ಶಹಾಪುರ: ಮೊದಲನೆಯ ಹೆಂಡತಿ ಇದ್ದರೂ 2ನೇ ಮದುವೆಯಾದ ಆರೋಪ ಸಾಬೀತಾಗಿದ್ದರಿಂದ ತಾಲೂಕಿನ ಕ್ಯಾತನಾಳ ಗ್ರಾಮದ ನಾಗರಾಜ ಹಾಗೂ ಇತರ ನಾಲ್ವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ದಂಡವನ್ನು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾದ ಶೋಭಾ ವಿಧಿಸಿದ್ದಾರೆ. ಕ್ಯಾತನಾಳ ಗ್ರಾಮದ ನಾಗರಾಜ, ಶೈಲಮ್ಮ, ಭೀಮರತಿ, ಶರಣಗೌಡ ಹಾಗೂ ಶಾಂತಮ್ಮ ಶಿಕ್ಷೆಗೆ ಒಳಗಾದ ಆರೋಪಿಗಳು. ಬೇವನಿನಹಳ್ಳಿ ಗ್ರಾಮದ ಲಕ್ಷ್ಮಿ ಎಂಬುವರನ್ನು ಕ್ಯಾತನಾಳ ಗ್ರಾಮದ ನಾಗರಾಜ ಮದುವೆಯಾಗಿದ್ದರು. ನಂತರ 2015 ಮಾರ್ಚ್ 21ರಂದು ತಾಲೂಕಿನ ಬಲಭೀಮೇಶ್ವರ ದೇವಸ್ಥಾನದಲ್ಲಿ ಶೈಲಮ್ಮನನ್ನು ನಾಗರಾಜ 2ನೇ ಮದುವೆಯಾಗಿದ್ದಾರೆ ಹಾಗೂ ಅವರ ಸಂಬಂಧಿಕರು ಮದುವೆಗೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಶಹಾಪುರ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು ಎಂದು ಫಿರ್ಯಾದಿದಾರಳ ಪರ ವಕೀಲ ಟಿ.ನಾಗೇಂದ್ರ ಅವರು ಮಾಹಿತಿ ನೀಡಿದ್ದಾರೆ.