ದೇಶಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಕೊಡುಗೆ ಅನನ್ಯ: ಬಸಲಿಂಗಪ್ಪ ಭೂತೆ

KannadaprabhaNewsNetwork |  
Published : Oct 24, 2026, 02:30 AM IST
ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಜರುಗಿತು. | Kannada Prabha

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಿನ್ನೆಲೆಯಲ್ಲಿ ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಯಲಬುರ್ಗಾ: ರಾಷ್ಟ್ರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಕೆಚ್ಚೆದೆಯ ಹೋರಾಟ ಇತಿಹಾಸದಲ್ಲಿ ಅಜರಾಮರವಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಜರುಗಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಡೆಸಿದ ಹೋರಾಟವನ್ನು ದೇಶದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಹೋರಾಟದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಈ ಮಹನೀಯರು ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸುವ ಜತೆಗೆ ಅವರ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಈಶಣ್ಣ ಗುಳಗಣ್ಣವರ, ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ, ಪಂಚಮಸಾಲಿ ಸಮಾಜದ ಅಧ್ಯಕ್ಷ ಕೆ.ಜಿ. ಪಾಟೀಲ ಹಾಗೂ ವಕೀಲ ರಾಜಶೇಖರ ನಿಂಗೋಜಿ ಮಾತನಾಡಿದರು. ಜಯಂತಿ ಅಂಗವಾಗಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ಮುಖಂಡರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿ ಮಾಲಾರ್ಪಣೆ ಮಾಡಿದರು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಪಪಂ ಮುಖ್ಯಾಧಿಕಾರಿ ನಾಗೇಶ, ಪ್ರಮುಖರಾದ ಶರಣಪ್ಪ ಗಾಂಜಿ, ಅಮರೇಶ ಹುಬ್ಬಳ್ಳಿ, ಸೋಮಶೇಖರಗೌಡ ಪಾಟೀಲ, ಸಿದ್ದರಾಮೇಶ ಬೇಲೇರಿ, ಡಾ. ಶಿವನಗೌಡ ದಾನರಡ್ಡಿ, ಸುಧೀರ್ ಕೊರ್ಲಳ್ಳಿ, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ಶರಣಪ್ಪ ಅರಕೇರಿ, ರೇಣುಕಪ್ಪ ಬಂಡ್ರಿ, ಸುರೇಶಗೌಡ ಶಿವನಗೌಡ್ರು, ಬಸವರಾಜ ಗುಳಗುಳಿ, ಸಿ.ಎಂ. ಈಶ್ವರ ಅಟಮಾಳಗಿ, ಕಲ್ಲಪ್ಪ ಕರಮುಡಿ, ಪ್ರಸನ್ನ ಬಸವರಾಜ ಉಳ್ಳಾಗಡ್ಡಿ, ದೊಡ್ಡಯ್ಯ ಗುರುವಿನ್, ಹೇಮರೆಡ್ಡಿ ರಡ್ಡೇರ್, ಕಳಕಪ್ಪ ಕುರಿ, ಸಂಗಪ್ಪ ರಾಮತ್ನಾಳ, ಬಸವರಾಜ ಬಿಜಕಲ್ಲ, ಮಹಾಂತೇಶ ಭಾಸ್ಕರ, ಗೀತಾ ಆರ್. ನಿಂಗೋಜಿ, ಚೆನ್ನಮ್ಮ ಪಾಟೀಲ, ಲತಾ ಕಲ್ಯಾಣಿ, ಜ್ಯೋತಿ ಪಲ್ಲೇದ್, ಸಂತೋಷಿಮಾ ಜೋಶಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ