ಕಿತ್ತೂರು ರಾಣಿ ಚೆನ್ನಮ್ಮ ಧೈರ್ಯ - ಸಾಹಸ ಮಹಿಳೆಯರಿಗೆ ಮಾದರಿ: ಪರಿಮಳ

KannadaprabhaNewsNetwork |  
Published : Oct 24, 2025, 01:00 AM IST
23ಜಿಯುಡಿ1 | Kannada Prabha

ಸಾರಾಂಶ

ಸ್ತ್ರೀಯರು ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರೇರಣೆ. ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಿಡಿದೆದ್ದು ಅವರ ಅಟ್ಟಹಾಸ ಮಟ್ಟ ಹಾಕಿದ ವೀರಮಹಿಳೆ ಎಂದರೇ ತಪ್ಪಾಗಲಾರದು.

ಕನ್ನಡಪ್ರಭವಾರ್ತೆ ಗುಡಿಬಂಡೆ

ಬ್ರಿಟೀಷ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆ ಊದಿ ಹೋರಾಡಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರಿ. ಅವರ ಧೈರ್ಯ ಸಾಹಸ ಇಂದಿನ ಮಹಿಳೆಯರಿಗೆ ಮಾದರಿ ಹಾಗೂ ಆದರ್ಶ ಎಂದು ನ್ಯೂ ವಿಷನ್ ಶಾಲೆ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಅವರು, ಸ್ತ್ರೀಯರು ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರೇರಣೆ. ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಿಡಿದೆದ್ದು ಅವರ ಅಟ್ಟಹಾಸ ಮಟ್ಟ ಹಾಕಿದ ವೀರಮಹಿಳೆ ಎಂದರೇ ತಪ್ಪಾಗಲಾರದು. ಸುಮಾರು ೨೦೦ ವರ್ಷಗಳ ಕಾಲ ನಮ್ಮ ದೇಶ ಆಳಿ, ನಮ್ಮ ಸಂಪತ್ತನ್ನು ದೋಚಿ, ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದ ಬ್ರಿಟೀಷರನ್ನು ದೇಶ ಬಿಟ್ಟು ತೊಲಗಿಸಲು ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮಹಾನ್ ವ್ಯಕ್ತಿಗಳಲ್ಲಿ ಚೆನ್ನಮ್ಮ ಅಗ್ರಗಣ್ಯರಾಗಿದ್ದಾರೆ.ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಚೆನ್ನಮ್ಮನವರ ಜೊತೆಯಲ್ಲೇ ಇದ್ದಂತಹ ಕೆಲವರು ದುಷ್ಕರ್ಮಿಗಳಿಂದ ಚೆನ್ನಮ್ಮ ಬ್ರೀಟಿಷರ ಸೆರೆಗೆ ಸಿಗಬೇಕಾಯಿತು. ಚೆನ್ನಮ್ಮ ನಂತೆ ಇಂದಿನ ಮಹಿಳೆಯರು ಸಹ ಧೈರ್ಯ ಸಾಹಸಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

ಬಳಿಕ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ನಾಡಿನ ಹೆಮ್ಮೆಯ ಮಗಳಾದ ಕಿತ್ತೂರ ರಾಣಿ ಚೆನ್ನಮ್ಮಳ ಆದರ್ಶ ಪಾಲಿಸಬೇಕೆಂದರು. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸುವ ಮೂಲಕ ಅವರ ದೇಶ ಪ್ರೇಮ, ಧೈರ್ಯ, ಸಾಹಸಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಬೇಕಿದೆ. ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಿಂದಲೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾಳೆ. ಪುರುಷರಿಗೆ ಸರಿಸಮನಾದ ಕುದುರೆ ಸವಾರಿ ಮತ್ತಿತರೆ ಕೌಶಲ್ಯ ಕಲಿತಿದ್ದಳು. ಸ್ತ್ರೀಯರು ಛಲ ಮತ್ತು ಪ್ರತಿಭೆ ಇದ್ದಲ್ಲಿ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದನ್ನು ಚೆನ್ನಮ್ಮನಿಂದ ನಾವು ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾ ಸಮಿತಿಯ ಆದಿರೆಡ್ಡಿ, ಕೃಷಿ ಇಲಾಖೆಯ ಕೇಶವರೆಡ್ಡಿ, ರೇಷ್ಮೆ ಇಲಾಖೆಯ ನಟರಾಜ್, ಪಶು ಇಲಾಖೆಯ ಸುಬ್ರಮಣಿ, ಮುಖಂಡರಾದ ದಪ್ಪರ್ತಿ ನಂಜುಂಡ, ಗಂಗಾಧರಪ್ಪ, ಅಂಬಿಕಾ ಸೇರಿದಂತೆ ಹಲವರು ಇದ್ದರು.

---------------

23ಜಿಯುಡಿ1

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ