ಮೂಲ್ಕಿ: ಬ್ಯಾಂಕ್‌ಗಳು ಮೌಲ್ಯಾಧಾರಿತ ಮತ್ತು ಫಲಿತಾಂಶ ಆಧಾರಿತ ಸೇವೆ ಒದಗಿಸಬೇಕು. ಗ್ರಾಹಕರೊಂದಿಗೆ ಬಲವಾದ, ಸ್ನೇಹಪರ ಸಂಬಂಧಗಳನ್ನು ನಿರ್ಮಿಸಬೇಕೆಂದು ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚಿನ ಧರ್ಮಗುರು ಜೋಕಿಂ ಫರ್ನಾಂಡಿಸ್ ಹೇಳಿದರು.ಎಂಸಿಸಿ ಮಂಗಳೂರು ಬ್ಯಾಂಕಿನ ಕಿನ್ನಿಗೋಳಿ ಶಾಖೆಯಲ್ಲಿ 12ನೇ ಎಟಿಎಂ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಕಳೆದ 28 ವರ್ಷಗಳಲ್ಲಿ ಶಾಖೆಯ ಬೆಳವಣಿಗೆಗೆ ನಿರಂತರ ಬೆಂಬಲ ಸಿಕ್ಕಿದ್ದು, ಕಳೆದ ಏಳು ವರ್ಷಗಳ ಅವಧಿಯಲ್ಲಿ ಬ್ಯಾಂಕಿನ ವಹಿವಾಟು 500 ಕೋಟಿಯಿಂದ 1300 ಕೋಟಿಗೆ ಏರಿದೆ. ಸಂತೆಕಟ್ಟೆ, ದೇರಳಕಟ್ಟೆ ಮತ್ತು ಇತರ ಸ್ಥಳಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದರು.ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿಂಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ ಚೀಫ್ ಜನರಲ್ ಮ್ಯಾನೇಜರ್ ಡಾ.ರುಡಾಲ್ಫ್ ಜೋಯರ್ ನೊರೊನ್ಹಾ ಉದ್ಘಾಟಿಸಿದರು.ಬಳ್ಕುಂಜೆಯ ಸೈಂಟ್ ಪೌಲ್ ಚರ್ಚಿನ ಧರ್ಮಗುರು ಪಾವ್ಲ್ ಸಿಕ್ವೇರ ಉದ್ಘಾಟನೆಗೊಂಡ ಎಟಿಎಂನಿಂದ ಮೊದಲ ನಗದು ಹಿಂಪಡೆದರು. ಮಾಜಿ ಎನ್‌ಆರ್‌ಐ, ಕೆಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ವಿನ್ಸೆಂಟ್ ಡಿ ಪಾಲ್, ಲೆಕ್ಕಪರಿಶೋಧಕ ಜೆರೋಮ್ ಡಿ ಅಲ್ಮೇಡಾ, ಉದ್ಯಮಿ ಧನಂಜಯ ಪಿ. ಶೆಟ್ಟಿಗಾರ್ ಮುಖ್ಯ ಅತಿಥಿಗಳಾದ್ದರು.ಬ್ಯಾಂಕಿನ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕ ಅನಿಲ್ ಆರ್. ಡಿಸೋಜ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಮೆಲ್ವಿನ್ ವಾಸ್, ಡೆವಿಡ್ ಡಿಸೋಜ, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್, ಸಿಬ್ಬಂದಿ, ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು.ಸಾಧಕರಿಗೆ ಸನ್ಮಾನ:ಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿಎ ಪೂರ್ಣಗೊಳಿಸಿದ ನಿಕಿತಾ ರಿಯೋನಾ ಡಿಸೋಜ, ಡಾ.ಮೆಲಿಶಾ ರೊಡ್ರಿಗಸ್ (ನೀಟ್ ಪಿಜಿ 163ನೇ ರ‍್ಯಾಂಕ್) ಮತ್ತು ಶೋನ್ ಸಿಕ್ವೇರ (ಕರಾಟೆ ಚಾಂಪಿಯನ್) ಅವರನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು. ಸೆ.13ರಂದು ಹುಟ್ಟುಹಬ್ಬ ಆಚರಿಸಿಕೊಂಡ ಗ್ರಾಹಕರನ್ನು ಕೇಕ್ ಕತ್ತರಿಸುವ ಮೂಲಕ ಸನ್ಮಾನಿಸಲಾಯಿತು. ಸೆ.19ರಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಡೇನಿಯಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.ನಿರ್ದೇಶಕಿ ಡಾ.ಫ್ರೀಡಾ ಫ್ಲಾವಿಯಾ ಡಿಸೋಜ ಸ್ವಾಗತಿಸಿದರು. ಅನ್ಸಿಲ್ಲಾ ಫರ್ನಾಂಡಿಸ್ ಮತ್ತು ಡೇಲ್ ಡಿಸೋಜ ಪ್ರಾರ್ಥಿಸಿದರು. ಲವಿಟಾ ಡಿಸೋಜ ಮೂಲ್ಕಿ ವಂದಿಸಿ, ನಿರೂಪಿಸಿದರು.