ಕೆಎಂಸಿ: ಬಾಲ್ಯ ಮಧುಮೇಹಿಗಳ ಸಮಗ್ರ ಆರೈಕೆಯ ‘ಸಹಯೋಗ’ಕ್ಕೆ ಚಾಲನೆ

KannadaprabhaNewsNetwork |  
Published : Feb 08, 2025, 12:34 AM IST
7ಸಹಯೋಗ | Kannada Prabha

ಸಾರಾಂಶ

ಕಸ್ತೂರ್ಬಾ ಆಸ್ಪತ್ರೆ ಮಕ್ಕಳ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಮಣಿಪಾಲ ಫೌಂಡೇಶನ್‌ನ ಪ್ರಾಯೋಜನೆಯ ‘ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ - ಸಹಯೋಗ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಕ್ಕಳ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಮಣಿಪಾಲ ಫೌಂಡೇಶನ್‌ನ ಪ್ರಾಯೋಜನೆಯ ‘ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ - ಸಹಯೋಗ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್. ಪೈ ಉದ್ಘಾಟಿಸಿ, ಮೊದಲ ಕಿಟ್ಟನ್ನು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಎಡ್ವರ್ಡ್ ಎಸ್. ಲೆವಿಸ್, ಎಂಡೋಕ್ರಿನೊಲೊಜಿ ವಿಭಾಗದ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಮತ್ತು ಮಕ್ಕಳ ಎಂಡೋಕ್ರಿನೊಲೊಜಿಸ್ಟ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೌಶಿಕ್ ಉರಾಳ ಎಚ್. ಅವರಿಗೆ ಹಸ್ತಾಂತರಿಸಿದರು.ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ಮಣಿಪಾಲ ಫೌಂಡೇಶನ್‌ನ ಸಿಇಒ ಡಾ. ಹರಿನಾರಾಯಣ್ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.ಸಹಯೋಗವು ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್‌ನಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಇನ್ಸುಲಿನ್, ಇನ್ಸುಲಿನ್ ಪೆನ್ನುಗಳು, ಗ್ಲುಕೋಮೀಟರ್‌ಗಳು, ಗ್ಲೂಕೋಸ್ ಪರೀಕ್ಷಾ ಪಟ್ಟಿಗಳು, ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತದೆ ಮತ್ತು ಈ ಮಕ್ಕಳಿಗ ಅರ್ಹ ಆರೈಕೆಯನ್ನು ನೀಡುತ್ತದೆ. ಅಲ್ಲದೇ ಬಾಲ್ಯ ಮಧುಮೇಹಿಗಳ ಪೋಷಕರು, ತಜ್ಞರು ಮತ್ತು ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಮಾಹೆಯ ಆರೋಗ್ಯ ವಿಜ್ಞಾನಗಳ ಸಹಕುಲಪತಿ ಡಾ. ಶರತ್ ಕೆ. ರಾವ್, ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ, ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ