ಮಂಡ್ಯ ಮಂಜುನಾಥ
ವಿದ್ಯುತ್ ತಂತಿಗಳ ಮೇಲೆ ಹಾದುಹೋಗಿರುವ ಮರದ ರೆಂಬೆ- ಕೊಂಬೆಗಳನ್ನು ಅವೈಜ್ಞಾನಿಕವಾಗಿ ತೆರವುಗೊಳಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಮರದ ರೆಂಬೆ- ಕೊಂಬೆಗಳನ್ನು ಕಡಿಯುವುದೆಂದರೆ ಇಡೀ ಮರವನ್ನೇ ಬೋಳಾಗಿ ನಿಲ್ಲಿಸುವುದು ಎಂದರ್ಥವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದ ನೂರಡಿ ರಸ್ತೆಯಲ್ಲಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ಮರಗಳ ರೆಂಬೆ- ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತವೆಂಬ ಕಾರಣವನ್ನು ಮುಂದಿಟ್ಟುಕೊಂಡು ಮರದ ಎಲ್ಲಾ ರೆಂಬೆ- ಕೊಂಬೆಗಳನ್ನು ಕಡಿದುಹಾಕಲಾಗಿದೆ. ಒಂದು ಎಲೆಯೂ ಇಲ್ಲದಂತೆ ಬೋಳಾಗಿಸಿದ್ದಾರೆ. ಇದು ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ವಿಧಾನವೇ? ಪರಿಸರ ಹಾಳು ಮಾಡುವ ಇಂತಹ ಅವೈಜ್ಞಾನಿಕ ಕ್ರಮದ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೈಜ್ಞಾನಿಕ ತೆರವಿನ ಆಲೋಚನೆಗಳಿಲ್ಲ:
ಟೆಂಡರ್‌ದಾರನಿಂದ ಮನಸೋಇಚ್ಛೆ ತೆರವು:
ಮಳೆಯೂ ಇಲ್ಲ, ಗಾಳಿಯೂ ಇಲ್ಲ..!:
ನೂರಾರು ಪಕ್ಷಿಗಳು ನಿರಾಶ್ರಿತ:
ಒಂದು ಮರವನ್ನು ನೆಟ್ಟು ಬೆಳೆಸಬೇಕೆಂದರೆ ಕನಿಷ್ಠ ಎರಡು- ಮೂರು ವರ್ಷವಾದರೂ ಬೇಕು. ಪ್ರಕೃತಿದತ್ತವಾಗಿ ಬೆಳೆದುನಿಂತಿರುವ ಮರಗಳನ್ನು ಮರ ಕತ್ತರಿಸುವ ಯಂತ್ರದಿಂದ ನಿಮಿಷಗಳಲ್ಲಿ ಕಡಿದುರುಳಿಸಿದ್ದಾರೆ. ಇನ್ನು ಆ ಮರಗಳು ಚೇತರಿಕೆ ಕಂಡು ನೆರಳು ನೀಡಬೇಕಾದರೆ ವರ್ಷಗಳೇ ಬೇಕಾಗುತ್ತದೆ. ಅಲ್ಲಿಯವರೆಗೆ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಹಾಗೂ ನೆರಳನ್ನು ಆಶ್ರಯಿಸಿದ್ದ ಜನರ ಗತಿ ಏನು ಎಂಬ ಯೋಚನೆ ಅರಣ್ಯಾಧಿಕಾರಿಗಳಿಗೆ ಇಲ್ಲದಂತಾಗಿದೆ.
ಮರಗಳನ್ನು ಕಡಿಯುವುದಕ್ಕೆ ಟೆಂಡರ್ ಕರೆದು ಗುತ್ತಿಗೆ ನೀಡಿದರೆ ತಮ್ಮ ಕೆಲಸ ಮುಗಿಯಿತು ಎಂದೇ ಅಧಿಕಾರಿಗಳು ಪರಿಭಾವಿಸಿದ್ದಾರೆ. ಗುತ್ತಿಗೆ ಪಡೆದ ಟೆಂಡರ್‌ದಾರ ಯಾವ ರೀತಿ ಮರಗಳನ್ನು ಕಡಿಯುತ್ತಿದ್ದಾನೆ. ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ವೇಳೆ ಅನುಸರಿಸಬೇಕಾದ ಕ್ರಮಗಳೇನು, ಪಕ್ಷಿಗಳಿಗೆ ಮತ್ತು ನೆರಳನ್ನು ನೀಡುವ ಮರಗಳನ್ನು ಇದ್ದ ಸ್ಥಿತಿಯಲ್ಲೇ ಉಳಿಸಿಕೊಂಡು ಅಪಾಯಕ್ಕೆ ಕಾರಣವಾಗುವ ರೆಂಬೆ- ಕೊಂಬೆಗಳನ್ನು ಗುರುತು ಮಾಡಿ ಅವುಗಳನ್ನಷ್ಟೇ ಕಡಿಯುವಂತೆ ನಿರ್ದೇಶನ ಮಾಡಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತಿದ್ದಾರೆ. ಈ ಅಧಿಕಾರಿಗಳಿಗೆ ಪರಿಸರ ಪ್ರಜ್ಞೆ, ಪರಿಸರ ಉಳಿವಿನ ಗಂಧ- ಗಾಳಿಯೇ ಗೊತ್ತಿಲ್ಲದಿರುವುದು ದುರ್ದೈವದ ಸಂಗತಿ.
ಎಫ್‌ಐಆರ್ ದಾಖಲು
‘ನೂರಡಿ ರಸ್ತೆಯಲ್ಲಿರುವ ಮರಗಳನ್ನು ಮನಸೋಇಚ್ಛೆ ಕಡಿದುಹಾಕಿರುವ ಟೆಂಡರ್‌ದಾರನ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ. ನಮ್ಮ ಇಲಾಖೆ ಸಿಬ್ಬಂದಿ ೯ ಗಂಟೆಗೆ ಬರುವುದಾಗಿ ಹೇಳಿದ್ದೆವು. ಟೆಂಡರ್‌ದಾರ ಕೆಲಸದ ಆಳುಗಳೊಂದಿಗೆ ೭ ಗಂಟೆಗೇ ಬಂದು ಮರಗಳನ್ನು ಕಡಿದುಹಾಕಿದ್ದಾನೆ. ನಾವು ಗುರುತು ಮಾಡುವ ಮುನ್ನವೇ ಮರದ ರೆಂಬೆ- ಕೊಂಬೆಗಳನ್ನೆಲ್ಲಾ ಕಡಿದಿರುವುದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.’- ಶೈಲಜಾ, ಆರ್‌ಎಫ್‌ಒ, ಮಂಡ್ಯ
ಪರಿಸರ ಪ್ರಜ್ಞೆಯೇ ಇಲ್ಲ‘ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಸರ ಪ್ರಜ್ಞೆಯೇ ಇಲ್ಲ. ಮರದ ರೆಂಬೆಗಳನ್ನು ಕಡಿಯುವುದಕ್ಕೆ ಟೆಂಡರ್ ಕೊಟ್ಟು ಎಸಿ ರೂಮ್‌ನಲ್ಲಿ ಕುಳಿತಿರುತ್ತಾರೆ. ಪಕ್ಷಿಗಳಿಗೆ, ಜನರಿಗೆ ಏನಾದರೆ ಅವರಿಗೇನು? ಮರಗಳನ್ನು ಬೆಳೆಸಿ ಅರಣ್ಯಾಭಿವೃದ್ಧಿ ಮಾಡುವ ಮನೋಭಾವವಂತೂ ಇಲ್ಲ. ಬೆಳೆದು ನಿಂತಿರುವ ಮರಗಳನ್ನು ಉಳಿಸಿಕೊಳ್ಳುವ ಕಾಳಜಿಯೂ ಇಲ್ಲವೆಂದರೆ ದುರಂತದ ಸಂಗತಿ. ಬೇಸಿಗೆ ಎದುರಾದಾಗಷ್ಟೇ ಮರಗಳ ಮಹತ್ವ ಅರಿವಾಗಲು ಸಾಧ್ಯ.’
- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟ