ಜ್ಞಾನ ಬದುಕು ಬೆಳಗುವ ಜ್ಯೋತಿ: ವೇ. ಶ್ರೀನಿವಾಸ ಭಟ್ಟ

KannadaprabhaNewsNetwork |  
Published : Oct 24, 2025, 01:00 AM IST
ಫೋಟೋ : ೨೩ಕೆಎಂಟಿ_ಒಸಿಟಿ_ಕೆಪಿ೧ : ಕೊಂಕಣ ಎಜುಕೇಶನ್ ಸಂಸ್ಥೆಯಲ್ಲಿ ದೀಪಾವಳಿ ಮೇಳಕ್ಕೆ ವೇ. ಶ್ರೀನಿವಾಸ ಭಟ್ ಚಾಲನೆ ನೀಡಿದರು. ಮುರಲೀಧರ ಪ್ರಭು, ರಮೇಶ ಪ್ರಭು, ಆರ್ ಎಚ್. ದೇಶಭಂಡಾರಿ, ವಿಠ್ಠಲ ನಾಯಕ, ರಾಮಕೃಷ್ಣ ಗೋಳಿ, ಗಣೇಶ ಜೋಶಿ ಇತರರು ಇದ್ದರು. | Kannada Prabha

ಸಾರಾಂಶ

ಅಹಂಕಾರ ಯಾವುದೇ ಸ್ಥಾನಮಾನವನ್ನೂ ಕೆಡಿಸಬಲ್ಲುದು. ಆದ್ದರಿಂದ ಸಣ್ಣತನ ತೊರೆದು ಹೃದಯ ವೈಶಾಲ್ಯತೆಯೊಂದಿಗೆ ದೀಪಾವಳಿ ಆಚರಿಸಿದಾಗಲೇ ಹಬ್ಬದ ತಾತ್ವಿಕತೆ ನೆಲೆಗೊಳ್ಳುತ್ತದೆ.

ಮಂಜಗುಣಿ ಕ್ಷೇತ್ರದ ಪ್ರಧಾನ ಅರ್ಚಕ

ವಿಶೇಷ ದೀಪಾವಳಿ ಮೇಳ ಉದ್ಘಾಟನೆಕನ್ನಡಪ್ರಭ ವಾರ್ತೆ ಕುಮಟಾ

ಅಹಂಕಾರ ಯಾವುದೇ ಸ್ಥಾನಮಾನವನ್ನೂ ಕೆಡಿಸಬಲ್ಲುದು. ಆದ್ದರಿಂದ ಸಣ್ಣತನ ತೊರೆದು ಹೃದಯ ವೈಶಾಲ್ಯತೆಯೊಂದಿಗೆ ದೀಪಾವಳಿ ಆಚರಿಸಿದಾಗಲೇ ಹಬ್ಬದ ತಾತ್ವಿಕತೆ ನೆಲೆಗೊಳ್ಳುತ್ತದೆ ಎಂದು ಮಂಜಗುಣಿ ಕ್ಷೇತ್ರದ ಪ್ರಧಾನ ಅರ್ಚಕ ವೇ. ಶ್ರೀನಿವಾಸ ಭಟ್ಟ ಹೇಳಿದರು.

ಕೊಂಕಣ ಎಜುಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳಿಂದ ಸರಸ್ವತಿ ವಿದ್ಯಾ ಕೇಂದ್ರದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ದೀಪಾವಳಿ ಮೇಳ ಉದ್ಘಾಟಿಸಿ ಮಾತನಾಡಿದರು.

ಹಲವು ಶಕ್ತಿಗಳು ಕೇಂದ್ರೀಕೃತಗೊಂಡಾಗ ಅದು ಅಜೇಯವಾಗುತ್ತದೆ. ಜ್ಞಾನವು ಕೂಡಾ ಅಜೇಯವಾಗಿದ್ದು ಬದುಕು ಬೆಳಗುವ ಜ್ಯೋತಿಯಾಗಿದೆ. ಕೊಂಕಣ ಎಜುಕೇಶನ್ ಟ್ರಸ್ಟ ಕೂಡಾ ಹಲವು ಶಕ್ತಿಗಳ ಸಂಗಮವಾಗಿದ್ದು ಇಲ್ಲಿ ನಿಜವಾದ ದೀಪಾವಳಿ ಮೇಳೈಸಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕಾರ್ಯದರ್ಶಿ ಮುರಳೀಧರ ಪ್ರಭು, ದೀಪಾವಳಿ ಮೇಳದ ಮೂಲಕ ಸಂಸ್ಕಾರ ಬಿತ್ತನೆಯಾಗುತ್ತಿದೆ. ಮನೆಮನೆಗಳಲ್ಲಿ ನಿತ್ಯವೂ ದೀಪಾವಳಿಯಾಗಲಿ, ಪ್ರೇಮ ದೀಪ ಮನೆಗಳಲ್ಲಿ ಬೆಳಗುವಂತಾಗಲಿ ಎಂದರು.

ಉಪಾಧ್ಯಕ್ಷ ರಮೇಶ ಪ್ರಭು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವಿಠ್ಠಲ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್, ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಮಾತೃಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಸಂಸ್ಥೆಯ ಪೂರ್ವ ವಿದ್ಯಾರ್ಥಿ ಡಾ. ಪ್ರಸನ್ನಕುಮಾರ್ ನಾಯ್ಕರ ಸಾಧನೆ ಗುರುತಿಸಿ ಗೌರವಿಸಲಾಯಿತು. ದೀಪಾವಳಿ ಮೇಳದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

ಮುಖ್ಯಶಿಕ್ಷಕ ಗಣೇಶ ಜೋಶಿ ಸ್ವಾಗತಿಸಿದರು. ವಿಶ್ವ್ವಸ್ಥ ಅನಂತ ಶಾನಭಾಗ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಲಮಂದಿರದ ವಿದ್ಯಾರ್ಥಿಗಳು ಹನಿಮಾನ್ ಚಾಲೀಸ್ ಪಠಿಸಿದರು. ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ದೀಪ ನೃತ್ಯ, ಸಿ.ವಿ.ಎಸ್.ಕೆ ವಿದ್ಯಾರ್ಥಿಗಳ ದೀಪಾವಳಿ ನೃತ್ಯ, ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳ ವಿಶೇಷ ಕಾರ್ಯಕ್ರಮ. ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಲಾಪ್ರಸ್ತುತಿ, ಮಾತೃಮಂಡಳಿಯಿಂದ ಭಕ್ತ ಪ್ರಹ್ಲಾದ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಕುರಿತಾದ ನೃತ್ಯ ರೂಪಕ ಗಮನಸೆಳೆಯಿತು. ದೀಪಾವಳಿ ಮೇಳದ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಏರ್ಪಡಿಸಿದ್ದ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಲ್ಲಿ ಜನಸಾಗರವೇ ನೆರೆದಿತ್ತು. ಕೊನೆಯಲ್ಲಿ ನರಕಾಸುರನ ಪ್ರತಿಕೃತಿ ದಹಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ