ವಿದ್ಯೆಯಿಂದ ಮನುಷ್ಯನಿಗೆ ಸಕಲ ಸಂಪತ್ತು

KannadaprabhaNewsNetwork |  
Published : Nov 20, 2026, 01:15 AM IST
ಮಧಉಗಿರಿ ತಾಲೂು ಚಿಕ್ಕಕೆರೆ ಗೊಲ್ಲರಹಟ್ಟಿಯಲ್ಲಿ ಮೇಲುಕುಂಟೆ  ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಭೂಮಿ ಪೂಜೆಯನ್ನು ಶಾಸಾಕ ಕೆ.ಎನ್‌.ರಾಜಣ್ಣ ನೆರವೇರಿಸಿದರು.. | Kannada Prabha

ಸಾರಾಂಶ

ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಶಿಕ್ಷಣ ಬಾಳಿನ ಬೆಳಕು.ಅದನ್ನು ಮಕ್ಕಳು ಶ್ರದ್ಧಾ ,ಭಕ್ತಿಯಿಂದ ಕಷ್ಟಪಟ್ಟು ಓದಿ ವಿದ್ಯಾವಂತರಾಗಬೇಕು.ವಿದ್ಯೆ ಮನುಷ್ಯನಿಗೆ ಸಕಲ ಸಂಪತ್ತನ್ನು ತಂದು ಕೊಡುತ್ತದೆ .ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಮಿಡಿಗೇಶಿ ಹೋಬಳಿಯ ಚಿಕ್ಕಕೆರೆ ಗೊಲ್ಲರಹಟ್ಟಿ ಗ್ರಾಮದ ಮೇಲುಕುಂಟೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ 5,400 ಅಂಗನವಾಡಿ ಮಕ್ಕಳಿಗೆ ಶೂ ಮತ್ತು ಸಮವಸ್ತ್ರ ವಿತರಿಸಲಾಗಿದೆ.ಅದೇ ಮಾದರಿಯಲ್ಲಿ,ನನ್ನ ಮತ ಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕ ವಿತರಿಸುದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.

ಮಕ್ಕಳು ಸಹ ಚಿಕ್ಕಂದಿನಿಂದಲೇ ತಪ್ಪು ಹೆಜ್ಜೆ ಹೆತ್ತವರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಲಬೇಕು.ಜೊತೆಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಬದುಕನ್ನು ಉಜ್ವಲಗೊಳಿಸಿ ಕೊಳ್ಳಬೇಕು.ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಶಿಸ್ತು ಹಾಗೂ ಸಮಾನತೆಯ ಭಾವನೆ ಬೆಳೆಸುವ ಉದ್ದೇಶದಿಂದ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ನೋಟ್ಯ ಪುಸ್ತಕ ಯೋಜನೆ ಯ ಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದರು.

ಮಧುಗಿರಿಯಲ್ಲಿರುವ ಯಾದವ ಸಮುದಾಯದ ನಿವೇಶನ ಹಾಗೂ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಯಾದವ ವಿದ್ಯಾರ್ಥಿ ನಿಲಯವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಅನುಕೂಲಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಗೊಲ್ಲರಹಟ್ಟಿ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳು, ಹಬ್ಬಗಳು ಹಾಗೂ ದೇವರ ಕಾರ್ಯಗಳನ್ನು ಬುಡಕಟ್ಟು ಸಮುದಾಯದ ಯಜಮಾನರು, ಅಣ್ಣತಮ್ಮಂದಿರು ಒಗ್ಗಟ್ಟಿನಿಂದ ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸದ ವಿಚಾರ ಎಂದ ಅ‍ವರು, ಇಂತಹ ಧಾರ್ಮಿಕ ಆಚರಣೆಗಳಿಂದ ದೇಶದ ಪ್ರಗತಿ ಮತ್ತು ಸಮಾಜದ ಏಳಿಗೆ ಸಾಧ್ಯವಾಗುತ್ತದೆ.ದೇವಸ್ಥಾನ ಮತ್ತು ಜಾತ್ರೆಗಳು ಮನುಷ್ಯ ಸಂಬಂಧಗಳನ್ನು ಗಟ್ಟಿ ಗೊಳಿಸುತ್ತವೆ. ಆದರೆ ಗ್ರಾಮಸ್ಥರು ನನ್ನ ಬ್ಗಗೆ ತೋರಿಸುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ನನಗೆ ಮತ್ತಷ್ಟು ಸಂತೋಷ ನೀಡಿದೆ. ನೀವು ಆಹ್ವಾನಿಸಿದಾಗಲೆಲ್ಲ ಗೊಲ್ಲರಹಟ್ಟಿಗೆ ಸಂತೋಷದಿಂದ ಬರುತ್ತೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಶಾಸಕ ಕೆ.ಎನ್.ರಾಜಣ್ಣ ಹಂಚಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ, ರಾಜ್ಯ ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಲಕ್ಷ್ಮಮ್ಮ ವೀರಣ್ಣಗೌಡ , ಚಿಕ್ಕಕೆರೆ ಗೊಲ್ಲರಹಟ್ಟಿಯ ಗೌಡರು, ಪೂಜಾರಿಗಳು ,ಮುಖಂಡರು, ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ