ದಲಿತ, ಶೋಷಿತರ ಆಶಾ ಕಿರಣ ಅಂಬೇಡ್ಕರ್

KannadaprabhaNewsNetwork |  
Published : Apr 22, 2026, 01:15 AM IST
ಪೋಟೋ, 21ಎಚ್ಎಸ್‌ಡಿ1: ತಾಲೂಕಿನ ಜೋಡಿ ಶ್ರೀರಂಗಾಪುರ ಗ್ರಾಮದ  ಅಂಬೇಡ್ಕರ್ ಕಾಲೋನಿಯ  ಜೈ ಭೀಮ್ ಸಂಘಟನೆ ವತಿಯಿಂದ     ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ  135 ನೇ ಜಯಂತಿಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಜೋಡಿ ಶ್ರೀರಂಗಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ಜೈ ಭೀಮ್ ಸಂಘಟನೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುಗ೯

ದಲಿತರ ಶೋಷಿತರ ಆಶಾ ಕಿರಣ ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾ ಬಿಎಸ್‌ಪಿ ಪಾಟಿ೯ ಅಧ್ಯಕ್ಷ ತಿಮ್ಮಣ್ಣ ತಿಳಿಸಿದರು.ತಾಲೂಕಿನ ಜೋಡಿ ಶ್ರೀರಂಗಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ಜೈ ಭೀಮ್ ಸಂಘಟನೆ ವತಿಯಿಂದ ಆಯೋಜಿಸಾಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿ ಕಾಯ೯ಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾಚ೯ನೆ ಮಾಡಿ ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ರವರು ದಲಿತ ಸಮಾಜದಲ್ಲಿ ಹುಟ್ಟಿ ಪ್ರಪಂಚದಲ್ಲಿ ಯಾರು ಪಡೆಯಲಾರದ ಶಿಕ್ಷಣ ವನ್ನು ಪಡೆದು ಈ ದೇಶದ ಸರ್ವ ಜಾತಿ ಜನಾಂಗಕ್ಕೂ ಜಾತ್ಯಾತೀತವಾದ ಪ್ರಜಾ ಪ್ರಭುತ್ವದ ಸಂವಿಧಾನ ಬರೆದು ಕೊಟ್ಟ ಮಹಾನ್ ಚೇತನ, ವಿಶ್ವ ಜ್ಞಾನಿ ಇಂಥ ಮಹಾನ್ ನಾಯಕನ ಜಯಂತಿಯನ್ನು ಪ್ರತಿ ಹಳ್ಳಿಗಳಲ್ಲಿ, ಕೇರಿ, ಹಟ್ಟಿಗಳಲ್ಲಿ ಆಚರಿಸುವ ಮೂಲಕ ಯುವ ಜನತೆ ಅವರ ತತ್ವಾದಶ೯ಗಳ ಅಡಿಯಲ್ಲಿ ಸಾಗಿ ಉನ್ನತ ಶಿಕ್ಷಣ ಪಡೆದು ಅವರಂತೆ ಮಹಾನ್ ನಾಯಕರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಡಿಎಸ್‌ಎಸ್ ಮಾಜಿ ಸಂಚಾಲಕ ಆರ್.ಸುರೇಶ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಶೋಷಿತರ ಶಕ್ತಿ. ಅವರ ಬಾಲ್ಯ, ಶಿಕಣ, ಅನುಭವಿಸಿದ ಜಾತಿ ನಿಂದನೆ ಅನುಭವಿಸಿದ ಯಾತನೆ ಅವರ ಹೋರಾಟ, ಎಲ್ಲದರ ಮಧ್ಯೆ ಈ ದೇಶಕ್ಕೆ ಕೊಟ್ಟ ಸಂವಿಧಾನ ಎಲ್ಲವನ್ನು ಯವ ಜನತೆ ಅಥ೯ಮಾಡಿ ಕೊಂಡು ಮುಂದೆ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಪೀಲಾಪುರ ಆರ್.ಕಂಠೇಶ್ ಅಂಬೇಡ್ಕರ್ ಕುರಿತು ಕೆಲವು ಕ್ರಾಂತಿ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ, ರಾಜಪ್ಪ, ತಾಲೂಕು ಡಿಎಸ್‌ಎಸ್‌ ಖಜಾಂಚಿ ಕಣಿ೯, ಚೇತನ, ತಿಪ್ಪೇಶಪ್ಪ, ಚೌಡಪ್ಪ, ಹನುಮಂತಪ್ಪ, ಮಂಜಪ್ಪ, ಆರ್.ಮಂಜುನಾಥ್, ಅಣ್ಣಪ್ಪ, ಸಿದಪ್ಪ, ಜೆ.ಟಿ.ಮಂಜುನಾಥ್ ನೂರಾರು ಮಹಿಳೆಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ಮ ಸಿದ್ದಾಂತ ಒಡೆದು ಕಾಯಕ ಸಂಸ್ಕೃತಿ ತಂದ ಬಸವೇಶ್ವರ - ಡಾ.ಕೋಡಿರಂಗಪ್ಪ
ಮಹಿಳಾ ಮೀಸಲು ವಿಧೇಯಕ ಸೋಲಿಗೆ ಇಂಡಿಯಾ ಕಾರಣ