ಕನ್ನಡ ಸಾಹಿತ್ಯಕ್ಕೆ ಫರ್ಡಿನಾಂಡ್ ಕಿಟಲ್ ಅವರ ಅಪಾರ ಕೊಡುಗೆ ಇದೆ ಎಂದು ಮಂಗಳೂರು ಸಿಎಸ್‌ಐಕೆಎಸ್‌ಡಿಯ ವಿಶ್ರಾಂತ ಸಭಾ ಪಾಲಕ ರೆವೆರೆಂಡ್ ಐಸನ್ ಸುಕುಮಾರ್ ಪಾಲನ್ನ ಹೇಳಿದ್ದಾರೆ.
ಮಡಿಕೇರಿ: ಕನ್ನಡ ಸಾಹಿತ್ಯಕ್ಕೆ ಫರ್ಡಿನಾಂಡ್ ಕಿಟಲ್ ಅವರ ಅಪಾರ ಕೊಡುಗೆ ಇದೆ ಎಂದು ಮಂಗಳೂರು ಸಿಎಸ್‌ಐಕೆಎಸ್‌ಡಿಯ ವಿಶ್ರಾಂತ ಸಭಾ ಪಾಲಕ ರೆವೆರೆಂಡ್ ಐಸನ್ ಸುಕುಮಾರ್ ಪಾಲನ್ನ ಹೇಳಿದ್ದಾರೆ.ಸುಂಟಿಕೊಪ್ಪದಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಿಎಸ್‌ಐ ಇಮ್ಯಾನ್ಯುವೆಲ್ ದ್ವಾರ ಉದ್ಘಾಟಿಸಿ ಅವರು ಮಾನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಸುಂಟಿಕೊಪ್ಪದಲ್ಲಿ ನಡೆಯುತ್ತಿರುವುದು ವಿಶೇಷ. ಸಿಎಸ್‌ಐ ಇಮ್ಯಾನ್ಯುವೆಲ್ ಇದರ ಸದಸ್ಯರಾದ ವಿಲಿಯಂ ಸಹೋದರರು ಕನ್ನಡ ಸ್ವಾಗತ ದ್ವಾರವನ್ನು ಸಿದ್ಧಪಡಿಸಿದ್ದಾರೆ. ಇದರ ಪ್ರಯುಕ್ತ ನಮ್ಮನ್ನು ಆಹ್ವಾನಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ. ನಮ್ಮ ದೇಶ ಎಲ್ಲಾ ಧರ್ಮಗಳ ಜನರು, ಸಂತೋಷದಿಂದ ಒಗ್ಗೂಡಿ ಬಾಳುವಂತಹ ಪ್ರಜಾಪ್ರಭುತ್ವ ದೇಶ, ರಾಜ್ಯಕ್ಕೆ ವಿಶೇಷ ಮಹತ್ವವಿದೆ. ಕನ್ನಡ ಭಾಷೆಗೆ ಶ್ರೇಷ್ಠವಾದ ಕೊಡುಗೆ ನೀಡಿದವರು ಫರ್ಡಿನಾಂಡ್ ಕಿಟೆಲ್. ಕನ್ನಡ ನಿಘಂಟು ಮೊಟ್ಟ ಮೊದಲು ರಚನೆ ಮಾಡಿದ್ದಾರೆ. ಮಂಗಳೂರು ಸಮಾಚಾರ ನೀಡಿ ಕನ್ನಡ ಪತ್ರಿಕಾ ರಂಗಕ್ಕೆ ಸಾಹಿತ್ಯಕ್ಕೆ ನೀಡಲಾಗಿದೆ ಎಂದು ಹೇಳಿದರು. ಸಿಎಸ್‌ಐ ಇಮ್ಯಾನ್ಯುವೆಲ್ ದೇವಾಲಯ ಹಾಗೂ ಕೊಡಗು ವಲಯ ಅಧ್ಯಕ್ಷರು ರೆ. ಜೈಸನ್ ಗೌಡರ್ ಮಾತನಾಡಿ, ಕಿಟೆಲ್ ಅವರು ಆಂಗ್ಲಾ ಭಾಷೆಯವರು ಆದರೂ ಕೂಡ ಕೊಡಗಿಗೆ ರಾಜ್ಯಕ್ಕೆ ಕನ್ನಡವನ್ನು ಕೊಡುಗೆ ನೀಡಿದ್ದಾರೆ. ಆಂಗ್ಲಾ ಭಾಷೆಕ್ಕಿಂತ ಹೆಚ್ಚಿನ ಆದ್ಯತೆಯನ್ನು ಕನ್ನಡಕ್ಕೆ ನೀಡಿದ್ದಾರೆ. ನಾವು ಇನ್ನೂ ಅಧಿಕವಾಗಿ ಕನ್ನಡವನ್ನು ಪ್ರೀತಿಸಿ, ಗೌರವಿಸಿ ಆದ್ಯತೆ ನೀಡಬೇಕು.ವಿಲಿಯಂ, ಸಂತೋಷ್, ವರ್ಗೀಸ್, ರತ್ನಕುಮಾರ್, ಜೇಮ್ಸ್, ಬಸವರಾಜು, ಆಲ್ವಿನ್, ನೋಯಲ್, ಪ್ರಶೀಲ, ಸುನಿತ, ರುಕ್ಮಿಣಿ ಜಯಕುಮಾರ್, ವಸಂತ ಜೇಮ್ಸ್, ಡೆನಿನಾ, ತಶಿನಾ, ಮಕ್ಕಳಾದ ರೈಚಲ್, ಆಶಿನಿ, ಸ್ಟಾಲಿನ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.