ಚೆನ್ನಮ್ಮನ ಮನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಆದಿ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಶೌರ್ಯ ಮತ್ತು ಸಾಹಸ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದು ನಿವೃತ್ತ ಶಿಕ್ಷಕ ಎಸ್.ಎಫ್.ಆದಿ ಹೇಳಿದರು.
ಲಕ್ಷ್ಮೇಶ್ವರ ತಾಲೂಕು ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಸೋಮವಾರ ಸಂಜೆ ಪಟ್ಟಣದ ಸೊಪ್ಪಿನಕೇರಿ ಓಣಿಯ ಶೇಕಪ್ಪ ಹುರಕಡ್ಲಿ ನಿವಾಸದಲ್ಲಿ ಚೆನ್ನಮ್ಮನ ಮನೆ-12ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಕಿತ್ತೂರ ರಾಣಿ ಚೆನ್ನಮ್ಮ ಬ್ರೀಟಿಷರ ವಿರುದ್ಧ ಹೋರಾಡುವ ಮೂಲಕ ಕನ್ನಡ ನಾಡಿನ ಇತಿಹಾಸದಲ್ಲಿ ಅಜರಾಮವಾಗಿದ್ದಾರೆ. ಭಾರತದ ಸ್ವಾತಂತ್ರ್ಯದ ಚರಿತ್ರೆಯಲ್ಲಿ ಮೊದಲ ಸ್ವಾತಂತ್ರ್ಯದ ಕಹಳೆ ಊದುವ ಮೂಲಕ ಬ್ರೀಟಿಷರ ನಿದ್ದೆಗೆಡಿಸಿದ್ದರು. ಭಾರತದ ಅಖಂಡತೆಗೆ ಸವಾಲಾಗಿದ್ದ ಬ್ರೀಟಿಷರನ್ನು ಸೆದೆ ಬಡೆದು ಭಾರತೀಯರ ಸ್ವಾತಂತ್ರ್ಯ ಪ್ರೇಮವನ್ನು ಎತ್ತಿ ತೋರಿಸುವ ಕಾರ್ಯ ಮಾಡಿದರು. ಅವರ ಆದರ್ಶಗಳು ಇಂದಿಗೂ ನಮಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.
ಸ್ನೇಹಾ ಹೊಟ್ಟಿ ಸ್ವಾಗತಿಸಿದರು, ಚಂದ್ರು ಮಾಗಡಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಚೌಕನವರ ವಂದಿಸಿದರು.