ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಭಾನುವಾರ ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ 2007-08ನೇ ಸಾಲಿನ ಡಿ.ಇಡಿ ಪ್ರಶಿಕ್ಷಣಾರ್ಥಿಗಳ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸಂಬಂಧಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೂ ಇಂದು ಮನುಷ್ಯ ಸಂಬಂಧಕ್ಕೆ ಯಾರೂ ಮಹತ್ವ ನೀಡುತ್ತಿಲ್ಲ. ಎಲ್ಲರೂ ಜವಾಬ್ದಾರಿ ಅರಿತು ಸಹಬಾಳ್ವೆಯ ಬದುಕು ಸಾಗಿಸಬೇಕೆಂದು ಹೇಳಿದರು.
ಗುರುಬಸವ ದೇವರು ಜ್ಯೋತಿ ಬೆಳಗಿಸಿ ಮಾತನಾಡಿ, ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷದಾಯಕ. ಸಮಾಜಕ್ಕೆ ಶಿಸ್ತು, ಸಂಯಮ ಕಲಿಸಿ, ಜನರಲ್ಲಿ ಉದಾತ್ತ ಚಿಂತನೆ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಜ್ಞಾನ ಹೋಗಲಾಡಿಸಿ ಸಮಾಜದಲ್ಲಿ ಸುಜ್ಞಾನ ಮೂಡಿಸಬೇಕೆಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳ ವಿದ್ಯಾರ್ಥಿಗಳಲ್ಲಿ ಗುರುಗಳಿಗೆ ಗೌರವ ಕೊಡುವ ಮೌಲ್ಯಗಳು ಇಲ್ಲದಾಗಿವೆ. ಗುರುವಿಗೆ ನಮಸ್ಕರಿಸಿ ಪಾದಪೂಜೆ ಮಾಡಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕು ಎಂದರು.