ಶ್ರಮ ಜೀವನದ ಬೆಲೆ ತಿಳಿದುಕೊಳ್ಳಿ

KannadaprabhaNewsNetwork |  
Published : May 13, 2025, 01:27 AM IST
ಲೇಬಗೇರಿ ಗ್ರಾಮದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರ ನಡೆಯಿತು. | Kannada Prabha

ಸಾರಾಂಶ

ಹಳ್ಳಿಗಳ ಸ್ಥಿತಿ ಕಷ್ಟದಿಂದ ಕೂಡಿವೆ. ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಮತ್ತು ಇಚ್ಛಾಶಕ್ತಿ ಇದ್ದರೆ ಉತ್ತಮ ಕೆಲಸ ಮಾಡಬಹುದು. ನಾವು ಜನರ ಜತೆ ಬೆರೆಯಬೇಕು. ಜನರು ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಸರಳ ಜೀವನ ನಡೆಸಬೇಕು.

ಕೊಪ್ಪಳ:

ಬೌದ್ಧಿಕತೆ ಜತೆಗೆ ಶ್ರಮದಾನ ಕೂಡ ಬಹಳ ಮುಖ್ಯ ಎಂದು ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ತಾಲೂಕಿನ ಲೇಬಗೇರಿದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶ್ರಮಜೀವನದ ಬೆಲೆ ತಿಳಿದುಕೊಳ್ಳಬೇಕು. ಶ್ರಮಜೀವನದಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದರು.

ಈ ಭಾಗಕ್ಕೆ ಒಳ್ಳೆಯ ಸಂಸ್ಕೃತಿಯ ಶ್ರೀಮಂತಿಕೆಯಿದೆ. ಮಾತನಾಡುವ ಭಾಷೆ ಮತ್ತು ಗ್ರಾಮೀಣ ಭಾಷೆಗೆ ವ್ಯತ್ಯಾಸವಿದೆ. ಈ ಭಾಗದ ಅನುಭವ ಮಂಟಪ ಇಂದಿನ ಸಂಸತ್ತಿನ ಪ್ರತೀಕವಾಗಿದೆ ಎಂದ ಅವರು, ಹಳ್ಳಿಗಳ ಸ್ಥಿತಿ ಕಷ್ಟದಿಂದ ಕೂಡಿವೆ. ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಮತ್ತು ಇಚ್ಛಾಶಕ್ತಿ ಇದ್ದರೆ ಉತ್ತಮ ಕೆಲಸ ಮಾಡಬಹುದು. ನಾವು ಜನರ ಜತೆ ಬೆರೆಯಬೇಕು. ಜನರು ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಸರಳ ಜೀವನ ನಡೆಸಬೇಕು ಎಂದರು.

ಶಿಕ್ಷಣ ತಜ್ಞ ಬಿ.ಜಿ. ಕರಿಗಾರ ಮಾತನಾಡಿ, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡಿದರೂ ನಾವು ಕೈಜೋಡಿಸಬೇಕು. ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ನೀವು ಸ್ವಚ್ಛ ಮಾಡುವ ಜತೆಗೆ ಜನರಿಗೆ ಅರಿವು ಮೂಡಿಸಬೇಕು. ನಮ್ಮ ಸುತ್ತಮುತ್ತ ಪರಿಸರ ಕೂಡ ಸ್ವಚ್ಛ ಇರಬೇಕು ಎಂದರು.ಲೇಬಗೇರಿ ಗ್ರಾಪಂ ಸದಸ್ಯ ಫಾಕಿರಗೌಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಶಿಲ್ಪಿಗಳು. ನೀವು ನಿಮ್ಮ ತಂದೆ, ತಾಯಿ ಕಷ್ಟ ಅರ್ಥ ಮಾಡಿಕೊಂಡು ಓದಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ, ವಿವಿಧ ಗ್ರಾಮಗಳಲ್ಲಿ ಎನ್‌ಎಸ್‌ಎಸ್‌ ಶಿಬಿರಗಳ ಮೂಲಕ ಜನರಿಗೆ ಸ್ವಚ್ಛತೆ ಅರಿವು ಬರುತ್ತದೆ. ಸಹಕಾರದ ಮೂಲವೇ ಹಳ್ಳಿಗಳು. ಹಳ್ಳಿಗಳು ತಮಗೆ ಏನು ಬೇಕು ಅದನ್ನು ತಾವೇ ಪಡೆದುಕೊಳ್ಳತ್ತಾರೆ ಎಂದರು.ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಹಂಪಮ್ಮ ಸ್ವಾಗತಿಸಿದರು. ವಿಜಯಲಕ್ಷ್ಮಿ ವಂದಿಸಿದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್