ವೈಜ್ಞಾನಿಕ ಜೀವನಕ್ಕೆ ತಂತ್ರಜ್ಞಾನದ ಅರಿವು ಅಗತ್ಯ

KannadaprabhaNewsNetwork |  
Published : Mar 16, 2026, 01:30 AM IST
ಫೋಟೋ14kst1: ಕುಷ್ಟಗಿ ಪಟ್ಟಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಪೈ ದಿನಾಚರಣೆಯ ಅಂಗವಾಗಿ ಭಾರತೀಯ ಗಣಿತಜ್ಞ ಆರ್ಯಭಟ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರತಿಯೊಬ್ಬರು ಪ್ರಶ್ನಿಸುವ ಮನೋಭಾವನೆ ಹೊಂದಬೇಕಿದೆ ವಿಮರ್ಶೆಗೊಳಪಡಿಸದೆ ಯಾವುದನ್ನು ನಂಬಬಾರದು.

ಕುಷ್ಟಗಿ: ವೈಜ್ಞಾನಿಕ ಜೀವನ ನಡೆಸಲು ವಿಜ್ಞಾನ,ಗಣಿತ,ತಂತ್ರಜ್ಞಾನದ ಜ್ಞಾನ ಅಗತ್ಯವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಭರತೇಶ ಜೋಷಿ ಹೇಳಿದರು.

ಪಟ್ಟಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ನಡೆದ ವಿಶ್ವ ಪೈ ದಿನಾಚರಣೆಯ ಅಂಗವಾಗಿ ಭಾರತೀಯ ಗಣಿತಜ್ಞ ಆರ್ಯಭಟರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಯುಗ ಆರಂಭವಾಗಿದ್ದು, ಎಲ್ಲರೂ ತಂತ್ರಜ್ಞಾನ ಅರಿತುಕೊಳ್ಳಬೇಕಿದೆ ಎಂದ ಅವರು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಅಖಿಲ ಭಾರತಿಯ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ವಿರೇಶ ಬಂಗಾರಶೆಟ್ಟರ ಮಾತನಾಡಿ,ಪ್ರತಿಯೊಬ್ಬರು ಪ್ರಶ್ನಿಸುವ ಮನೋಭಾವನೆ ಹೊಂದಬೇಕಿದೆ ವಿಮರ್ಶೆಗೊಳಪಡಿಸದೆ ಯಾವುದನ್ನು ನಂಬಬಾರದು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು, ಗಣಿತ ಹಾಗೂ ವಿಜ್ಞಾನ ಜ್ಞಾನದಿಂದ ಸತ್ಯ ಅರಿಯಬಹುದಾಗಿದೆ ಎಲ್ಲರೂ ಆಸಕ್ತಿ ವಹಿಸಿ ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು ಎಂದರು.

ವಿಶ್ವದ ವಿಜ್ಞಾನ, ಗಣಿತ, ಮತ್ತು ಖಗೋಳ ಶಾಸ್ತ್ರಕ್ಕೆ ಪುರಾತನ ಋಷಿ ಮುನಿಗಳ ವಿಜ್ಞಾನಿಗಳ ಕೊಡುಗೆ ಅಪಾರವಾಗಿದ್ದು, ಭಾರತೀಯರಾಗಿ ನಾವು ಹೆಮ್ಮೆಪಡಬೇಕು ಆರ್ಯಭಟರಂತಹ ವಿಜ್ಞಾನಿ ಖಗೋಳ,ಗಣಿತ ಶಾಸ್ತ್ರಕ್ಕೆ ಅಪಾರ ಸೇವೆ ಸಲ್ಲಿಸಿ ಇಂದಿನ ಆಧುನಿಕ ಆವಿಷ್ಕಾರಗಳಿಗೆ ಅಡಿಪಾಯ ಹಾಕಿದವರು ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಅಮರೇಗೌಡ ಪಾಟೀಲ ಜಾಲಿಹಾಳ, ರವೀಂದ್ರ ಬಾಕಳೆ, ಶ್ರೀಧರ ಘೋರ್ಪಡೆ, ಅಭಿನಂದನ ಗೋಗಿ, ಬಸವರಾಜ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಕುಲ ಮಾದರಿ ಶಿಕ್ಷಣದ ಅಗತ್ಯ: ನಿವೃತ್ತ ಶಿಕ್ಷಕ ಮಾಸಣಗಿ
ಅಸಮಾನತೆಯ ಬದುಕಿಗೆ ವಿದಾಯ ಹೇಳಿ: ಮಹಾಂತೇಶ ಆರಾಧ್ಯಮಠ