ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಅವಿಸ್ಮರಣೀಯ: ಶಾಸಕ ಟಿ.ರಘುಮೂರ್ತಿ

KannadaprabhaNewsNetwork |  
Published : Oct 24, 2025, 01:00 AM IST
ಪೋಟೋ೨೩ಸಿಎಲ್‌ಕೆ೪ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ  ಆಯೋಜಿಸಿದ್ದ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ, ಮಾತನಾಡಿದರು. | Kannada Prabha

ಸಾರಾಂಶ

ಬ್ರಿಟೀಷ್‌ಶಾಹಿ ಆಡಳಿತವನ್ನು ದೈರ್ಯದಿಂದ ಮೆಟ್ಟಿನಿಂತಿದ್ದಲ್ಲದೆ, ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ಕಿತ್ತೂರು ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ ವೀರರಾಣಿ ಕಿತ್ತೂರು ಚನ್ನಮ್ಮನವರ ಸಾಹಸ ಎಲ್ಲ ಮಹಿಳೆಯರಿಗೂ ಸ್ಪೂರ್ತಿಯಾಗಲಿದೆ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಬ್ರಿಟೀಷ್‌ಶಾಹಿ ಆಡಳಿತವನ್ನು ದೈರ್ಯದಿಂದ ಮೆಟ್ಟಿನಿಂತಿದ್ದಲ್ಲದೆ, ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ಕಿತ್ತೂರು ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ ವೀರರಾಣಿ ಕಿತ್ತೂರು ಚನ್ನಮ್ಮನವರ ಸಾಹಸ ಎಲ್ಲ ಮಹಿಳೆಯರಿಗೂ ಸ್ಪೂರ್ತಿಯಾಗಲಿದೆ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವೀರವನಿತೆ ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನೂರಾರು ವರ್ಷಗಳ ಹಿಂದೆಯೇ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಹೋರಾಟದ ಕಿಚ್ಚನ್ನು ಬ್ರಿಟೀಷರಿಗೆ ತೋರಿಸಿ ಅವರು ದೇಶದಿಂದ ಹೊರಗೋಗುವಂತೆ ಮಾಡುವಲ್ಲಿ ಯಶಸ್ವಿಯಾದವರು. ನಾಡಿನ ಜನರ ಕಲ್ಯಾಣಕ್ಕಾಗಿ ಬಲಿಯಾದ ಕಿತ್ತೂರು ರಾಣಿ ಚೆನ್ನಮ್ಮ ಜನಮಾನಸದಲ್ಲಿ ಎಂದಿಗೂ ಅಜರಾಮರ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲಾರ್ ರೇಹಾನ್‌ಪಾಷ, ಪ್ರಸ್ತುತ ಇಂದು ನಡೆಯುವ ಯುದ್ದದಲ್ಲಿ ನಮ್ಮ ತಾಂತ್ರಿಕತೆಗಳೇ ನಮಗೆ ರಕ್ಷಣೆಯಾಗುತ್ತವೆ. ಕಾರಣ, ಹಲವಾರು ನೂತನ ತಾಂತ್ರಿಕತೆಯ ಕ್ಷಿಪಣಿಗಳನ್ನು ಶತ್ರುಗಳ ಮೇಲೆ ಕುಳಿತ ಸ್ಥಳದಿಂದಲೇ ಉಡಾಯಿಸಬಹುದು. ಆದರೆ, ರಾಣಿಚನ್ನಮ್ಮನವರ ಕಾಲದಲ್ಲಿ ತಮ್ಮ ತೋಳ್ಬಲವೇ ನಮಗೆ ರಕ್ಷೆಯಾಗಿತ್ತು ಎಂದರು.

ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘದ ಅಧ್ಯಕ್ಷ ಕೆ.ಟಿ.ಶಿವಕುಮಾರ್, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷ ಕವಿತಾವೀರೇಶ್, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಟಿ.ಮಲ್ಲಿಕಾರ್ಜುನ್, ಸುಮ ಭರಮಣ್ಣ, ಕವಿತಾ ಬೋರಯ್ಯ,ಇಒ ಎಚ್.ಶಶಿಧರ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಕಾರ್ಮಿಕ ಅಧಿಕಾರಿ ಕುಸುಮ, ಬಿಸಿಎಂ ಇಲಾಖೆ ಲೀಲಾವತಿ, ಜನಾಂಗದ ಮುಖಂಡರಾದ ಎನ್.ರವಿಕುಮಾರ್, ಪಿ.ಜಗದೀಶ್, ವೃಷಬೇಂದ್ರಪ್ಪ, ಮಂಜುನಾಥ, ಪ್ರಕಾಶ್, ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಪ್ರೇಮ ಮಂಜುನಾಥ ಮುಂತಾದವರು ಭಾಗವಹಿಸಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ