- ಜಗದಂಬಾ ಸರಸ್ವತಿ, ಮಂಜುಳಕ್ಕ ಸ್ಮೃತಿ ದಿ ಸಮಾರಂಭದಲ್ಲಿ ಪದ್ಮಕ್ಕ ಸಲಹೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಶಿವ ಪರಮಾತ್ಮನ ಪರಿಚಯವಿಲ್ಲದ ಕಾರಣ ದೇವರು ಮತ್ತು ಧರ್ಮದ ಹೆಸರಲ್ಲಿ ಪ್ರಪಂಚದಲ್ಲಿ ಯುದ್ಧ, ಜಗಳಗಳನ್ನು ಕಾಣುತ್ತಿದ್ದೇವೆ ಎಂದು ಹಳ್ಳಿಯಾಳ ರಾಜಯೋಗಿನಿ ಪದ್ಮಕ್ಕ ಅಭಿಪ್ರಾಯಪಟ್ಟರು.ಪಟ್ಟಣದ ರಾಜಯೋಗ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಗದಂಬಾ ಸರಸ್ವತಿ ಹಾಗೂ ಮಂಜುಳಕ್ಕನವರ ಸ್ಮೃತಿ ದಿನ ಮತ್ತು ಆಶಾ ಕಾರ್ಯಕರ್ತರಿಗೆ ಗೌರವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವರು ಕ್ರಿಕೆಟ್ ಆಟಗಾರರನ್ನು, ಸಿನಿಮಾ ನಟರನ್ನು, ಉತ್ತಮ ಸೇವೆ ಮಾಡುವ ವೈದ್ಯರನ್ನು ದೇವರೆಂದು ಭಾವಿಸಿದ್ದಾರೆ. ಅನೇಕರಲ್ಲಿ ದೇವರ ಬಗ್ಗೆ ಇನ್ನೂ ಗೊಂದಲವಿದೆ. ಯಾರು ದೇವರು, ಪರಮಾತ್ಮನ ಜ್ಞಾನ ಎಲ್ಲಿದೆ ಎಂಬುದು ತಿಳಿದಿಲ್ಲ. ಸಮಾಜದಲ್ಲಿ ಶಾಂತಿ ನೆಲೆಸಲು ದೇಹವಿಲ್ಲದ, ಆಹಾರ ಸೇವಿಸದ, ನಿರಾಕಾರಿ, ಜ್ಯೋತಿಸ್ವರೂಪದ ಪರಮಾತ್ಮನ ಕುರಿತ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.ಡಾ. ಲಕ್ಷ್ಮೀದೇವಿ ಆಶಾ ಕಾರ್ಯಕರ್ತರ ಕರ್ತವ್ಯವನ್ನು ತಿಳಿಸಿದರು. ಗಂಗಕ್ಕ ಆತ್ಮ ಪರಮಾತ್ಮನ ಪರಿಚಯ ಮಾಡಿದರು. ಹಾನಗಲ್ ಶೈಲಕ್ಕ ಮುರಳಿ ಜ್ಞಾನ ತಿಳಿಸಿದರು. ಶಾಂತಕ್ಕ ಸುತ್ತ ಹಲವು ಗ್ರಾಮಗಳಲ್ಲಿ ತರಗತಿ ನಡೆಯುವ ಉದ್ದೇಶ ತಿಳಿಸಿದರು. ಸಾವಿತ್ರಕ್ಕ ಸ್ವಾಗತಿಸಿದರು. ೩೨ ಆಶಾ ಕಾರ್ಯಕರ್ತರನ್ನು ಗೌರವಿಸಲಾಯಿತು.
ಹಾಲಿವಾಣ, ಕುಂಬಳೂರು, ಹರಳಹಳ್ಳಿ, ಹೊಳೆಸಿರಿಗೆರೆ, ಎರೆಹಳ್ಳಿ, ಹಳ್ಳಿಹಾಳ್, ನಿಟ್ಟೂರು, ಬೂದಿಹಾಳ್, ಕೊಮಾರನಹಳ್ಳಿ ಮತ್ತಿತರೆ ಗ್ರಾಮಗಳ ನಾಗರೀಕರು ಹಾಜರಿದ್ದರು.- - -
(ಬಾಕ್ಸ್) * ಈಶ್ವರನೇ ಸ್ಥಾಪಿಸಿದ ವಿವಿ: ಲೀಲಾಜಿದಾವಣಗೆರೆಯ ಲೀಲಾಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿವಬಾಬಾ, ಬ್ರಹ್ಮ ಬಾಬಾ, ಜಗದಂಬಾ ಮಾತೇಶ್ವರಿ, ಲೌಕಿಕ ತಾಯಿ, ಪ್ರಕೃತಿ, ಸೃಷ್ಠಿ ನಾಟಕ, ಜ್ಞಾನ ಮುರಳಿ, ಗೋಮಾತೆ ಮತ್ತು ನಿಮಿತ್ತರು ಇವರೆಲ್ಲಾ ದೇವರು ಎಂದು ತಿಳಿಯಬೇಕು. ೧೯೩೦ರಲ್ಲಿ ಅಬು ಪರ್ವತದಲ್ಲಿ ೩೦೦ ಸದಸ್ಯರಿಂದ ಆರಂಭವಾದ ಓಂ ಮಂಡಳಿಯ ಸೇವಾಧಾರಿ ಅಕ್ಕಂದಿರು ಇಂದು ವಿಶ್ವದ್ಯಾಲಯವಾಗಿದೆ. ೧೪೦ ದೇಶಗಳಲ್ಲಿ ೩೦ ಲಕ್ಷ ಪರಿವಾರದವರು ಪರಮಾತ್ಮನ ಜ್ಞಾನವನ್ನು ಹರಡುತ್ತಿದಾರೆ. ಇದು ಈಶ್ವರನೇ ಸ್ಥಾಪಿಸಿದ ವಿಶ್ವವಿದ್ಯಾಲಯವಾಗಿದೆ ಎಂದು ತಿಳಿಸಿದರು.- - -
-ಚಿತ್ರ-೧: ದಾವಣಗೆರೆ ಲೀಲಾಜಿ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.