ಕನ್ನಡಪ್ರಭ ವಾರ್ತೆ ಮಂಡ್ಯ
ನಂತರ ಮಾತನಾಡಿದ ನವೀನ್ ಅವರು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನವೀನ್ ಕುಮಾರ್ ಅವರ ಚಿಕಿತ್ಸೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿದ್ದು, ಧನ ಸಹಾಯ ಮಾಡುವುದಾಗಿ ತಿಳಿಸಿದ್ದು, ಶೀಘ್ರವೇ ಇನ್ನಷ್ಟು ಧನ ಸಹಾಯ ಮಾಡುವುದಾಗಿ ಹೇಳಿದರು.
ರೋಗಿ ನವೀನ್ ಕುಮಾರ್ ಅವರ ಪತ್ನಿ ಸೌಂದರ್ಯ ಮಾತನಾಡಿ, ನನ್ನ ಪತಿ ನವೀನ್ ಕುಮಾರ್ ಅವರು ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿ 2 ಲಕ್ಷ ರು. ಖರ್ಚಾಗಿದೆ. ಹತ್ತು ದಿವಸ ಇಂಜೆಕ್ಷನ್ ನೀಡಬೇಕಾಗಿದ್ದು, ಒಂದು ದಿನಕ್ಕೆ 6,500 ರು. ಆಗಲಿದೆ. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ. ದಾನಿಗಳು ನೆರವು ನೀಡುವಂತೆ ಮನವಿ ಮಾಡಿದರು.ಮನೆ ನಿರ್ಮಿಸಿಕೊಳ್ಳಲು ಬಡವರಿಗೆ 25 ಸಾವಿರ ರು. ನೆರವು ನೀಡಿದ ರಾಜೇಶ್
ಬಡವರಾಗಿರುವ ಶಿವಣ್ಣ ಶೆಡ್ಡಿನಲ್ಲಿ ವಾಸವಾಗಿದ್ದರು. ಮನೆ ನಿರ್ಮಿಸಿಕೊಳ್ಳಲು ವಸತಿ ಯೋಜನೆ ಅಡಿ ಅನುದಾನಕ್ಕೆ ಅರ್ಜಿ ಸಲ್ಲಿಸಿ ಪಂಚಾಯ್ತಿಯಿಂದ ಅನುದಾನ ಕೊಡುವಂತೆ ರಾಜೇಶ್ ಅವರಿಗೆ ಮನವಿ ಮಾಡಿಕೊಂಡಿದ್ದರು.ಗ್ರಾಪಂಗೆ ಬಂದಿದ್ದ 8 ವಸತಿ ಯೋಜನೆ ಅಡಿಯಲ್ಲಿ ಇವರಿಗೆ ಅನುದಾನ ಸಿಗದ ಕಾರಣ ರಾಜೇಶ್ ಅವರು ತಮ್ಮ ಸ್ವಂತ ಹಣ 25,000, ರುಗಳನ್ನು ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ಮಗಳಾದ ಪರಿಣಿತ ಅವರ ಕೈಯಿಂದ ಚೆಕ್ ರೂಪದಲ್ಲಿ ನೀಡಿ ನಿಮಗೆ ಅನುದಾನ ಸಿಗದ ಕಾರಣ ನನ್ನ ದುಡಿಮೆಯಿಂದ ನಿಮಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇದನ್ನು ಮನೆ ಕಟ್ಟಿಕೊಳ್ಳಲು ಉಪಯೋಗಿಸಿಕೊಳ್ಳಿ ಎಂದರು.