ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಟಿ.ತಿಮ್ಮೇಗೌಡರು, ನಾಡಿನ ಅನೇಕ ರಾಜಕಾರಣಿಗಳಲ್ಲಿ ಕೆ.ಎನ್.ನಾಗೇಗೌಡರ ವ್ಯಕ್ತಿತ್ವ ಪ್ರಸ್ತುತ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ದಿ.ಕೆ.ಎನ್.ನಾಗೇಗೌಡ ಅವರ ಜೀವನ ಹಾಗೂ ದೂರದೃಷ್ಟಿಯ ಚಿಂತನೆಗಳು ಪ್ರಸ್ತುತದ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದರು.
ಕೆ.ಎನ್.ನಾಗೇಗೌಡರು ತಾವು ಕಂಡ ಕನಸಿನಂತೆ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಢ ಸಂಕಲ್ಪದೊಂದಿಗೆ ಸಂಕಷ್ಟದಲ್ಲಿದ್ದರೂ ಛಲಬಿಡದ ತ್ರಿವಿಕ್ರಮನಂತೆ ಇಂಥ ಬೃಹತ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ ಎಂದರು.ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡು ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಶಾಸಕ, ಸಚಿವರಾಗಿ ಕೆ.ಎನ್.ನಾಗೇಗೌಡರು ತಮ್ಮ ಇಡೀ ಜೀವನವನ್ನೇ ಸಮಾಜಕ್ಕೆ ಸಮರ್ಪಿಸಿದರು ಎಂದು ಬಣ್ಣಿಸಿದರು.
ಕೆಆರ್‌ಎಸ್ ಜಲಾಶಯದ ಕೊನೇ ಭಾಗವಾದ ಮಳವಳ್ಳಿ-ಮದ್ದೂರಿನ ನಾಲೆಗಳಿಗೆ ನೀರು ಬರದಿದ್ದಾಗ ಮೊದಲ ಬಾರಿಗೆ ಈ ಭಾಗದ ನಾಲೆಗಳಿಗೆ ಹೊಸ ಕಾಯಕಲ್ಪದ ಮೂಲಕ ಕೆ.ಎನ್.ನಾಗೇಗೌಡರು ರೈತರಿಗೆ ನೆರವಾದರು. ಪಶು ಸಂಗೋಪನಾ ಸಚಿವರಾಗಿ ಇಲಾಖೆಯಲ್ಲಿ ಹೊಸ ಸಂಚಲನ ಮೂಡಿಸಿ ಕ್ರಾಂತಿಕಾರಿ ಯೋಜನೆ ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಉಳಿದ್ದಾರೆ. ಶಾಂತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಕೆ.ಎನ್.ನಾಗೇಗೌಡರನ್ನು ಆದರ್ಶವಾಗಿ ಪರಿಗಣಿಸಿ ಸಾಧನೆ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ, ಮಾಜಿ ಶಾಸಕಿ ಎಂ.ಕೆ.ನಾಗಮಣಿ ನಾಗೇಗೌಡ ಮಾತನಾಡಿ, ಕೆ.ಎನ್.ನಾಗೇಗೌಡರು ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದರು. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಕನಸು ಹೊತ್ತು ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಯುವೇದ ಮತ್ತು ನರ್ಸಿಂಗ್ ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದರು.
ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಕೆ.ಎನ್.ನಾಗೇಗೌಡರ ಅಭಿಮಾನಿಗಳು ಹಾಗೂ ಸ್ಥಳೀಯ ಮುಖಂಡರ ಒತ್ತಾಯದಂತೆ ಕಾಲೇಜಿನ ಮುಂಭಾಗ ಅವರ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೆ.ಎನ್.ನಾಗೇಗೌಡರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಇತ್ತೀಚೆಗೆ ನಿಧನರಾದ ಶಾಂತಿ ಶಿಕ್ಷಣ ಸಂಸ್ಥೆ ಟ್ರಸ್ಟ್ ಚಿನ್ನಾಳು ಅವರಿಗೆ ಸಂತಾಪ ಸೂಚಿಸಲಾಯಿತು.
ಸಮಾರಂಭದಲ್ಲಿ ಕೆ.ಎನ್.ನಾಗೇಗೌಡರ ಸಹೋದರ ಚೌಡೇಗೌಡ, ಬಿಜೆಪಿ ಮುಖಂಡ ಯಮದೂರು ಸಿದ್ದರಾಜು, ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಮುಖಂಡರಾದ ಎಚ್.ತಿಮ್ಮೇಗೌಡ, ಅನಿತಾ ಸಂಜೀವ, ಎಂ.ಎನ್.ಅರ್ಜುನ್ ಗೌಡ, ಮಾರ್ಕಡೇಯ, ಶಿವಕುಮಾರ್, ಮಂಜು, ಅನಿತಾ, ಶಿವಪ್ಪ, ನಾಗರಾಜು ಪಾಲ್ಗೊಂಡಿದ್ದರು.