ನಾಪೋಕ್ಲು: ಕೊಡಗಿನ ಕಿಗ್ಗಾಲು ಗ್ರಾಮದ ನಿಧಿ ಎಂ.ಎಸ್. ಅವರು ತರಾಸು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜನ್ಮ ಭೂಮಿ ಸಾಂಸ್ಕೃತಿಕ ನಾಗರಿಕ ವೇದಿಕೆ ವತಿಯಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ತರಾಸು ಪ್ರಶಸ್ತಿಯನ್ನು ನಿಧಿ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಿಧಿ ಕಿಗ್ಗಾಲು ಗ್ರಾಮದ ನಿವಾಸಿ ಮೊಟ್ಟೆಮನೆ ಶ್ರೀಧರ್-ರೈನಾ ದಂಪತಿ ಪುತ್ರಿ.