ಕ್ರೀಡಾಕೂಟ ದೈಹಿಕ, ಮಾನಸಿಕ ಆರೋಗ್ಯ ವರ್ಧನೆಗೆ ಸಹಕಾರಿ: ಡಾ.ಪುನರೂರು

KannadaprabhaNewsNetwork |  
Published : Mar 11, 2026, 02:30 AM IST
ಪುನರೂರುನಲ್ಲಿ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ | Kannada Prabha

ಸಾರಾಂಶ

ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ವಠಾರದಲ್ಲಿ ಪುನರೂರು ಗುರುಬ್ರಹ್ಮ ಫ್ರೆಂಡ್ಸ್‌ ಆಶ್ರಯದಲ್ಲಿ ಜರುಗಿದ ದಿ. ಸುರೇಂದ್ರ ಪುನರೂರು ಸ್ಮರಣಾರ್ಥ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಲ್ಕಿ: ಕ್ರೀಡಾ ಕೂಟಗಳು ಮಾನಸಿಕ ಹಾಗೂ ದೈಹಿಕ ದೃಢತೆ ಹಾಗೂ ಆರೋಗ್ಯವರ್ಧನೆಗೆ ಸಹಕಾರಿಯಾಗಿದ್ದು, ಸೋಲು ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ವಠಾರದಲ್ಲಿ ಪುನರೂರು ಗುರುಬ್ರಹ್ಮ ಫ್ರೆಂಡ್ಸ್‌ ಆಶ್ರಯದಲ್ಲಿ ಜರುಗಿದ ದಿ. ಸುರೇಂದ್ರ ಪುನರೂರು ಸ್ಮರಣಾರ್ಥ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಲತಾ ರಾವ್‌ ಅವರನ್ನು ಗೌರವಿಸಲಾಯಿತು. ಪುನರೂರು ಸೇವಾ ನಿಧಿ ಟ್ರಸ್ಟ್‌ ನ ಸುರೇಶ್‌ ರಾವ್‌ ಪುನರೂರು, ಬ್ರಹ್ಮ ಮುಗೇರ ದೈವಸ್ಥಾನ ಜೀರ್ಣೋಧ್ಧಾರ ಸಮಿತಿಯ ರಾಮಚಂದ್ರ ರಾವ್‌ ಎಸ್‌. ಕೋಡಿ, ಉದ್ಯಮಿಗಳಾದ ಸುನಿಲ್‌ ಅಂಚನ್‌, ತಾರನಾಥ ದೇವಾಡಿಗ, ಕಿನ್ನಿಗೋಳಿ ಗ್ರಾಪಂ ಮಾಜಿ ಸದಸ್ಯೆ ಹೇಮಲತಾ ಪುನರೂರು, ದೈವಸ್ಥಾನದ ಗುರಿಕಾರ ಮುತ್ತಪ್ಪ ಪುನರೂರು, ದೈವಸ್ಥಾನದ ಅರ್ಚಕ ರಘುರಾಮ ಪುನರೂರು, ದೈವಸ್ಥಾನದ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಹರೀಶ್‌ ಪಿ., ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಉಮೇಶ್‌ ಪಿ, ಸಂಘಟಕ ಗೋಪಾಲಕೃಷ್ಣ ಪುನರೂರು, ಸಂತೋಷ್‌ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

ರಾಕೇಶ್‌ ಪುನರೂರು ಸ್ವಾಗತಿಸಿದರು. ದುರ್ಗಾಪ್ರಸಾದ್‌ ಕೊಂಡೇಲ ನಿರೂಪಿಸಿದರು. 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ