ಬೆಳಗ್ಗೆ 11.30ಕ್ಕೆ ಚಾಮುಂಡಿವನಂ ಬಳಿ ವಿವಿಧ ಕ್ಷೇತ್ರದಲ್ಲಿ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಸಿಹಿ ವಿತರಣೆ
ಕನ್ನಡಪ್ರಭ ವಾರ್ತೆ ಮೈಸೂರು
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರ ಹುಟ್ಟುಹಬ್ಬ ಅಂಗವಾಗಿ ಫೆ.7 ರಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿಧಡೆ ಅಭಿಮಾನಿಗಳು ವಿವಿಧಡೆ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.ಬೆಳಗ್ಗೆ 7ಕ್ಕೆ ಕಾರ್ಯಕರ್ತರೊಂದಿಗೆ ಎಂ.ಕೆ. ಸೋಮಶೇಖರ್ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 10ಕ್ಕೆ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನದ ಮುಂಭಾಗ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಉಪಹಾರ ವಿತರಣೆ, ಬೆಳಗ್ಗೆ 10.30ಕ್ಕೆ ಮಕ್ಕಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ, ಬೆಳಗ್ಗೆ 11ಕ್ಕೆ ಕುವೆಂಪುನಗರ ಜೋಡಿ ಬಸವ ರಸ್ತೆಯ ಶಿವಸಂಗಮ ಬಿಲ್ಡರ್ಸ್ ಆವರಣದಲ್ಲಿ ಹುಟ್ಟು ಹಬ್ಬ ಆಚರಣೆ ನಡೆಯಲಿದೆ.ಬೆಳಗ್ಗೆ 11.30ಕ್ಕೆ ಚಾಮುಂಡಿವನಂ ಬಳಿ ವಿವಿಧ ಕ್ಷೇತ್ರದಲ್ಲಿ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಸಿಹಿ ವಿತರಣೆ, 12.30ಕ್ಕೆ ಚೆಲುವಾಂಬ ಆಸ್ಪತ್ರೆಯ ಮುಂಭಾಗದಲ್ಲಿ ರೋಗಿಗಳು ಮತ್ತು ರೋಗಿಗಳ ಪಾಲಕರಿಗೆ ಅನ್ನ ದಾಸೋಹ, 12.45ಕ್ಕೆ ಚಾಮುಂಡಿಪುರಂನ ಅರುಣೋದಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಭೋಜನ ಏರ್ಪಡಿಸಲಾಗಿದೆ.ಮಧ್ಯಾಹ್ನ 1ಕ್ಕೆ ಚಿಕ್ಕಹರದನಹಳ್ಳಿಯ ಛಾಯಾದೇವಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಮತ್ತು ಮಕ್ಕಳಿಗೆ ವಿಶೇಷ ಊಟ, ಮಧ್ಯಾಹ್ನ 2ಕ್ಕೆ ಸಿದ್ದಾರ್ಥ ಬಡಾವಣೆಯಲ್ಲಿ ಕ್ರೇನ್ ಮೂಲಕ ಬೃಹತ್ ಮೋಸಂಬಿ ಹಾರದ ಮೂಲಕ ಸ್ವಾಗತಿಸಿ ಡೊಳ್ಳು ನಗಾರಿಯೊಂದಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ, ಸಂಜೆ 4.30ಕ್ಕೆ ಸಿಎಸ್ಐ ಹಾರ್ಡ್ವಿಕ್ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಉಪಾಹಾರ ವಿತರಣೆ, 4:45ಕ್ಕೆ ವಿದ್ಯಾರಣ್ಯಪುರಂ, ಸಂಜೆ 5ಕ್ಕೆ ಅಶೋಕಪುರಂ, 5.30ಕ್ಕೆ ವಿವೇಕಾನಂದ ವೃತ್ತದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.ಸಂಜೆ 6.30ಕ್ಕೆ ಜನಸ್ಪಂದನ ಟ್ರಸ್ಟ್ ಮತ್ತು ಎಂ.ಕೆ. ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಮತದಾನ ಪ್ರಜಾಪ್ರಭುತ್ವಕ್ಕೆ ಎಷ್ಟು ಪೂರಕ ಕುರಿತು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ವಿಚಾರ ಮಂಡಿಸಲಿದ್ದು, ನಂತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಂಕಷ್ಟದಲ್ಲಿ ಇರುವ ಆಯ್ದ ರೋಗಿಗಳಿಗೆ ಆರ್ಥಿಕ ಸಹಾಯ ವಿತರಣೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಂಜೂರಾತಿ ಪತ್ರ ವಿತರಣೆಜೆ.ಪಿ. ನಗರ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಅರ್ಜಿ, ದಾಖಲೆಗಳನ್ನು ಸ್ವೀಕರಿಸಿ ಅವರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ವೇತನ ಮಂಜೂರಾತಿ ಪತ್ರಗಳನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಶುಕ್ರವಾರ ವಿತರಿಸಿದರು.ಕಾಂಗ್ರೆಸ್ ಮುಖಂಡರಾದ ಜಗನ್ನಾಥ್ ಭೋವಿ, ಮಹೇಂದ್ರಗೌಡ, ಶ್ರೀಕಾಂತ್ ಕಶ್ಯಪ್, ನವೀನ್ ಬೋವಿ, ಶಿವು, ಮನು, ಆನಂದ್, ಮಹದೇವ, ಜಯರಾಮ್, ಶ್ಯಾಮ್, ಅರುಣ್ ಮೊದಲಾದಲರು ಇದ್ದರು.