್‌ ಸೂರಿಂಜೆ ಸಮೀಪದ ಬ್ರಹ್ಮಸ್ಥಾನ ಕುತ್ತೆತ್ತೂರು ಮೂರುನಾಡು ಮಾಗಣೆ ಬ್ರಹ್ಮಸ್ಥಾನ ಪುನರ್ ನಿರ್ಮಾಣದ ಪ್ರಯುಕ್ತ ನಡೆದ ಸಂಕೋಚ ಕಾರ್ಯಕ್ರಮದಲ್ಲಿಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿಕರಾವಳಿ ಪ್ರದೇಶ ದೈವ ದೇವರ ನೆಲೆಬೀಡಾಗಿದ್ದು, ನಿತ್ಯ ನಿರಂತರ ಇಲ್ಲಿ ಆರಾಧನೆಗಳು ನಡೆಯುತ್ತಿವೆ. ಕುತ್ತೆತ್ತೂರಿನ ಬ್ರಹ್ಮಸ್ಥಾನ ಹಿರಿಯರ ಕಾಲದಲ್ಲಿ ವಿಜೃಂಭಣೆಯಿಂದ ಆರಾಧನೆಗಳು ನಡೆಯುತ್ತಿದ್ದು ಇದೀಗ ಬ್ರಹ್ಮಸ್ಥಾನವನ್ನು ಊರವರು ಸೇರಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಮುಂದಾಗಿರುವುದು ಅಭಿನಂದನೀಯ ಎಂದು ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.ಸುರತ್ಕಲ್‌ ಸೂರಿಂಜೆ ಸಮೀಪದ ಬ್ರಹ್ಮಸ್ಥಾನ ಕುತ್ತೆತ್ತೂರು ಮೂರುನಾಡು ಮಾಗಣೆ ಬ್ರಹ್ಮಸ್ಥಾನ ಪುನರ್ ನಿರ್ಮಾಣದ ಪ್ರಯುಕ್ತ ನಡೆದ ಸಂಕೋಚ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಬ್ರಹ್ಮ ಸಾನಿದ್ಯದಲ್ಲಿನ ನಾಗ ದೇವರ ಬಿಂಬ ಬಾಲಾಲಯದಲ್ಲಿ ಇರಿಸಲಾಯಿತು. ಬ್ರಹ್ಮ ಸ್ಥಾನದ ನೀಲ ನಕ್ಷೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಕುಡುಪು ಕೃಷ್ಣರಾಜ ತಂತ್ರಿ ಮತ್ತು ಹಯವದನ ಮೂಡಿತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಹಯವದನ ಮೂಡಿತ್ತಾಯ, ಮಿತ್ತೋಡಿ ಅರಸು ಮನೆ ಸತೀಶ್ ಹೆಗ್ಡೆ. ಇತಿಹಾಸ ತಜ್ಞ ಪ್ರೊ. ಎಸ್ ಎ ಕೃಷ್ಣಯ್ಯ. ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಕೋಡಿಕಾನ ಶ್ರೀಧರ್ ಉಡುಪ, ಉದ್ಯಮಿ ಮನೋಹರ್ ಶೆಟ್ಟಿ ಬೊಳ್ಳಾರು ಗುತ್ತು, ನಾಗೇಶ್, ಪ್ರತಾಪ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಯಾನಂದ, ಸುಕೇಶ್ ಶೆಟ್ಟಿ ಬೈಲಗುತ್ತು, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಇದ್ದರು.ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಮನೋಜ್ ಶೆಟ್ಟಿ ನಿರೂಪಿಸಿದರು, ಸತೀಶ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌