ಕೆಕೆಆರ್‌ಟಿಸಿಗೆ ಶೀಘ್ರವೇ 400 ಬಸ್‌ ಖರೀದಿ: ಅರುಣ್‌ ಕುಮಾರ್‌

KannadaprabhaNewsNetwork |  
Published : Nov 13, 2026, 01:30 AM IST
ಫೋಟೋ- ಅರುಣ ಪಾಟೀಲ್‌ 1 ಮತ್ತು ಅರುಣ ಪಾಟೀಲ್‌ 2ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್‌ ಎಂವೇ ಪೈಟೀಲ್‌ ಸುದ್ದಿಗೋಷ್ಠಿ ನೋಟ | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಅಧ್ಯಕ್ಷರಾಗಿ 1 ವರ್ಷ ಅವಧಿ ಪೂರ್ಣಗೊಳಿಸಿರುವ ಅರುಣ ಕುಮಾರ್‌ ಎಂವೈ ಪಾಟೀಲರಿಗೆ ತಾವು ಪ್ರಯಣಿಕರು ಹಾಗೂ ಕಾರ್ಮಿಕರ ಸ್ನೇಹಿಯಾಗಿ ವರ್ಷ ಪೂರ್ತಿ ಕೆಲಸ ಮಾಡಿದ ಹರ್ಷದಲ್ಲಿರುವುದಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಅಧ್ಯಕ್ಷರಾಗಿ 1 ವರ್ಷ ಅವಧಿ ಪೂರ್ಣಗೊಳಿಸಿರುವ ಅರುಣ ಕುಮಾರ್‌ ಎಂವೈ ಪಾಟೀಲರಿಗೆ ತಾವು ಪ್ರಯಣಿಕರು ಹಾಗೂ ಕಾರ್ಮಿಕರ ಸ್ನೇಹಿಯಾಗಿ ವರ್ಷ ಪೂರ್ತಿ ಕೆಲಸ ಮಾಡಿದ ಹರ್ಷದಲ್ಲಿರುವುದಾಗಿ ಹೇಳಿದ್ದಾರೆ.ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 4 ನಿಗಮಗಳಲ್ಲೇ ಕೆಕೆಆರ್‌ಟಿಸಿ ಆರ್ಥಿಕವಾಗಿ, ತಾಂತ್ರಿಕವಾಗಿ, ಸೇವೆಯ ಹಿನ್ನೆಲೆಯಲ್ಲಿ ಸುಸ್ಥಿತಿಯಲ್ಲಿದೆ. ಈಗಾಗಲೇ 56 ಕೋಟಿ ರು. ವೆಚ್ಚದಲ್ಲಿ 142 ನಗರ ಸಾರಿಗೆ ಬಸ್‌ ಸೇವೆಗೆ ಒದಿಗಸಲಾಗಿದೆ. ಇನ್ನೂ 400 ಹೊಸ ಬಸ್ಸುಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ಸಾಗಿದೆ. ಇನ್ನೆರಡು ತಿಂಗಳಲ್ಲಿ ಈ ಟೆಂಡರ್‌ ಪೂರ್ಣಗೊಳ್ಳಲಿದೆ. 26- 27 ನೇ ಬಜೆಟ್‌ನಲ್ಲಿ ಕೆಕೆಆರ್‌ಟಿಸಿಗೆ 200 ಹೊಸ ಬಸ್‌ ಹಂಚಿಕೆಯಾಗಿವೆ. 30 ವಾಹನ ಖರೀದಿಗೂ ಅನುದಾನ ನೀಡಲಾಗಿದೆ. ಪ್ರಯಾಣಿಕರಿಗೆ ಯೂಪಿಐ ಸವಲತ್ತು ನೀಡಲಾಗಿದೆ ಎಂದರು.ನಿಗಮದ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 2. 30 ಲಕ್ಷ ಮಕ್ಕಳಿಗೆ ಉಚಿತ ಬಸ್‌ಪಾಸ್‌ ನೀಡಲಾಗಿದೆ. ಬೆಂಗಳೂರಿಗೆ ವಿವಿಧ ಜಿಲ್ಲೆಗಳಿಂದ ಹವಾನಿಯಂತ್ರಿತ ಬಸ್‌ ಸೇವೆ ಒದಗಿಸಲಾಗಿದೆ. ಬಸ್ಸಿನ ಸೇವೆಯನ್ನೇ ಕಂಡಿರದ ನಿಗಮದ ವ್ಯಾಪ್ತಿಯ ಹೆಗ್ಗನಾಳ, ಗಾದಗಿ, ಗಣೇಶ ನಗರ, ಹಿಲಾಲಪುರ, ಬುಳ್ವಾಪುರ, ಹಾಲಭಾವಿ ಸೇರಿದಂತೆ 6 ಗ್ರಾಮಗಳಿಗೆ ಬಸ್ ಸೇವೆ ಒದಗಿಸಲಾಗಿದೆ ಎಂದು ಅರುಣ ಪಾಟೀಲ್‌ ಹೇಳಿದರು.ಗುಂಪು ವಿಮೆ ಪರಿಹಾರ ಮೊತ್ತ 10 ಲಕ್ಷದಿಂದ 12. 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕ್‌ ಸಹಯೋಗದಲ್ಲಿ ವಿಮೆ ಪರಿಹಾರ ತ್ವರಿತವಾಗಿ ದೊರಕುವಂತೆ ಮಾಡಲಾಗಿದೆ. ನಿಗಮದ ಸಿಬ್ಬಂದಿಗೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ಕಲ್ಯಾಣ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗಿದೆ. ಕಲಬುರಗಿ ಹಾಗೂ ಯಾದಗಿರಿ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಕ್ಕೆ ಒಪ್ಪಂದವಾಗಿದೆ ಎಂದು ಕಲ್ಯಾಣ ಯೋಜನೆಗಳ ಮಾಹಿತಿ ನೀಡಿದರು.*ಮಣ್ಣೂರಲ್ಲಿ ಹೊಸ ಬಸ್‌ ನಿಲ್ದಾಣ: ಅಫಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ 1. 54 ಕೋಟಿ ರು. ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ನಿಮ್ಮಾಣ ಸಾಗಿದೆ. ಈಗಾಗಲೇ ಕರಜಗಿ ಬಸ್‌ ನಿಲ್ದಾಣಕ್ಕೆ ಹೊಸ ರೂಪ ನೀಡಲಾಗಿದೆ. ಇನ್ನು ಮಾಶಾಳದಲ್ಲಿಯೂ ಹೊಸ ನಿಲ್ದಾಣ ಸಾಗಿದೆ. ಮಣ್ಣೂರು ಬಸ್ ನಿಲ್ದಾಣ ಇನ್ನೂ 8 ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ವಾಡಿಯಲ್ಲೂ 3 ಎಕರೆಯಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎಂದರು.

ಗಂಗಾವತಿ, ತಾವರಗೇರಾ, ರಾಯಚೂರು, ಕಾರಚಗಿ, ಕೊಪ್ಪಳದ ವಿವಿಧೆಡೆ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣವೂ ಹಳೆಯದಾಗಿರೋದರಿಂದ ಸಂಪೂರ್ಣ ಕೆಡವಿ 58 ಕೋಟಿ ರು ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.*ಕೆಕೆಆರ್‌ಟಿಸಿ ಆಡಳಿತ ಕಚೇರಿ ನಿರ್ಮಾಣ: ಮುಖ್ಯ ರಸ್ತೆಯಲ್ಲಿರುವ ನಿವೇಶನದಲ್ಲಿ ಕೆಕೆಆರ್‌ಟಿಸಿ 20 ಕೋಟಿ ರು. ವೆಚ್ಚದಲ್ಲಿ ಕೇಂದ್ರ ಕಚೇರಿ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಮೇಲ್ವಿಚಾರಕರು, ಮೇಲ್ವಿಚಾರಕೇತರರು ಸಹಿತ 163 ಹುದ್ದೆ ನೇಮಕಾತಿ ಪ್ರಕ್ರಿಯೆ, ಖಾಲಿ ಇರುವ ಉಳಿಕೆ ಮೂಲ ವೃಂದದ 14 ಅಧಿಕಾರಿ, 15 ಮೇಲ್ವಿಚಾರಕರು, 2,453 ಮೇಲ್ವಿಚಾರಕೇತರ ಹುದ್ದೆಗಳು ಸಹಿತ ಒಟ್ಟು 2,589 ಹುದ್ದೆಗಳ ನೇಮಕಾತಿಗೂ ಅನುಮತಿ ಕೋರಲಾಗಿದೆ. ಇದಲ್ಲದೆ ಉಳಿಕೆ ಮೂಲ ವೃಂದದ ಅಧಿಕಾರಿ, ಮೇಲ್ವಿಚಾರಕರು, ಮೇಲ್ವಿಚಾರಕೇತರರು ಸೇರಿದಂತೆ ಒಟ್ಟು 481 ಹುದ್ದೆಗಳ ನೇಮಕಾತಿಗೂ ಕ್ರಮ ಜರುಗಿಸಲಾಗುತ್ತದೆ ಎಂದು ಅಧ್ಯಕ್ಷ ಅರುಣ ಪಾಟೀಲ್‌ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

---ಬಾಕ್ಸ್‌-----

ತಗ್ಗಿದ ಅಪಘಾತಗಳ ಸಂಖ್ಯೆ

ನಿಗಮದ ಚಾಲಕರು ಅತೀ ವೇಗದಲ್ಲಿ ಬಸ್‌ ಚಾಲನೆ ಮಾಡುತ್ತಿರುವ ಬಗ್ಗೆ ಸುದ್ದಿಗಾರರು ಗಮನಸೆಳೆದಾಗ ಈ ಬಗ್ಗೆ ತಾವು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅಧ್ಯಕ್ಷ ಅರುಣ ಪಾಟೀಲ್‌ ಕಳೆದ ವರ್ಷ ನಿಗಮದ ವ್ಯಾಪ್ತಿಯಲ್ಲಿ 204 ಅಪಘಾತಗಳಾಗಿದ್ದರೆ, ಈ ವರ್ಷ ಇಲ್ಲಿಯವರೆಗೂ 196 ಅಪಘಾತಗಳು ವರದಿಯಾಗಿವೆ. ಅಪಘಾತಗಳನ್ನು ತಪ್ಪಿಸುವುದು ನಮ್ಮ ಆದ್ಯತೆ. ಶಕ್ತಿ ಯೋಜನೆಯಡಿಯಲ್ಲಿ ಕೆಕೆಆರ್‌ಟಿಸಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಹೆಚ್ಚಿನ ಬಸ್‌ಗಳನ್ನು ಚಾಲನೆ ಮಾಡುತ್ತಿದೆ. ಯೋಜನೆ ಆರಂಭದಿಂದ ಇಲ್ಲಿಯವರಿಗೆ 1, 100 ಕೋಟಿ ರು. ಸಹಾಯ ಧನದಲ್ಲಿ 4, 480 ಕೋಟಿ ರು. ಬಂದಿದೆ ಎಂದು ಮಾಹಿತಿ ನೀಡಿದರು.

ಸ್ಯಾಟಲೈಟ್‌ ಬಸ್ ನಿಲ್ದಾಣಕ್ಕೆ ಸಂಕಲ್ಪ: ಬೆಳೆಯುತ್ತಿರುವ ಕಲಬುರಗಿಯ ಸಂಚಾರ ದಟ್ಟಣೆ ತಗ್ಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಈಗಾಗಲೇ ನಗರದ 4 ಕಡೆಗಳಲ್ಲಿ ಸ್ಯಾಟಲೇಟ್ ಬಸ್ ನಿಲ್ದಾಣಗಳ ನಿರ್ಮಾಣ ಯೋಜನೆ ಇದೆ. ಈಗಾಗಲೇ ಈ ಯೋಜನೆಗೆ ಗುವಿವಿ 2 ಎಕರೆ ಭೂಮಿ ನಮಗೆ ನೀಡಿದೆ. ಇನ್ನೂ ನಗರದ ಕೃಷಿ ವಿಜ್ಞಾನ ಕೇಂದ್ರ, ಕೆಎಂಎಫ್‌, ಬೀಜ ನಿಗಮಕ್ಕೆ ಸೇರಿರುವ ತಲಾ 2 ಎಕರೆ ಭೂಮಿ ಕೇಳಿದ್ದೇವೆ. ಈ ನಿವೇಶನಗಳನ್ನೂ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರ ಈ ಯೋಜನೆ ಮಾಡಿ ಮುಗಿಸುತ್ತೇವೆಂದು ಅರುಣ ಪಾಟೀಲ್‌ ಹೇಳಿದರು.ಚ್ಚ ನೀಡಿ ಶುಭ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌