ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಈ ಬಾರಿ ಸಿಸಿಟಿವಿ ಅಳವಡಿಕೆ, ವೆಬ್ ಕ್ಯಾಸ್ಟಿಂಗ್ ಹಾಗೂ ಇತರೆ ಬಿಗಿ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಳ್ಳಲಾಗಿತ್ತು. ಇಂತಹ ಉಪಕ್ರಮಗಳಿಂದಾಗಿ ಆರಂಭದಲ್ಲಿ ತುಸು ತೊಂದರೆಯಾಗಬಹುದೇ ವಿನಾ ಒಟ್ಟಾರೆಯಾಗಿ ಮಕ್ಕಳ ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ. ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿದೆ ಎಂದಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 8,59,967 ವಿದ್ಯಾರ್ಥಿಗಳ ಪೈಕಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023 ಕ್ಕೆ ಹೋಲಿಸಿದರೆ, ಈ ವರ್ಷ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 10.49% ಕುಸಿತವನ್ನು ತೋರಿಸುತ್ತದೆ.ತಮ್ಮ ಮತಕ್ಷೇತ್ರ ಜೇವರ್ಗಿಯಲ್ಲಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಜಾರಿಗೆ ತಂದ ಯೋಜನೆ ಮೊದಲ ವರ್ಷ ನಿರೀಕ್ಷಿತ ಫಲ ನೀಡದೆ ಹೋದರೂ ಮುಂದಿನ ವರ್ಷಗಳಲ್ಲಿ ನಾವು ನಿರೀಕ್ಷೆಯಂತೆ ಫಲ ನೀಡಿದೆ. ಅದೇ ರೀತಿ ಬರೋ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲೇಬೇಕಾಗಿದೆ. ಗುರಿ ಮುಟ್ಟುವವರೆಗೂ ನಾವು ಈ ಅಭಿಯಾನ ಮುಂದುವರಿಸಬೇಕಿದೆ ಎಂದಿದ್ದಾರೆ.
ಈಗಾಗಲೇ ನಾನು ಕಲಬುರಗಿ ಅಪರ ಶಿಕ್ಷಣ ಆಯುಕ್ತಾಲಯದ ಆಯುಕ್ತರಾದ ಡಾ. ಆಕಾಶ ಶಂಕರ್ ಅವರೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದೇನೆ. ಶಿಕ್ಷಣ ರಂಗದಲ್ಲಿನ ತಜ್ಞರನ್ನೊಳಗೊಂಡ ಸಮೀತಿ ರಚಿಸುವುದು, ಅವರ ಸಲಹೆ- ಸೂಚನೆಗಳನ್ನು ಕೆಕೆಆರ್‌ಡಿಬಿಯ ಅಕ್ಷರ ಅವಿಷ್ಕಾರ ಅನುಷ್ಠಾನದಲ್ಲಿ ಅಳಡಿಸಿಕೊಂಡು ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿನ ಶಿಕ್ಷಣ ರಂಗಕ್ಕೆ ಕಾಯಕಲ್ಪ ನೀಡುವುದು ನಮ್ಮ ಗುರಿ. ಈ ಗುರಿ ಸಾಧನೆಯತ್ತ ನಮ್ಮ ಪಯಣ ನಿರಂತರ, ಸಮಾಜದಲ್ಲಿನ ಸರ್ವರ ಸಹಕಾರ ಸದಾಕಾಲ ಇರಲೇಬೇಕು ಎಂದು ಡಾ. ಅಜಯ್ ಸಿಂಗ್ ಕೋರಿದ್ದಾರೆ.